ಪ್ರಾಥಮಿಕ ಆರೋಗ್ಯ ಕೇಂದ್ರ 24X7 ಸೇವೆಯ ಸಿಬ್ಬಂದಿ ನೇಮಕ ಮಾಡುವ ಮೂಲಕ ಕಾಯಂ ವೈದ್ಯರು ಉತ್ತಮ ಸೇವೆ ನೀಡಬೇಕು ಎಂದು ಆಗ್ರಹಿಸಿ ಬಾಗಲಕೋಟೆ ಜಿಲ್ಲೆಯ ಮುಧೋಳ ತಾಲೂಕಿನ ಮೆಟಗುಡ್ಡದ ಗ್ರಾಮಸ್ಥರು, ಪಿಎಚ್‌ಸಿ ತಾಲೂಕು ಆರೋಗ್ಯಾಧಿಕಾರಿ ಡಾ ವೆಂಕಟೇಶ ಮಲಘಾಣ ಅವರಿಗೆ ಮನವಿ ಸಲ್ಲಿಸಿದರು.
“ಹಲಕಿ, ಮೆಟಗುಡ್ಡ, ನಿಂಗಾಪೂರ, ಚಿಚಖಂಡಿ ಕೆಡಿ, ಗುಲಗಾಲಜಂಬಗಿ, ರೂಗಿ, ಬಳ್ಳೂರು ಗ್ರಾಮಸ್ಥರು ಈ ಪ್ರಾಥಮಿಕ ಆರೋಗ್ಯ ಕೇಂದ್ರವನ್ನು ಅವಲಂಬಿಸಿದ್ದಾರೆ. ಹಿಂದೆ ಈ ಆಸ್ಪತ್ರೆಯಲ್ಲಿ ವರ್ಷಕ್ಕೆ ನೂರಾರು ಹೆರಿಗೆ ಮಾಡಿಸಿ, ಜನರಿಗೆ ಅನುಕೂಲ ಕಲ್ಪಿಸಲಾಗಿತ್ತು. ಆದರೆ ಕಳೆದ ವರ್ಷದಿಂದ 24X7 ಸೇವೆ ಅಲಭ್ಯವಾಗಿದೆ. ಇದನ್ನು ಸರಿಪಡಿಸಬೇಕು ಮತ್ತು ವೈದ್ಯರನ್ನು ನೇಮಿಸಬೇಕು” ಎಂದು ಗ್ರಾಮಸ್ಥರು ಆಗ್ರಹಿಸಿದರು.
ಈ ಸುದ್ದಿ ಓದಿದ್ದೀರಾ? ಗುಲಬರ್ಗಾ ವಿವಿ : ಪ್ರಥಮ, ದ್ವಿತೀಯ, ತೃತೀಯ ರ‍್ಯಾಂಕ್ ಪಡೆದ ಕರ್ನಾಟಕ ಕಾಲೇಜಿನ ವಿದ್ಯಾರ್ಥಿನಿಯರು
ಈ ವೇಳೆ ಡಾ.ವೆಂಕಟೇಶ ಮಲಘಾಣ ಸ್ಥಳಕ್ಕೆ ಭೇಟಿ ನೀಡಿ, ಅಹವಾಲು ಸ್ವೀಕರಿಸಿ ಮುಂದಿನ ಕ್ರಮಕ್ಕೆ ಪ್ರಯತ್ನಿಸಲಾಗುವುದೆಂಬ ಭರವಸೆ ನೀಡಿದರು.
ಪ್ರಮುಖರಾದ ವೆಂಕಣ್ಣ ಹುನಸಿಕಟ್ಟಿ, ನ್ಯಾಯವಾದಿ ಯಲ್ಲಪ್ಪ ಹೆಗಡೆ, ಸಗರಪ್ಪ ಮಾಸರಡ್ಡಿ, ಸಿದ್ದಪ್ಪಮುಳ್ಳೂರ, ಇಸ್ಮಾಯಿಲ್ ಕರೋಲಿ, ರಮೇಶ ಹುನಸಿಕಟ್ಟಿ, ವೆಂಕಪ್ಪ ಯಾದವಾಡ ಇದ್ದರು.