ಧನಕರ್ ರಾಜೀನಾಮೆ ಹಿಂದಿದೆಯೇ ಅಧಿಕಾರದಾಹಿ BJPಯ ಬಿಹಾರ ಚುನಾವಣಾ ಲೆಕ್ಕಾಚಾರ?

Date:

Advertisements
ಚುನಾವಣೆಗಳನ್ನು ಗೆಲ್ಲುವುದು, ಅಧಿಕಾರ ಸ್ಥಾಪಿಸುವುದು ಬಿಜೆಪಿಯ ಪ್ರಧಾನ ಗುರಿ. ಅದಕ್ಕಾಗಿ, ಬಿಜೆಪಿ ಎಂತಹ ಕೃತ್ಯಕ್ಕೆ ಬೇಕಾದರು ಕೈಹಾಕುತ್ತದೆ. ಹಾಗಾಗಿ ಧನಕರ್ ರಾಜೀನಾಮೆಯ ಹಿಂದೆ ಒಳಜಗಳ, ಸಿಟ್ಟು ಮಾತ್ರವಲ್ಲದೆ, ಬಿಜೆಪಿಯ ಚುನಾವಣಾ ಲೆಕ್ಕಾಚಾರವೂ ಇದೆ.

ಭಾರತದ ಉಪರಾಷ್ಟ್ರಪತಿ ಜಗದೀಪ್ ಧನಕರ್ ಅವರು ಆರೋಗ್ಯ ಕಾರಣ ನೀಡಿ ಸೋಮವಾರ ದಿಢೀರ್ ರಾಜೀನಾಮೆ ನೀಡಿದ್ದಾರೆ. ಅವರ ರಾಜೀನಾಮೆಯನ್ನು ರಾಷ್ಟ್ರಪತಿ ದ್ರೌಪದಿ ಮುರ್ಮು ಅವರು ಅಷ್ಟೇ ತ್ವರಿತವಾಗಿ ಅಂಗೀಕರಿಸಿದ್ದಾರೆ. ಇದೀಗ, ಧನಕರ್ ಅವರ ಕಚೇರಿಗೆ ಕೇಂದ್ರ ಸರ್ಕಾರವು ಬೀಗವನ್ನೂ ಜಡಿದಿದೆ. ಕೂಡಲೇ ಸರ್ಕಾರ ನಿವಾಸ ಖಾಲಿ ಮಾಡುವಂತೆ ನೋಟಿಸ್‌ಅನ್ನೂ ನೀಡಲಾಗಿದೆ. ಈ ಬೆಳವಣಿಗೆಗಳು ಧನಕರ್ ರಾಜೀನಾಮೆಯ ಸುತ್ತ ನಾನಾ ಪ್ರಶ್ನೆಗಳನ್ನು ಹುಟ್ಟುಹಾಕಿದೆ. ಮೋದಿ-ಶಾ ನೇತೃತ್ವದ ಬಿಜೆಪಿಯೇ ರಾಜೀನಾಮೆ ನೀಡುವಂತೆ ಒತ್ತಡ ಹಾಕಿತ್ತೇ? ಧನಕರ್ ಮತ್ತು ಕೇಂದ್ರ ಸರ್ಕಾರದ ನಡುವಿನ ಆಂತರಿಕ ಜಗಳ ಕಾರಣವೇ? ಅವರ ರಾಜೀನಾಮೆ ಹಿಂದೆ ಬಿಜೆಪಿಗೆ ಬಿಹಾರ ಚುನಾವಣೆಯ ಲೆಕ್ಕಾಚಾರಗಳಿವೆಯೇ ಎಂಬ ಪ್ರಶ್ನೆಗಳನ್ನು ಹುಟ್ಟುಹಾಕಿವೆ.

ಅಂದಹಾಗೆ, ಜಗದೀಪ್ ಧನಕರ್ ಅವರು ಅನುಭವಿ ರಾಜಕಾರಣಿ. ಜನತಾದಳದಲ್ಲಿ ಮಾಜಿ ಪ್ರಧಾನಿ ಚಂದ್ರಶೇಖರ್ ಅವರ ಗರಡಿಯಲ್ಲಿ ಪಳಗಿದ್ದ ಧನಕರ್, ಸ್ವಾಭಾವತಃ ತಮ್ಮ ಆಕ್ರಮಣಕಾರಿ ಹೇಳಿಕೆಗಳನ್ನು ಹಿಂಪಡೆದುಕೊಳ್ಳಲು ಇಚ್ಛಿಸದವರು. ಯಾವುದೇ ಸಂದರ್ಭದಲ್ಲಿ ತಮ್ಮ ಅಭಿಪ್ರಾಯವನ್ನು ಯಾವುದೇ ಹಿಂಜರಿಕೆಯಿಲ್ಲದೆ, ವ್ಯಕ್ತಪಡಿಸುವವರು. ಆದರೂ, 2003ರಲ್ಲಿ ಜಾತ್ಯತೀತತೆಗೆ ತಿಲಾಂಜಲಿ ಇಟ್ಟು, ಕೋಮುವಾದಿ ಬಿಜೆಪಿ ಸೇರಿದರು. ಆರ್‌ಎಸ್‌ಎಸ್‌-ಬಿಜೆಪಿಯ ಕೋಮು ವ್ಯವಸ್ಥೆಯ ಭಾಗವಾದವರು. ಮಾತ್ರವಲ್ಲದೆ, ಮೋದಿ-ಶಾ ಜೋಡಿ ಆಣತಿಯಂತೆ ನಡೆದುಕೊಳ್ಳಲು ಆರಂಭಿಸಿದ್ದರು. ಬಳಿಕ, ಕೇಂದ್ರ-ಧನಕರ್ ನಡುವಿನ ಸಂಬಂಧ ಜಟಿಲವೂ ಆಗಿತ್ತು.

ಮೋದಿ-ಶಾ ಜೋಡಿಯ ಪ್ರೀತಿಪಾತ್ರನಿಂದ ಸಿಟ್ಟಿಗೆ ಗುರಿಯಾದ ಧನಕರ್

2019 ಮತ್ತು 2022ರ ನಡುವೆ ಪಶ್ಚಿಮ ಬಂಗಾಳದ ಗವರ್ನರ್ ಆಗಿದ್ದ ಧನಕರ್, ಟಿವಿ ಕಾರ್ಯಕ್ರಮಗಳಲ್ಲಿ ಭಾಗವಹಿಸಿ, ಮಮತಾ ಬ್ಯಾನರ್ಜಿ ಸರ್ಕಾರವನ್ನು ನಿರಂತರವಾಗಿ ಟೀಕಿಸುತ್ತಿದ್ದರು. ಇದು ಸಾಂವಿಧಾನಿಕ ಹುದ್ದೆಯಲ್ಲಿರುವ ರಾಜ್ಯಪಾಲರ ಅನಿರೀಕ್ಷಿತ ನಡೆಯಾಗಿತ್ತು. ಆದರೆ, ಆ ಸಮಯದಲ್ಲಿ ಮಮತಾ ಸರ್ಕಾರದ ಮೇಲಿನ ಧನಕರ್ ದಾಳಿಯು ಕೇಂದ್ರಕ್ಕೆ ಖುಷಿ ನೀಡುತ್ತಿತ್ತು. ಬಿಜೆಪಿಯ ರಾಜಕೀಯಕ್ಕೆ ಸಹಾಯವೂ ಆಗಿತ್ತು. ಮಮತಾ ವಿರುದ್ಧ ಮಾತನಾಡುವಲ್ಲಿ ಧನಕರ್‌ಗೆ ಇದ್ದ ಆಸಕ್ತಿಯು ಬಿಜೆಪಿ ನಾಯಕತ್ವ ಮತ್ತು ಮೋದಿ-ಶಾ ಜೋಡಿಗೆ ಇಷ್ಟವಾಗುತ್ತಿತ್ತು. ಇದು ಮೋದಿ ಸರ್ಕಾರವು ಧನಕರ್‌ರನ್ನು ಉಪರಾಷ್ಟ್ರಪತಿ ಹುದ್ದೆಗೆ ಏರಿಸಲು ಒಂದು ಕಾರಣವೂ ಆಗಿತ್ತು.

ಉಪರಾಷ್ಟ್ರಪತಿಯಾದ ಬಳಿಕ, ಧನಕರ್ – ತಮ್ಮ ವಾಗ್ದಾಳಿಯನ್ನು ಮಮತಾ ಸರ್ಕಾರದಿಂದ ನ್ಯಾಯಾಂಗದೆಡೆಗೆ ಹೊರಳಿಸಿದರು. ಜೊತೆಗೆ, ರಾಜ್ಯಸಭೆಯಲ್ಲಿ ವಿಪಕ್ಷಗಳ ಧ್ವನಿಯನ್ನು ಎಷ್ಟು ಸಾಧ್ಯವೇ ಅಷ್ಟು ನಿಯಂತ್ರಿಸುತ್ತಿದ್ದರು. ನ್ಯಾಯಾಂಗವನ್ನು ಆಗಾಗ್ಗೆ ಟೀಕೆ ಮಾಡುತ್ತಿದ್ದ ಧನಕರ್, ”ರಾಷ್ಟ್ರಪತಿ ಮತ್ತು ರಾಜ್ಯಪಾಲರಿಗೆ ಮಸೂದೆ ವಿಲೇವಾರಿಗೆ ಸಮಯ ನಿಗದಿ ಮಾಡಲು ಸುಪ್ರೀಂ ಕೋರ್ಟ್‌ ಅಥವಾ ನ್ಯಾಯಾಧೀಶರು ಯಾರು? ಅವರಿಗೆ ತಮ್ಮ ಅಧಿಕಾರ ಮಿತಿಗಳ ಅರಿವಿರಬೇಕು. ಪ್ರಜಾಪ್ರಭುತ್ವದಲ್ಲಿ ಸಂಸತ್ತೇ ಸಾರ್ವಭೌಮ” ಎಂದು ನಿರಂತರವಾಗಿ ಪ್ರತಿಪಾದಿಸುತ್ತಿದ್ದರು.

ಆರಂಭದಲ್ಲಿ, ನ್ಯಾಯಾಂಗದ ಮೇಲಿನ ಧನಕರ್ ಹೇಳಿಕೆಗಳು ಮೋದಿ ಸರ್ಕಾರಕ್ಕೆ ಇಷ್ಟವಾದರೂ, ಕಾಲಾನಂತರ, ಧನಕರ್‌ರ ಹೇಳಿಕೆಗಳು ಇಡೀ ನ್ಯಾಯಾಂಗವನ್ನು ಸರ್ಕಾರದಿಂದ ದೂರಮಾಡುತ್ತಿವೆ ಎಂಬ ಭಯ ಹುಟ್ಟುಹಾಕಿತು. ಈ ಭಯವು ಧನಕರ್ ಅವರನ್ನು ನಿಯಂತ್ರಿಸಲು ಮೋದಿ-ಶಾ ಜೋಡಿ ಮುಂದಾಗುವಂತೆ ಮಾಡಿತ್ತು. ಇದು, ಧನಕರ್ ಮತ್ತು ಕೇಂದ್ರದ ನಡುವಿನ ಒಳಜಗಳಕ್ಕೆ ನಾಂದಿ ಹಾಡಿತು.

ಇದೇ ವರ್ಷದ ಏಪ್ರಿಲ್ ವೇಳೆಗೆ, ಧನಕರ್ ಮತ್ತು ಕೇಂದ್ರ ಸರ್ಕಾರದ ನಡುವಿನ ತಿಕ್ಕಾಟ ಬಿಗಡಾಯಿಸಿತು. ತಮ್ಮನ್ನು ತಾವು ರೈತ ನಾಯಕನೆಂದು ಭಾವಿಸಿದ್ದ ಧನಕರ್, ರೈತರ ವಿಷಯದ ಬಗ್ಗೆ ಸಾರ್ವಜನಿಕವಾಗಿ ಮಾತನಾಡಲಾರಂಭಿಸಿದರು. ರೈತರ ವಿಚಾರವಾಗಿ ಸರ್ಕಾರದ ನೀತಿಗಳನ್ನು ಪ್ರಶ್ನಿಸಲಾರಂಭಿಸಿದರು. ಇದೆಲ್ಲವೂ ಧನಕರ್ ಮೋದಿ-ಶಾ ಜೋಡಿಯ ಕೆಂಗಣ್ಣಿಗೆ ಗುರಿಯಾಗುವಂತೆ ಮಾಡಿತ್ತು.

ಅಂತಿಮವಾಗಿ, ಸೋಮವಾರದಂದು ಮಾನ್ಸೂನ್ ಅಧಿವೇಶನ ಆರಂಭವಾದಾಗ ವಿರೋಧ ಪಕ್ಷವು, ನ್ಯಾಯಮೂರ್ತಿ ಯಶವಂತ್ ಮತ್ತು ನ್ಯಾಯಮೂರ್ತಿ ಶೇಖರ್ ಯಾದವ್‌ರನ್ನು ಮಹಾಭಿಯೋಗ ಮಾಡಲು ಮಂಡಿಸಿದ ನಿರ್ಣಯವನ್ನು ಧನಕರ್ ಸ್ವೀಕರಿಸಿದ್ದು, ಮೋದಿ ಸರ್ಕಾರವನ್ನು ಸಿಟ್ಟಿಗೇರಿಸಿತು.

ಅದೇ ಸೋಮವಾರ ಸಂಜೆ 4:00 ಗಂಟೆಗೆ ನಡೆದ ಧನಕರ್ ಒಳಗೊಂಡ ಸರ್ಕಾರದ ಸಭೆ ನಡೆಯಿತು. ಸಭೆಯಲ್ಲಿ ಬಿಜೆಪಿ ಅಧ್ಯಕ್ಷ, ರಾಜ್ಯಸಭೆಯಲ್ಲಿ ಬಿಜೆಪಿ ನಾಯಕ ಜೆ.ಪಿ.ನಡ್ಡಾ ಮತ್ತು ಸಂಸದೀಯ ಸಚಿವ ಕಿರಣ್ ರಿಜಿಜುನ ಸಿಟ್ಟಿನಿಂದ ಭಾಗಿಯಾಗಲಿಲ್ಲ. ಅದು ಧನಕರ್ ‘ಆರೋಗ್ಯ’ದ ಮೇಲೆ ಪರಿಣಾಮ ಬೀರಿ, ಹೊರನಡೆಯುವುದು ಸ್ಪಷ್ಟವಾಯಿತು ಎಂದು ಹೇಳಲಾಗಿದೆ.

ಈ ಬೆಳವಣಿಗೆಯಲ್ಲಿ ಸರ್ಕಾರವೇ ರಾಜೀನಾಮೆ ನೀಡುವಂತೆ ಧನಕರ್ ಮೇಲೆ ಒತ್ತಡ ಹಾಕಿತೋ ಅಥವಾ ಸಭೆಯಲ್ಲಿ ಕೋಪಗೊಂಡ ಧನಕರ್ ದಿಢೀರ್ ರಾಜೀನಾಮೆಗೆ ಮುಂದಾದರೋ, ಈಗಲೂ ಸತ್ಯ ಹೊರಬಂದಿಲ್ಲ.

ರಾಜೀನಾಮೆ ಹಿಂದೆ ಬಿಜೆಪಿಯ ಬಿಹಾರ ಚುನಾವಣೆ ಲೆಕ್ಕಾಚಾರ?

ಚುನಾವಣೆಗಳನ್ನು ಗೆಲ್ಲುವುದು, ಅಧಿಕಾರ ಸ್ಥಾಪಿಸುವುದು, ಅಧಿಕಾರದಲ್ಲಿರುವುದು, ಅಧಿಕಾರದೊಂದಿಗೆ ತನ್ನ ಕೋಮುವಾದಿ ಮತ್ತು ಮನುವಾದಿ ಸಿದ್ದಾಂತವನ್ನು ದೇಶಾದ್ಯಂತ ಬಿತ್ತುವುದೇ ಬಿಜೆಪಿಯ ಪ್ರಧಾನ ಗುರಿ. ಅದಕ್ಕಾಗಿ, ಬಿಜೆಪಿ ಎಂತಹ ಕೃತ್ಯಕ್ಕೆ ಬೇಕಾದರು ಕೈಹಾಕುತ್ತದೆ ಎನ್ನುವುದು ಜನಜನಿತ. ಹಾಗಾಗಿ ಧನಕರ್ ರಾಜೀನಾಮೆಯ ಹಿಂದೆ ಒಳಜಗಳ, ಸಿಟ್ಟು ಮಾತ್ರವಲ್ಲದೆ, ಬಿಜೆಪಿಯ ಚುನಾವಣಾ ಲೆಕ್ಕಾಚಾರವೂ ಇದೆ ಎಂದು ಹೇಳಲಾಗುತ್ತಿದೆ.

ಬಿಹಾರ ಚುನಾವಣೆಯಲ್ಲಿ ಬಿಹಾರ ಮುಖ್ಯಮಂತ್ರಿ ನಿತೀಶ್‌ ಕುಮಾರ್ ಅವರ ಜೆಡಿಯು ಹಂಗಿಲ್ಲದೆ, ಸ್ವತಂತ್ರವಾಗಿ ಸರ್ಕಾರ ರಚನೆ ಮಾಡಬೇಕೆಂಬ ಹಂಬಲ ಬಿಜೆಪಿಯಲ್ಲಿದೆ. ಸ್ವತಂತ್ರವಾಗಿ ಸರ್ಕಾರ ರಚಿಸುವ ಉಮೇದು ಹೊಂದಿರುವ ಬಿಜೆಪಿ, ನಾನಾ ತಂತ್ರಗಳನ್ನು ಹೆಣೆಯುತ್ತಿದೆ. ಜಾತಿ ಸಮೀಕರಣದೊಂದಿಗೆ ಬಿಹಾರ ಗೆಲ್ಲಲು ಬಿಜೆಪಿ ಲೆಕ್ಕಾಚಾರ ಹಾಕುತ್ತಿದೆ.

ಬಿಹಾರ – ಒಬಿಸಿ (ಇತರ ಹಿಂದುಳಿದ ಜಾತಿ) ಮತ್ತು ಇಬಿಸಿ (ಅತೀ ಹಿಂದುಳಿದ ಜಾತಿ) ಪ್ರಾಬಲ್ಯವಿರುವ ರಾಜ್ಯ. ಯಾದವ್, ಕುರ್ಮಿ, ಕೊಯಿರಿ, ತೆಲಿ, ಕಾನು, ಧನುಕ್ ಮತ್ತು ನಿಷಾದ್, ಮಲ್ಲಾಹ್, ಕೇವತ್, ಬಿಂದ್, ನಾಯ್, ಲೊಹಾರ್ ಸಮುದಾಯಗಳು ಬಿಹಾರದ ಒಟ್ಟು ಜನಸಂಖ್ಯೆಯಲ್ಲಿ 80%ರಿಂದ 85%ರಷ್ಟು ಪ್ರಾಬಲ್ಯವನ್ನು ಹೊಂದಿವೆ.

ಮುಂದಿನ ವಿಧಾನಸಭಾ ಚುನಾವಣೆಯಲ್ಲಿ ಜೆಡಿಯುಅನ್ನು ಬದಿಗೊತ್ತಿ, ವಿಪಕ್ಷಗಳ ಮಹಾಘಟಬಂಧನ್‌ಅನ್ನು ಎದುರಿಸಿ, ಬಿಹಾರವನ್ನು ಗೆಲ್ಲಲು ಪ್ರಬಲ ವರ್ಗಗಳಾದ ಒಬಿಸಿ ಮತ್ತು ಇಬಿಸಿ ಸಮುದಾಯಗಳನ್ನು ಬಿಜೆಪಿ ಸೆಳೆಯಬೇಕಿದೆ. ಅದಕ್ಕಾಗಿ, ಈ ಸಮುದಾಯಗಳ ಪ್ರಮುಖ ನಾಯಕರನ್ನು ಉಪರಾಷ್ಟ್ರಪತಿ ಸ್ಥಾನಕ್ಕೇರಿಸಿ, ಬಿಹಾರ ಜನರ ಮನದಲ್ಲಿ ಜಾಗ ಗಿಟ್ಟಿಸಿಕೊಳ್ಳುವುದು ಬಿಜೆಪಿ ಗುರಿ ಎಂದು ಹೇಳಲಾಗಿದೆ.

ಈ ಲೇಖನ ಓದಿದ್ದೀರಾ?: ಮುಂಗಾರು ಅಧಿವೇಶನದ ವೇಳೆಯೇ ಮೋದಿ ವಿದೇಶ ಪ್ರವಾಸ: ವಿಪಕ್ಷಗಳ ಎದುರಿಸಲಾಗದೆ ಪಲಾಯನವೇ?

 ಧನಕರ್‌ರ ರಾಜೀನಾಮೆಯ ಬಳಿಕ, ಉಪರಾಷ್ಟ್ರಪತಿ ಸ್ಥಾನಕ್ಕೆ ಒಬಿಸಿ ಸಮುದಾಯದ ನಾಯಕನನ್ನು ಬಿಜೆಪಿ ಕಣಕ್ಕಿಳಿಸಲಿದೆ ಎಂಬ ಚರ್ಚೆಗಳು ನಡೆಯುತ್ತಿವೆ. ಎನ್‌ಡಿಎಯಿಂದ ಉಪರಾಷ್ಟ್ರಪತಿ ರೇಸ್‌ನಲ್ಲಿ ಬಿಹಾರದ ಮಾಜಿ ಮುಖ್ಯಮಂತ್ರಿ, ಭಾರತ ರತ್ನ ಪ್ರಶಸ್ತಿ ವಿಜೇತ ಕರ್ಪೂರಿ ಠಾಕೂರ್‌ ಅವರ ಮಗ ರಾಮ್‌ನಾಥ್ ಠಾಕೂರ್ ಅವರ ಹೆಸರು ಮುಂಚೂಣಿಯಲ್ಲಿದೆ. ಕೇಂದ್ರ ಸರ್ಕಾರದಲ್ಲಿ ಕೃಷಿ ರಾಜ್ಯ ಸಚಿವರೂ ಆಗಿರುವ ಠಾಕೂರ್, ಬಿಹಾರದವರು. ಒಬಿಸಿ ಸಮುದಾಯಕ್ಕೆ ಸೇರಿದವರು. ಬಿಹಾರ ರಾಜಕೀಯದಲ್ಲಿ ಗಣನೀಯ ಪ್ರಭಾವ ಹೊಂದಿರುವವರು. ಅವರೇ ಎನ್‌ಡಿಎಯಿಂದ ಸ್ಪರ್ಧಿಸಿ, ಮುಂದಿನ ಉಪರಾಷ್ಟ್ರಪತಿ ಆಗಲಿದ್ದಾರೆ ಎಂಬ ಅಭಿಪ್ರಾಯಗಳು ವ್ಯಕ್ತವಾಗುತ್ತಿವೆ.

ರಾಮ್‌ನಾಥ್‌ ಠಾಕೂರ್ ಅಲ್ಲದೆ, ಬಿಜೆಪಿ ಹಾಲಿ ಅಧ್ಯಕ್ಷ ಜೆ.ಪಿ. ನಡ್ಡಾ, ರಾಜಸ್ಥಾನದ ಮಾಜಿ ಮುಖ್ಯಮಂತ್ರಿ ವಸುಂಧರಾ ರಾಜೆ, ಕೇರಳದ ಮಾಜಿ ರಾಜ್ಯಪಾಲ ಆರಿಫ್ ಮುಹಮ್ಮದ್ ಖಾನ್, ಕೇಂದ್ರದ ಮಾಜಿ ಸಚಿವ ಮುಖ್ತಾರ್ ಅಬ್ಬಾಸ್ ನಖ್ವಿ ಹಾಗೂ ರಾಜ್ಯಸಭೆಯ ಉಪಸಭಾಪತಿ ಹರಿವಂಶ ನಾರಾಯಣ್ ಸಿಂಗ್ ಕೂಡ ಈ ಸ್ಪರ್ಧೆಯಲ್ಲಿದ್ದಾರೆ.

ಆದಾಗ್ಯೂ, ಈಗ ಬಿಹಾರ ಚುನಾವಣೆ ನಡೆಯುತ್ತಿರುವ ಕಾರಣ ಮತ್ತು ಒಬಿಸಿ ಸಮುದಾಯಗಳೇ ಪ್ರಬಲವಾಗಿರುವ ತಮಿಳುನಾಡು, ಪಶ್ಚಿಮ ಬಂಗಾಳ, ಕೇರಳ ರಾಜ್ಯಗಳಲ್ಲಿಯೂ ಇನ್ನೊಂದು ವರ್ಷದೊಳಗೆ ಚುನಾವಣೆಗಳು ನಡೆಯಲಿರುವ ಕಾರಣ, ಒಬಿಸಿ ಸಮುದಾಯದ ರಾಮ್‌ನಾಥ್ ಠಾಕೂರ್ ಅವರಿಗೆ ಬಿಜೆಪಿ ಮಣೆ ಹಾಕುವ ಸಾಧ್ಯತೆಗಳಿವೆ. ಜೊತೆಗೆ, ಕೇರಳ ಮೂಲದ ಶಶಿತರೂರ್ (ಪ್ರಸ್ತುತ ಕಾಂಗ್ರೆಸ್‌ನಲ್ಲಿದ್ದಾರೆ) ಅವರನ್ನು ಬಿಜೆಪಿಗೆ ಕರೆತಂದು, ಅವರನ್ನು ಕಣಕ್ಕಿಳಿಸಲು ಬಿಜೆಪಿ ನಾಯಕರು ಯೋಜಿಸುತ್ತಿದ್ದಾರೆ ಎಂದೂ ಹೇಳಲಾಗುತ್ತಿದೆ. ಶಶಿ ತರೂರ್ ಆಯ್ಕೆಯ ಹಿಂದೆ, ಕೇರಳದ ಚುನಾವಣೆಯ ಲೆಕ್ಕಾಚಾರಗಳೂ ಇವೆ ಎನ್ನಲಾಗಿದೆ.

ಅಂದರೆ, ಧನಕರ್ ಅವರಿಂದ ಬಿಜೆಪಿಗೆ ಲಾಭವಿಲ್ಲ ಎಂದು ಗೊತ್ತಾಗುತ್ತಿದ್ದಂತೆ, ಭಾರೀ ಅವಮಾನಕರವಾಗಿ ಹೊರಗಟ್ಟಿ, ಲಾಭವಾಗುವ ವ್ಯಕ್ತಿಯತ್ತ ಕೇಂದ್ರೀಕರಿಸಿದೆ. ಬಿಜೆಪಿಗೆ ವ್ಯಕ್ತಿಗಳು, ಸಾಂವಿಧಾನಿಕ ಹುದ್ದೆಗಳ ಘನತೆಗಿಂತ ಚುನಾವಣೆ ಗೆಲ್ಲುವುದು ಮುಖ್ಯ. ಅಧಿಕಾರ ಹಿಡಿಯುವ ಹಪಾಹಪಿ.

ಈ ಮಾಧ್ಯಮ ನಿಮ್ಮದು. ನಿಮ್ಮ ಬೆಂಬಲವೇ ನಮ್ಮ ಬಲ. ವಂತಿಗೆ ನೀಡುವುದರ ಮೂಲಕ ಕೈಜೋಡಿಸಿ, ಸತ್ಯ ನ್ಯಾಯ ಪ್ರೀತಿಯ ಮೌಲ್ಯಗಳನ್ನು ಹಂಚಲು ಜೊತೆಯಾಗಿ. ಸಹಾಯ ಅಥವಾ ಬೆಂಬಲ ನೀಡಲು ದಯವಿಟ್ಟು +91 9035362958 ಅನ್ನು ಸಂಪರ್ಕಿಸಿ.

ಪೋಸ್ಟ್ ಹಂಚಿಕೊಳ್ಳಿ:

LEAVE A REPLY

Please enter your comment!
Please enter your name here

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

‘ನನ್ನ ಗಂಡನನ್ನು ಭೇಟಿಯಾಗುವ ಅರ್ಹತೆ ನನಗಿಲ್ಲವೇ?’: ರಾಷ್ಟ್ರಪತಿ, ಮೋದಿಗೆ ಪತ್ರ ಬರೆದ ವಾಂಗ್ಚುಕ್ ಪತ್ನಿ

ಲಡಾಖ್‌ಗೆ ರಾಜ್ಯ ಸ್ಥಾನಮಾನ ನೀಡಬೇಕು ಎಂಬುದು ಸೇರಿದಂತೆ ಹಲವು ಬೇಡಿಕೆಗಳನ್ನು ಇಟ್ಟುಕೊಂಡು...

ಯುವಜನರಿಗಾಗಿ ಪ್ರಾಣವನ್ನೇ ತ್ಯಾಗ ಮಾಡುತ್ತೇನೆ: ಉತ್ತರಾಖಂಡ ಮುಖ್ಯಮಂತ್ರಿ ಪುಷ್ಕರ್ ಸಿಂಗ್ ಧಾಮಿ

ಸುಡುವ ಬಿಸಿಲಿನಲ್ಲಿ ಕುರಿತು ಯುವಜನರು ತಮ್ಮ ಹಕ್ಕೊತ್ತಾಯಗಳ ಈಡೇರಿಕೆಗಾಗಿ ಹೋರಾಟ ನಡೆಸುತ್ತಿದ್ದಾರೆ....

ದೆಹಲಿ ಶಾಲೆಗಳಲ್ಲಿ RSS ಬೋಧನೆ: ಮಕ್ಕಳ ಎಳೆ ಮನಸ್ಸಲ್ಲಿ ಕೋಮುದ್ವೇಷ ಬಿತ್ತುವ ಹುನ್ನಾರ!

ಕೋಮುವಾದಿ, ಕೋಮುದ್ವೇಷಿ, ಸಮಾಜಘಾತುಕ ಸಂಘಟನೆಯ ಬಗ್ಗೆ ಶಾಲೆಗಳಲ್ಲಿ ಬೋಧಿಸುವುದು ಎಳೆ ಮನಸ್ಸುಗಳಲ್ಲಿ...

ಬಾಪೂ ಎಂಬ ಪವಾಡದ ಅನ್ವೇಷಣೆ…

ಇಂದು ರಾಷ್ಟ್ರಪಿತ ಬಾಪೂ ಜನ್ಮದಿನ. ಆ ನೆನಪಿನಲ್ಲಿ ಸದ್ಯದಲ್ಲೇ ಹೊರಬರಲಿರುವ ಎನ್.ಎಸ್.‌...

Download Eedina App Android / iOS

X