ಗ್ಯಾರಂಟಿ ಯೋಜನೆಯಡಿಯಲ್ಲಿ ನೀಡುತ್ತಿರುವ ಅಕ್ಕಿಯನ್ನು ಕಾಳಸಂತೆಕೋರರು ಪಡಿತರ ಚೀಟಿದಾರರಿಂದ ಕಡಿಮೆ ದರದಲ್ಲಿ ಖರೀದಿಸಿ, ಹೆಚ್ಚಿನ ದರಕ್ಕೆ ಮಾರಾಟ ಮಾಡುವ ಸಂಭವವಿರುವುದರಿಂದ, ಇದನ್ನು ತಡೆಯಲು ಉತ್ತರಕನ್ನಡ ಜಿಲ್ಲಾಧಿಕಾರಿ ಕೆ.ಲಕ್ಷ್ಮೀಪ್ರಿಯ ಅವರು ತಾಲೂಕು ಮಟ್ಟದಲ್ಲಿ ಟಾಸ್ಕ್ ಪೋರ್ಸ್ ರಚಿಸಿಲು ಆದೇಶಿಸಿದ್ದಾರೆ.
ತಾಲೂಕು ಮಟ್ಟದಲ್ಲಿ ಆರಕ್ಷಕ ಇಲಾಖೆ ಒಳಗೊಂಡಂತೆ ತಪಾಸಣೆ ತಂಡವನ್ನು ರಚನೆ ಮಾಡಿದ್ದು, ಈ ತಂಡದಲ್ಲಿ ತಾಲೂಕು ತಹಶೀಲ್ದಾರರು ಅಧ್ಯಕ್ಷರಾಗಿದ್ದು, ಆಹಾರ ಶಿರಸ್ತೇದಾರರು, ಪೊಲೀಸ್ ಉಪನಿರೀಕ್ಷಕರು, ಕಂದಾಯ ನಿರೀಕ್ಷಕರು, ವಾಣಿಜ್ಯ ತೆರಿಗೆ ಇಲಾಖೆ ಪರಿವೀಕ್ಷಕರು ಮತ್ತು ಮೋಟಾರ ವಾಹನ ನಿರೀಕ್ಷಕರು ಸದಸ್ಯರಾಗಿದ್ದು, ಆಹಾರ ನಿರೀಕ್ಷಕರು ಸದಸ್ಯ ಕಾರ್ಯದರ್ಶಿಯಾಗಿದ್ದಾರೆ.
ಈ ತಂಡದವರು ಪಡಿತರ ಅಕ್ಕಿ ಕಾಳಸಂತೆಯಲ್ಲಿ ಸಂಗ್ರಹಣೆ ಮತ್ತು ಮಾರಾಟವಾಗುವ ಮಾರ್ಗಗಳಾದ ಅಕ್ಕಿ ಮಿಲ್. ಹೊಟೇಲ್, ಕಿರಾಣಿ ಅಂಗಡಿಗಳು, ಗೋದಾಮು ಹಾಗೂ ಸಾರಿಗೆ ಮೂಲಕ ಮಾರ್ಗಾಂತರವಾಗುವುದನ್ನು ತಪಾಸಣೆ ಮಾಡಬೇಕು ಮತ್ತು ತಪಾಸಣೆ ಸಂದರ್ಭದಲ್ಲಿ ಪಡಿತರ ಸಂಗ್ರಹಣೆ ಮತ್ತು ಮಾರ್ಗಾಂತರ ಮಾಡುವುದು ಕಂಡುಬಂದರೆ ಆವಶ್ಯಕ ವಸ್ತುಗಳ ಕಾಯ್ದೆ 1955 ರಡಿಯಲ್ಲಿ ಪ್ರಕರಣ ದಾಖಲು ಮಾಡಿ, ಉಪನಿರ್ದೇಶಕರು ಆಹಾರ ನಾಗರಿಕ ಸರಬರಾಜು ಇಲಾಖೆ ಉತ್ತರ ಕನ್ನಡ ಕಾರವಾರ ಅವರಿಗೆ ವರದಿ ಸಲ್ಲಿಸುವಂತೆ ಜಿಲ್ಲಾಧಿಕಾರಿಗಳು ಸೂಚಿಸಿದ್ದಾರೆ.
ಇದನ್ನೂ ಓದಿ: ಉತ್ತರ ಕನ್ನಡ | ಕಾರಿನ ಮೇಲೆ ಮರ ಬಿದ್ದು ಮಹಿಳೆ ಸಾವು