ಬೀಚ್‌ನಲ್ಲಿ ಮುಳುಗಿ ಭಾರತೀಯ ಪ್ರಜೆಯೊಬ್ಬರು ಸಾವನ್ನಪ್ಪಿರುವ ಘಟನೆ ಅಮೆರಿಕದ ದಕ್ಷಿಣ ಕೆರೋಲಿನಾದಲ್ಲಿ ನಡೆದಿದೆ. ಜಾರ್ಜಿಯಾದ 49 ವರ್ಷದ ವ್ಯಕ್ತಿ ತನ್ನ ಪುತ್ರನೊಂದಿಗೆ ಹಿಲ್ಟನ್ ಹೆಡ್ ಐಲ್ಯಾಂಡ್‌ನ ಬ್ಯೂಫೋರ್ಟ್ ಕೌಂಟಿಯ ಬೀಚ್‌ಗೆ ತೆರಳಿದ್ದರು, ನೀರಿನ ಸುಳಿಯಲ್ಲಿ ಸಿಲುಕಿ ಮೃತಪಟ್ಟಿದ್ದಾರೆ ಎಂದು ವರದಿಯಾಗಿದೆ. ಮೃತ ಭಾರತೀಯ ವ್ಯಕ್ತಿಯನ್ನು ಸೌಮೆನ್ ಕುಂಡು ಎಂದು ಗುರುತಿಸಲಾಗಿದ್ದು, ಅವರು ಜಾರ್ಜಿಯಾದಲ್ಲಿ ವಾಸವಿದ್ದರು. ಅಟ್ಲಾಂಟಾದಲ್ಲಿರುವ ಭಾರತೀಯ ಕಾನ್ಸುಲೇಟ್ ಸೌಮೆನ್ ಕುಂಡು ಭಾರತೀಯ ಪ್ರಜೆ ಎಂದು ದೃಢಪಡಿಸಿದೆ.
