(ಮುಂದುವರಿದ ಭಾಗ..) ಬ್ರಿಟಿಷ್ ಸರ್ಕಾರವು ಭಾರತದ ಹೊಸ ಸಂವಿಧಾನಕ್ಕೆ ಅಂತಿಮ ರೂಪ ಕೊಡುವ ಸಲುವಾಗಿ ಚರ್ಚಿಸಲು ಭಾರತದ ಪ್ರತಿನಿಧಿಗಳನ್ನು ಲಂಡನ್ನಿನ ‘ದುಂಡು ಮೇಜಿನ ಸಮ್ಮೇಳನ’ಕ್ಕೆ ಆಹ್ವಾನಿಸಿತು. ಈ ಸಮ್ಮೇಳನವನ್ನು ಬ್ರಿಟನ್ನಿನ 5ನೇ ಜಾರ್ಜ್ ದೊರೆ 12ನೇ ನವೆಂಬರ್ 1930ರಂದು ಉದ್ಘಾಟಿಸಿದರು. ಸಮ್ಮೇಳನದಲ್ಲಿ ಅಸ್ಪೃಶ್ಯರ ಪ್ರತಿನಿಧಿಗಳಾಗಿ ಡಾ. ಅಂಬೇಡ್ಕರ್, ದಿವಾನ್ ಬಹದ್ದೂರ್ ಆರ್. ಶ್ರೀನಿವಾಸನ್ ಭಾಗವಹಿಸಿದ್ದರು. ದುಂಡು ಮೇಜಿನ ಸಮ್ಮೇಳನದ ಕಾರ್ಯವನ್ನು ಒಟ್ಟು ಒಂಭತ್ತು ಸಮಿತಿಗಳಿಗೆ ಹಂಚಲಾಗಿತ್ತು. ಅವುಗಳಲ್ಲಿ ‘ಅಲ್ಪಸಂಖ್ಯಾತರ ಸಮಿತಿ’ ಕೂಡ ಒಂದು. ಕೋಮು ಸಮಸ್ಯೆಗೆ ಪರಿಹಾರವನ್ನು…

ಡಾ. ಅಪ್ಪಗೆರೆ ಸೋಮಶೇಖರ್
ಡಾ.ಅಪ್ಪಗೆರೆ ಸೋಮಶೇಖರ್ ರಾಮನಗರ ಜಿಲ್ಲೆಯ, ಚನ್ನಪಟ್ಟಣ ತಾಲ್ಲೂಕಿನ ಅಪ್ಪಗೆರೆ ಗ್ರಾಮದ ಸೋಮಶೇಖರ್ ಅವರು ಮೈಸೂರು ವಿವಿಯಿಂದ ಕನ್ನಡ ಎಂ.ಎ. ಪದವಿ, 'ಡಾ. ಸಿದ್ದಲಿಂಗಯ್ಯ ಅವರ ಜೀವನ ಮತ್ತು ಸಾಹಿತ್ಯ: ಒಂದು ಅಧ್ಯಯನ' ವಿಷಯದ ಸಂಶೋಧನೆಗೆ ಪಿಎಚ್.ಡಿ. ಪದವಿ ಪಡೆದಿದ್ದಾರೆ. ನಡೆವ ನಡೆ, ಮೌನ ಮಾತು ಪ್ರತಿಭಟನೆ, ಸುಟ್ಟಾವು ಬೆಳ್ಳಿ ಕಿರಣ, ಸಂಬಂಜ ಅನ್ನೋದು ದೊಡ್ಡದು ಕನಾ, ಬಡವರ ನಗುವಿನ ಶಕ್ತಿ- ಡಾ.ಸಿದ್ದಲಿಂಗಯ್ಯ, ಡಾ.ರಾಜ್‌ಕುಮಾರ್, ಅಂತಃಕರಣ ಮೊದಲಾದ ಕೃತಿಗಳನ್ನು ಪ್ರಕಟಿಸಿದ್ದಾರೆ. ಸದ್ಯ ಕಲಬುರಗಿ ಕೇಂದ್ರೀಯ ವಿವಿಯಲ್ಲಿ ಪ್ರಾಧ್ಯಾಪಕರಾಗಿ ಸೇವೆ ಸಲ್ಲಿಸುತ್ತಿದ್ದಾರೆ.