ಉತ್ತರ ಕನ್ನಡ ಜಿಲ್ಲೆಯ ಯಲ್ಲಾಪುರ ತಾಲೂಕಿನ ಉಮ್ಮಚಗಿ ವಿದ್ಯಾರಣ್ಯ ಬಡಾವಣೆಯಲ್ಲಿ ವಾಸವಾಗಿರುವ ಶಿಕ್ಷಕಿ ಜಯಶ್ರೀ ಸೀತಾರಾಮ ಗಾಂವ್ಕರ ಅವರ ಮನೆಯಲ್ಲಿ ಭಾರೀ ಕಳ್ಳತನ ನಡೆದಿದ್ದು, ಆರು ಲಕ್ಷಕ್ಕೂ ಅಧಿಕ ಮೌಲ್ಯದ ಬಂಗಾರ, ನಗದು ಕಳ್ಳತನವಾಗಿದೆ.
2025ರ ಜುಲೈ 26ರಂದು ಬೆಳಿಗ್ಗೆ 9:30ರಿಂದ ಮಧ್ಯಾಹ್ನ 12:30ರ ನಡುವೆ ಕಳ್ಳರು ಮನೆಯ ಮುಂದಿನ ಬಾಗಿಲಿನ ಚಿಲಕದ ಕೊಂಡಿಯನ್ನು ಯಾವುದೋ ಗಟ್ಟಿಯಾದ ವಸ್ತುವಿನಿಂದ ಮುರಿದು ಒಳನುಗ್ಗಿದ್ದಾರೆ. ಮನೆಯೊಳಗೆ ಪ್ರವೇಶಿಸಿದ ನಂತರ, ಕಳ್ಳರು ನೇರವಾಗಿ ಮಲಗುವ ಕೋಣೆಯಲ್ಲಿರುವ ಕಪಾಟನ್ನು ತೆರೆದು, ಅದರಲ್ಲಿಟ್ಟಿದ್ದ ಬೆಲೆಬಾಳುವ ಬಂಗಾರದ ಆಭರಣಗಳು ಮತ್ತು ನಗದನ್ನು ಕದ್ದೊಯ್ದಿದ್ದಾರೆ.
ಈ ಸುದ್ದಿ ಓದಿದ್ದೀರಾ? ಹುಬ್ಬಳ್ಳಿ | ಭಾವೈಕ್ಯ ಸಮಾಜ ಕಟ್ಟುವಲ್ಲಿ ಸೂಫಿ ಸಂತರ ಪಾತ್ರ ಅಪಾರ: ಸತೀಶ್ ಜಾರಕಿಹೊಳಿ
ಕಳುವಾದ ವಸ್ತುಗಳಲ್ಲಿ ಬಂಗಾರದ ಕರಿಮಣಿ ಸರ, ನೆಕ್ಲೆಸ್‌ಗಳು, ಪಾಟಲಿ ಬಳೆ, ಗಣಪತಿ ಲಾಕೆಟ್ ಇರುವ ಚೈನು, ಕೆನ್ನೆ ಸರಪಳಿಗಳು ಮತ್ತು ಉಂಗುರಗಳು ಸೇರಿವೆ. ಇದರ ಜತೆಗೆ ಒಂದು ಲಕ್ಷ ರೂಪಾಯಿ ನಗದು ಕೂಡ ನಾಪತ್ತೆಯಾಗಿದೆ. ಕಳವಾಗಿರುವ ಬಂಗಾರದ ಆಭರಣಗಳು ಒಟ್ಟಾರೆ 175 ಗ್ರಾಂ ತೂಕವಿದ್ದು, ನಗದನ್ನೂ ಸೇರಿಸಿ ಅಂದಾಜು 6,03,000 ರೂಪಾಯಿ ಮೌಲ್ಯದ ವಸ್ತುಗಳನ್ನು ಕಳ್ಳರು ದೋಚಿದ್ದಾರೆ. ಈ ಕುರಿತು ಯಲ್ಲಾಪುರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದ್ದು, ಪೊಲೀಸರು ತನಿಖೆ ಕೈಗೊಂಡಿದ್ದಾರೆ.