ಉಡುಪಿ ಜಿಲ್ಲೆಯ ಕಾರ್ಕಳ ತಾಲೂಕಿನ ಮುಡಾರು ಗ್ರಾಮದಲ್ಲಿನ ಸೇತುವೆಯ ಸ್ಲಾಬ್ ಕಾಮಗಾರಿ ಮುಗಿದಿದ್ದು, ತಡೆಗೋಡೆ ಕಾಮಗಾರಿ ಪ್ರಗತಿಯಲ್ಲಿದ್ದು, ಸಾರ್ವಜನಿಕ ಸಂಚಾರಕ್ಕೆ ಸೇತುವೆ ಪಕ್ಕದಲ್ಲಿ ತಾತ್ಕಾಲಿಕ ರಸ್ತೆಯನ್ನು
ನಿರ್ಮಿಸಿಕೊಡಲಾಗಿದ್ದು, ಪ್ರಸಕ್ತ ಸಾಲಿನಲ್ಲಿ ಸುರಿದ ಮುಂಗಾರು ಪೂರ್ವ ಚಂಡಮಾರುತದ ಭಾರೀ ಮಳೆಯಿಂದಾಗಿ ಕಾಮಗಾರಿಯನ್ನು ಪೂರ್ಣಗೊಳಿಸಲು ಅಸಾಧ್ಯವಾಗಿರುವುದರಿಂದ ತಾತ್ಕಾಲಿಕ ಬದಲಿ ರಸ್ತೆಯ ಮೇಲೆಯೇ ನೀರು ಹರಿಯುತ್ತಿದ್ದು, ಇದರಿಂದ ವಾಹನ ಅವಘಡಗಳು ಸಂಭವಿಸುವ ಸಾಧ್ಯತೆಯಿರುವ ಹಿನ್ನೆಲೆ, ಸಾರ್ವಜನಿಕ ಹಿತದೃಷ್ಟಿಯನ್ನು ಗಮನದಲ್ಲಿಟ್ಟುಕೊಂಡು ಹಾಗೂ ತಡೆಗೋಡೆಯ ಕಾಮಗಾರಿಯು ಸುಸೂತ್ರವಾಗಿ ನಡೆಸುವ ಸಲುವಾಗಿ ಕೇಂದ್ರ ಮೋಟಾರು ವಾಹನ ಕಾಯ್ದೆ 1988 ರ ಕಲಂ 115 ಹಾಗೂ ಕರ್ನಾಟಕ ಮೋಟಾರು ವಾಹನಗಳ ನಿಯಮಾವಳಿಗಳು 1989 ರ ಕಲಂ 221(ಎ)(2) & (5) ರನ್ವಯ ಜುಲೈ 28 ರಿಂದ ಆಗಸ್ಟ್ 30 ರ ವರೆಗೆ
ಮುಡಾರು ಗ್ರಾಮದ ದಿಡಿಂಬಿರಿ ಕ್ರಾಸ್ ನಿಂದ ರಾಮೇರಗುತ್ತು ವರೆಗೆ ಹೋಗುವ ರಸ್ತೆಯಲ್ಲಿ ಕೊಪ್ಪಲ ಕ್ರಾಸ್ ಇಲ್ಲಿಂದ ರಾಮೇರಗುತ್ತು ಇಲ್ಲಿಯವರೆಗೆ ತಾತ್ಕಾಲಿಕವಾಗಿ ವಾಹನ ಸಂಚಾರವನ್ನು ನಿರ್ಬಂಧಿಸಲಾಗಿದೆ.
ಸದ್ರಿ ಕಾಮಗಾರಿ ಪೂರ್ಣಗೊಳ್ಳುವ ತನಕ ಕಾರ್ಕಳದಿಂದ ರಾಮೇರ ಗುತ್ತು-ಕರ್ವಾಶೆ ಕಡೆ ಹೋಗುವ ವಾಹನಗಳು ಕುಂಟಿಬೈಲು ದೇವಸ್ಥಾನ ದ್ವಾರದ ರಸ್ತೆಯ ಮೂಲಕ ಸಂಚರಿಸಬಹುದಾಗಿದ್ದು, ಬಜಗೋಳಿಯಿಂದ ಕೆರ್ವಾಶೆ ಕಡೆಗೆ ಹೋಗುವ ಘನ ವಾಹನಗಳು ಹಡ್ಯಾಲು ಕ್ರಾಸ್ ಮೂಲಕ ಮುಡ್ರಾಲು ಮಾರ್ಗವಾಗಿ ಕರ್ವಾಶೆಗೆ ಸಂಚರಿಸಬಹುದಾಗಿದೆ ಹಾಗೂ ದಿಡಿಂಬಿರಿಯಿಂದ ಕೊಪ್ಪಲ ರಸ್ತೆಯಲ್ಲಿ ಕಿರಿದಾದ ಸೇತುವೆ ಇರುವುದರಿಂದ ದ್ವಿಚಕ್ರ ಮತ್ತು ತ್ರಿಚಕ್ರ ವಾಹನಗಳು ಮಾತ್ರ ಸದ್ರಿ ಸೇತುವೆಯಲ್ಲಿ ಸಂಚರಿಸಬಹುದಾಗಿದೆ ಎಂದು ಜಿಲ್ಲಾಧಿಕಾರಿ ಸ್ವರೂಪ ಟಿ.ಕೆ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಉಡುಪಿ | ಜು 28- ಆ 30 ರ ವರೆಗೆ ವಾಹನ ಸಂಚಾರ ತಾತ್ಕಾಲಿಕ ನಿರ್ಬಂಧ
ಈ ಮಾಧ್ಯಮ ನಿಮ್ಮದು. ನಿಮ್ಮ ಬೆಂಬಲವೇ ನಮ್ಮ ಬಲ. ವಂತಿಗೆ ನೀಡುವುದರ ಮೂಲಕ ಕೈಜೋಡಿಸಿ, ಸತ್ಯ ನ್ಯಾಯ ಪ್ರೀತಿಯ ಮೌಲ್ಯಗಳನ್ನು ಹಂಚಲು ಜೊತೆಯಾಗಿ. ಸಹಾಯ ಅಥವಾ ಬೆಂಬಲ ನೀಡಲು ದಯವಿಟ್ಟು +91 9035362958 ಅನ್ನು ಸಂಪರ್ಕಿಸಿ.
ಪೋಸ್ಟ್ ಹಂಚಿಕೊಳ್ಳಿ: