ಶಿವಮೊಗ್ಗ, ಬ್ಯಾಂಕಿನಿಂದ ಹಿಂತಿರುಗುಷ್ಟರಲ್ಲಿ ಬೈಕ್ ಕಳ್ಳತನವಾದ ಘಟನೆ ಶಿವಮೊಗ್ಗದ ಗಾರ್ಡನ್ ಏರಿಯಾದ ಬ್ಯಾಂಕ್ ಆಫ್ ಮಹಾರಾಷ್ಟ್ರದ ಎದುರು ಘಟನೆ ನಡೆದಿದೆ.
ಬೈರಪ್ಪ ಎಂಬುವವರು ಬೈಕ್ ನಿಲ್ಲಿಸಿ ಬ್ಯಾಂಕಿಗೆ ಹೋಗಿದ್ದರು. ಕೆಲವೇ ನಿಮಿಷದಲ್ಲಿ ಕೆಲಸ ಮುಗಿಸಿ ಹೊರ ಬಂದಾಗ ಸ್ಪ್ಲೆಂಡರ್ ಬೈಕ್ ಇರಲಿಲ್ಲ. ಎಲ್ಲೆಡೆ ಹುಡುಕಿದ ಬೈರಪ್ಪ ಅವರು ಬೈಕ್ ಸಿಗದ ಹಿನ್ನೆಲೆ ದೂರು ನೀಡಿದ್ದಾರೆ.
ದೊಡ್ಡಪೇಟೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.