ಗೊರವನಹಳ್ಳಿ ರಸ್ತೆಗೆ ಸೇತುವೆ ನಿರ್ಮಿಸಲು ಕಾಮಗಾರಿ ಪ್ರಗತಿಯಲ್ಲಿದ್ದು, ಪರ್ಯಾಯವಾಗಿ ನಿರ್ಮಿಸಿದ್ದ ರಸ್ತೆಯೂ ಗುಂಡಿಗಳಿಂದ ಹದಗೆಟ್ಟಿದ್ದು, ಕಲ್ಲು ತುಂಬಿದ ಟ್ರಾಕ್ಟರ್ ಸಿಲುಕಿ ವಾಹನಗಳ ಸಂಚಾರಕ್ಕೆ ಕಿರಿಕಿರಿ ಉಂಟಾಗುತ್ತಿರುವ ಘಟನೆ ಮಂಗಳವಾರ ಜರುಗಿದೆ.
ಕೊರಟಗೆರೆ ತಾಲ್ಲೂಕಿನ ಶ್ರೀ ಕ್ಷೇತ್ರ ಗೊರವನಹಳ್ಳಿ ರಸ್ತೆಯ ಮಾರ್ಗದ ಕೆರೆಯಾಗಹಳ್ಳಿ ಗ್ರಾಮ ಸಮೀಪ ನಿರ್ಮಿಸುತ್ತಿರುವ ಸೇತುವೆಯ ಪಕ್ಕದಲ್ಲಿಯೇ ಪರ್ಯಾಯ ಮಣ್ಣಿನ ರಸ್ತೆಯಲ್ಲಿಯೇ ಟ್ರಾಕ್ಟರ್ ಸಿಲುಕಿ ವಾಹನ ಸಂಚರಿಸಲು ಹರಸಾಹಸ ಮಾಡುವ ಪರಿಸ್ಥಿತಿ ನಿರ್ಮಾಣವಾಗಿದೆ.

ಸುಮಾರು ಹತ್ತಾರು ಗ್ರಾಮಗಳಿಗೆ ಸಂಪರ್ಕ ಕಲ್ಪಿಸುವ ಈ ರಸ್ತೆಯಲ್ಲಿ ಮಳೆಗಾಲದ ಸಂಧರ್ಭದಲ್ಲಿ ಕಾಮಗಾರಿ ಶುರು ಮಾಡಿರುವುದು ಪ್ರತಿದಿನ ಸಾರ್ವಜನಿಕರು ತೊಂದರೆ ಅನುಭವಿಸುತ್ತಿದ್ದು, ಸಂಬಂಧಪಟ್ಟ ಇಲಾಖೆ ಇತ್ತ ಗಮನಹರಿಸಿ ಸಮಸ್ಯೆ ಬಗೆಹರಿಸುವಂತೆ ಗ್ರಾಮಸ್ಥರು ಮನವಿ ಮಾಡಿದರು.
ಈ ಭಾಗದ ಜನರು ಕೊರಟಗೆರೆ ಹಾಗೂ ಬೆಂಗಳೂರು, ತುಮಕೂರು ಸೇರಿದಂತೆ ನಗರ ಪ್ರದೇಶಗಳಿಗೆ ಉದ್ಯೋಗ ಹರಸಿ ಆಟೋ, ತಮ್ಮ ದ್ವೀಚಕ್ರವಾಹನಗಳ ಮೂಲಕ ಪ್ರಯಾಣ ಬೆಳೆಸುವ ಗ್ರಾಮೀಣ ಭಾಗದ ಜನರಿಗೆ ಸಮಸ್ಯೆ ಉಂಟಾಗಿದೆ ಎಂದು ಇಲ್ಲಿನ ಗ್ರಾಮಸ್ಥರ ಅಭಿಪ್ರಾಯವಾಗಿದೆ

ಕೊರಟಗೆರೆ-ಗೊರವನಹಳ್ಳಿಗೆ ಪ್ರತಿದಿನ ಸರ್ಕಾರಿ ಸಾರಿಗೆ ಬಸ್ಸು ಸಂಚರಿಸುವ ರಸ್ತೆಯೇ ಈ ರೀತಿ ಟ್ರಾಕ್ಟರ್ ಸಿಲುಕಿಕೊಂಡು ಕೆಲ ಕಾಲ ಬಸ್ಸು ನಿಂತು ಸಮಸ್ಯೆ ಬಗೆಹರಿಸಲು ಸಾಧ್ಯವಾಗದೇ ಬಸ್ಸು ಹಿಂತುರಿಗಿ ಬೇರೊಂದು ರಸ್ತೆ ಮಾರ್ಗವಾಗಿ ಸಂಚರಿಸಿ ಕೊರಟಗೆರೆ ತಲುಪವಂತಹ ವಾತಾವರಣ ನಿರ್ಮಾಣವಾಗಿದ್ದು, ಬೆಂಗಳೂರಿನಂತಹ ನಗರಗಳಿಂದ ಆಗಮಿಸುವ ಭಕ್ತಾದಸಿಗಳಿಗೂ ಈ ಸಮಸ್ಯೆಯೂ ಕಾಡಿದ್ದು ಕಂಡು ಬಂದಿದ್ದ, ಇಂತಹ ರಸ್ತೆ ಕಾಮಗಾರಿಗಳನ್ನು ಮಾಡುತ್ತಿರುವ ಸಂಬಂಧಪಟ್ಟ ಇಲಾಖೆ ಹಾಗೂ ಕಂಟ್ರಾಕ್ಟರ್ ಸೂಕ್ತ ಕ್ರಮವಹಿಸಿ ಸುಗಮ ಸಂಚಾರಕ್ಕೆ ಅನುವು ಮಾಡಿಕೊಂಡುವಂತೆ ಗೊರವನಹಳ್ಳಿ ಕ್ಷೇತ್ರಕ್ಕೆ ಆಗಮಿಸುವ ಭಕ್ತಾಧಿಗಳ ಮಾತಾಗಿದೆ.