ಧರ್ಮಸ್ಥಳದಲ್ಲಿ ವ್ಯಕ್ತಿಯೊಬ್ಬರು ತಾನು ಹೂತಿದ್ದ ನೂರಾರು ಕಳೇಬರಗಳನ್ನು ತೆಗೆಯುತ್ತೇನೆಂದು ಹೇಳಿದ್ದ ಪ್ರಕರಣಕ್ಕೆ ಸಂಬಂಧಿಸಿದಂತೆ ಇಂದು ವಿಶೇಷ ತನಿಖಾ ತಂಡ ಹಾಗೂ ಸಹಾಯಕ ಪೊಲೀಸ್ ಆಯುಕ್ತರ ಸಮ್ಮುಖದಲ್ಲಿ ಎರಡನೇ ದಿನ ಅಗೆತ ಕಾರ್ಯಾಚರಣೆ ಆರಂಭಗೊಂಡಿದೆ.
ದೂರುದಾರನ ಜೊತೆ ಬಂದ ಎಸ್.ಐ.ಟಿ. ಕಾರ್ಯಾಚರಣೆ ನಡೆಸುತ್ತಿದೆ. ಎಸ್ಐಟಿ ಅಧಿಕಾರಿ ಅನುಚೇತ್ ಸೇರಿದಂತೆ ಹಲವಾರು ಅಧಿಕಾರಿಗಳು ಸ್ಥಳದಲ್ಲಿ ನಿಂತು ಅಗೆತ ಕಾರ್ಯವನ್ನು ಮೇಲ್ವಿಚಾರಣೆ ನಡೆಸುತ್ತಿದ್ದಾರೆ.
ಧರ್ಮಸ್ಥಳ ಸ್ನಾನಘಟ್ಟದಲ್ಲಿ ಮೊದಲ ದಿನ ಕಾರ್ಯಾಚರಣೆಯ ಮೊದಲ ಸ್ಥಳ ಅಗೆದಾಗ ಯಾವುದೇ ಕಳೇಬರ ದೊರಕಿರಲಿಲ್ಲ. ಸುಮಾರು ಹದಿನೈದು ವರ್ಷಗಳ ಹಿಂದೆ ನಡೆದಿವೆ ಎನ್ನಲಾದ ಪ್ರಕರಣಗಳನ್ನು ಬಯಲಿಗೆಳೆಯಲಾಗುತ್ತದೆಯೇ ಎಂಬ ಕುತೂಹಲ ಎಲ್ಲರಲ್ಲೂ ಮೂಡಿದೆ.
ಇದನ್ನು ಓದಿದ್ದೀರಾ? ಈ ದಿನ ಸಂಪಾದಕೀಯ | ರೈತರು ಮಣ್ಣು ತಿನ್ನುವುದು, ಮನುಷ್ಯರು ವಿಷ ಉಣ್ಣುವುದು ನಿಲ್ಲುವುದೆಂದು?
ಸ್ಥಳದಲ್ಲಿ ಮಳೆ ಶುರುವಾಗಿದ್ದು, ಅಧಿಕಾರಿಗಳು ಕೊಡೆಗಳನ್ನು ಹಿಡಿದು ಮಳೆಯ ನಡುವೆಯೇ ಕಾರ್ಯಾಚರಣೆ ಶುರು ಮಾಡಿದ್ದಾರೆ. ನಿನ್ನ ಕಾರ್ಯಾಚರಣೆ ನಡೆದ ಕಾಡಿನ ಜಾಗದ ಸ್ವಲ್ಪ ದೂರದಲ್ಲಿ ದೂರುದಾರ ಹೇಳಿದ ಸ್ಥಳ ಅಗೆಯಲು ಕಾರ್ಮಿಕರು ಮತ್ತು ದೂರುದಾರನೊಂದಿಗೆ ಎಸ್.ಐ.ಟಿ ತೆರಳಿದೆ.
ಇಲ್ಲಿಯವರೆಗೆ ತಾನು ದೇಹಗಳನ್ನು ಹೂತಿರುವ 20ಕ್ಕೂ ಹೆಚ್ಚು ಜಾಗಗಳನ್ನು ವ್ಯಕ್ತಿಯು ಎಸ್ಐಟಿ ತಂಡಕ್ಕೆ ತೋರಿಸಿದ್ದು ಅವುಗಳಿಗೆ ನಂಬರ್ ನೀಡಿ ಗುರುತು ಮಾಡಲಾಗಿದೆ.