ಕಾರ್ಗಿಲ್ ಯೋಧನ ಮನೆಗೆ ನುಗ್ಗಿ ಪೌರತ್ವಕ್ಕೆ ಪುರಾವೆ ಕೇಳಿದ ಪೊಲೀಸ್‌ ಗುಂಪು

Date:

Advertisements

ಕಾರ್ಗಿಲ್ ಯುದ್ಧದ ಸಮಯದಲ್ಲಿ ಭಾರತೀಯ ಸೇನೆಯಲ್ಲಿ ಸೇವೆ ಸಲ್ಲಿಸಿದ್ದ ಕಾರ್ಗಿಲ್ ಯೋಧನ ಮನೆಗೆ ಪೊಲೀಸರು ನುಗ್ಗಿ, ಅವರ ಕುಟುಂಬದ ಪೌರತ್ವವನ್ನು ಸಾಬೀತು ಪಡಿಸುವಂತೆ ಕಿರುಕುಳ ನೀಡಿರುವ ಘಟನೆ ಮಹಾರಾಷ್ಟ್ರದ ಪುಣೆಯಲ್ಲಿ ನಡೆದಿದೆ. ತಾವೇ ದೇಶಭಕ್ತರು ಎಂದು ಹೇಳಿಕೊಳ್ಳುವ ಬಿಜೆಪಿ ಸರ್ಕಾರವೇ ಯೋಧನ ಮನೆ ಮೇಲೆ ದಾಳಿ ಮಾಡಿಸಿದೆ. ಇದು ಯಾವ ರೀತಿಯ ದೇಶಭಕ್ತಿ ಎಂದು ಸಾಮಾಜಿಕ ಜಾಲತಾಣದಲ್ಲಿ ಹಲವರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

1999ರಲ್ಲಿ ನಡೆದ ಕಾರ್ಗಿಲ್ ಯುದ್ಧದಲ್ಲಿ ಹೋರಾಡಿದ್ದ ನಿವೃತ್ತ ಸೈನಿಕ ಹಕೀಮುದ್ದೀನ್ ಶೇಖ್ ಅವರು ಮೂಲತಃ ಉತ್ತರ ಪ್ರದೇಶದ ಪ್ರತಾಪ್‌ಗಢದವರು. ಅವರ ಕುಟುಂಬವು 1960ರಿಂದಲೂ ಪುಣೆಯ ಚಂದನ್ ನಗರದಲ್ಲಿ ನೆಲೆಸಿದೆ. ಹಕೀಮುದ್ದೀನ್ ಶೇಖ್ ಅವರು 2013ರಲ್ಲಿ ಮರಳಿ ಪ್ರತಾಪ್‌ಗಢಕ್ಕೆ ಹೋಗಿದ್ದು, ಅಲ್ಲಿಯೇ ನೆಲೆಸಿದ್ದಾರೆ. ಆದಾಗ್ಯೂ, ಅವರ ಸಹೋದರರು ಮತ್ತು ಅವರ ಕುಟುಂಬಗಳು ಪುಣೆಯಲ್ಲಿಯೇ ಉಳಿದಿವೆ.

ಅವರ ಮನೆಗೆ ಮಂಗಳವಾರ ರಾತ್ರಿ ಪೊಲೀಸರು ಸೇರಿದಂತೆ 30-40 ಮಂದಿಯ ಗುಂಪು ನುಗ್ಗಿದ್ದು, ತಮ್ಮ ಭಾರತೀಯ ಪೌರತ್ವವನ್ನು ಸಾಬೀತುಪಡಿಸುವಂತೆ ಒತ್ತಾಯಿಸಿದೆ. ಮಾತ್ರವಲ್ಲದೆ, ಕುಟುಂಬದ ಕೆಲವು ಸದಸ್ಯರನ್ನು ಪೊಲೀಸರು ಪೊಲೀಸ್‌ ಠಾಣೆಗೂ ಕರೆದೊಯ್ದಿದ್ದಾರೆ ಎಂದು ವರದಿಯಾಗಿದೆ.

ಈ ಬಗ್ಗೆ ಮಾಹಿತಿ ಹಂಚಿಕೊಂಡಿರುವ ಯೋಧ ಶೇಖ್ ಅವರ ಕುಟುಂಬಸ್ಥರು, “ಮಧ್ಯರಾತ್ರಿಯೇ ನಮ್ಮ ಕುಟುಂಬದ ಪುರುಷರನ್ನು ಪೊಲೀಸ್‌ ಠಾಣೆಗೆ ಕರೆದೊಯ್ದರು. ಬೆಳಗಿನ ಜಾವ 3 ಗಂಟೆವರೆಗೂ ನಮ್ಮನ್ನು ಕಾಯುವಂತೆ ಹೇಳಿದರು. ನಮ್ಮ ಪೌರತ್ವವನ್ನು ಸಾಬೀತುಪಡಿಸಲು ವಿಫಲವಾದರೆ, ನಮ್ಮನ್ನು ಬಾಂಗ್ಲಾದೇಶಿ ಅಥವಾ ರೋಹಿಂಗ್ಯಾ ಮುಸ್ಲಿಮರೆಂದು ಘೋಷಿಸುವುದಾಗಿ ಬೆದರಿಕೆ ಹಾಕಿದರು” ಎಂದು ಹೇಳಿಕೊಂಡಿದ್ದಾರೆ.

ಘಟನೆ ಬಗ್ಗೆ ಪ್ರತಿಕ್ರಿಯಿಸಿರುವ ಡಿಸಿಪಿ ಸೋಮಯ್ ಮುಂಡೆ, “ಸಂಶಯಿತ ಅಕ್ರಮ ವಲಸಿಗರ ಕುರಿತು ಬಂದ ಮಾಹಿತಿಯ ಮೇಲೆಗೆ ಪೊಲೀಸರು ಕ್ರಮ ಕೈಗೊಂಡಿದ್ದಾರೆ. ನಮ್ಮ ತಂಡ ದಾಖಲೆಗಳನ್ನು ಕೇಳಿದೆ. ಅವರು ಭಾರತೀಯರು ಎಂಬುದು ಸ್ಪಷ್ಟವಾದ ನಂತರ, ನಾವು ಅವರನ್ನು ಬಿಟ್ಟುಬಿಟ್ಟೆವು. ಪೊಲೀಸ್ ತಂಡದೊಂದಿಗೆ ಯಾವುದೇ ಮೂರನೇ ವ್ಯಕ್ತಿ ಇರಲಿಲ್ಲ. ನಮ್ಮಲ್ಲಿ ವೀಡಿಯೊ ದೃಶ್ಯಾವಳಿಗಳಿವೆ” ಎಂದು ಸಮರ್ಥಿಸಿಕೊಂಡಿದ್ದಾರೆ.

58 ವರ್ಷದ ಹಕೀಮುದ್ದೀನ್ ಶೇಖ್ ಅವರು 1984 ರಿಂದ 2000 ರವರೆಗೆ ಭಾರತೀಯ ಸೇನೆಯ 269 ಎಂಜಿನಿಯರ್ ರೆಜಿಮೆಂಟ್‌ನಲ್ಲಿ ಸೇವೆ ಸಲ್ಲಿಸಿದ್ದಾರೆ. “ನಾನು ಕಾರ್ಗಿಲ್‌ನಲ್ಲಿ ಈ ದೇಶಕ್ಕಾಗಿ ಹೋರಾಡಿದೆ. ನನ್ನ ಇಡೀ ಕುಟುಂಬ ಈ ದೇಶಕ್ಕೆ ಸೇರಿದೆ. ಅದನ್ನು ಸಾಬೀತುಪಡಿಸಲು ನಮ್ಮನ್ನು ಕೇಳಲಾಗುತ್ತಿದೆ. ಯಾಕೆ ಹೀಗೆ” ಎಂದು ಶೇಖ್ ಪ್ರಶ್ನಿಸಿದ್ದಾರೆ.

ಹಕೀಮುದ್ದೀನ್ ಅವರ ಸಹೋದರ ಇರ್ಷಾದ್ ಶೇಖ್ ಹೇಳಿವಂತೆ; “ಅಪರಿಚಿತ ಪುರುಷರ ಗುಂಪೊಂದು ಘೋಷಣೆಗಳನ್ನು ಕೂಗುತ್ತಾ ಬಾಗಿಲು ಒದೆಯುತ್ತಾ ನಮ್ಮ ಮನೆಗೆ ನುಗ್ಗಿತು. ಅವರು ದಾಖಲೆಗಳನ್ನು ಕೇಳಿದರು. ಓರ್ವ ಅಧಿಕಾರಿ ಆ ಗುಂಪನ್ನು ಮೌನಗೊಳಿಸಲು ಯತ್ನಿಸಿದರು. ಪೊಲೀಸ್ ವ್ಯಾನ್ ರಸ್ತೆಯ ಒಂದು ಭಾಗದಲ್ಲಿ ಕಾಯುತ್ತಿತ್ತು” ಎಂದಿದ್ದಾರೆ.

ಹಕೀಮುದ್ದೀನ್ ಶೇಖ್ ಮಾತ್ರವಲ್ಲದೆ, ಅವರ ಕುಟುಂಬದಲ್ಲಿ ಇನ್ನೂ ಇಬ್ಬರು – ಶೇಖ್ ನಯೀಮುದ್ದೀನ್ ಮತ್ತು ಶೇಖ್ ಮೊಹಮ್ಮದ್ ಸಲೀಂ – ಯೋಧರಿದ್ದಾರೆ. ಅವರು 1965 ಮತ್ತು 1971ರ ಯುದ್ಧಗಳಲ್ಲಿ ಭಾಗಿಯಾಗಿದ್ದರು, ಹೋರಾಡಿದ್ದರು. “ಸೈನಿಕರ ಕುಟುಂಬಗಳನ್ನು ಹೀಗೆ ನಡೆಸಿಕೊಳ್ಳಲಾಗುತ್ತದೆಯೇ? ಯಾರಾದರೂ ಬಾಗಿಲು ತಟ್ಟಿದಾಗಲೆಲ್ಲ ನಾವು ಪೌರತ್ವವನ್ನು ಸಾಬೀತುಪಡಿಸಬೇಕೇ? ಭಾರತೀಯರಾಗಿರುವುದು ಎಂದರೆ, ಅದರ ಅರ್ಥವೇನು” ಎಂದು ಇರ್ಷಾದ್ ಶೇಖ್ ಪ್ರಶ್ನಿಸಿದ್ದಾರೆ.

ಈ ಲೇಖನ ಓದಿದ್ದೀರಾ?: ಬಿಹಾರ ಚುನಾವಣೆ | ಗೇಮ್ ಚೇಂಜರ್ ಆಗ್ತಾರಾ ಪ್ರಶಾಂತ್ ಕಿಶೋರ್?

ನಮ್ಮಲ್ಲಿರುವ ಮಾನ್ಯ ದಾಖಲೆಗಳನ್ನು ಒಪ್ಪಿಕೊಳ್ಳಲು ಆ ಗುಂಪು ನಿರಾಕರಿಸಿತು. ಗುಂಪಿನಲ್ಲಿದ್ದವರು ಗೂಂಡಾಗಳಂತೆ ವರ್ತಿಸುತ್ತಿದ್ದರು. ಹಕೀಮುದ್ದೀನ್ ಅವರ ಸೋದರಳಿಯರಾದ ನೌಶಾದ್ ಮತ್ತು ನವಾಬ್ ಶೇಖ್ ಅವರು ತಮ್ಮ ಕುಟುಂಬಗಳ ಆಧಾರ್ ಕಾರ್ಡ್‌ಗಳನ್ನು ತೋರಿಸಿದ ನಂತರವೂ, ಅವರ ದಾಖಲೆಗಳು ನಕಲಿ ಎಂದು ಆ ಗುಂಪು ಅಪಹಾಸ್ಯ ಮಾಡಿರುವುದಾಗಿ ವರದಿಯಾಗಿದೆ.

ಸೈನಿಕರ ಕುಟುಂಬಗಳನ್ನು ಅಮಾನವೀಯವಾಗಿ ನಡೆಸಿಕೊಂಡಿರುವ ಪೊಲೀಸರು ಮತ್ತು ಕುಟುಂಬಗಳಿಗೆ ಕಿರುಕುಳ ನೀಡಿರುವ ದಾಳಿಕೋರ ಗುಂಪಿನ ವಿರುದ್ಧ ಸಾಮಾಜಿಕ ಜಾಲತಾಣದಲ್ಲಿ ವ್ಯಾಪಕ ಆಕ್ರೋಶ ವ್ಯಕ್ತವಾಗಿದೆ. “ಭಾರತಕ್ಕಾಗಿ, ಭಾರತೀಯ ಸೇನೆಯಲ್ಲಿ ಸೇವೆ ಸಲ್ಲಿಸಿದ, ಯುದ್ಧಗಳಲ್ಲಿ ಹೋರಾಡಿದ್ದವರ ಕುಟುಂಬವನ್ನು ಈ ಪರಿ ನಡೆಸುವ ಸಮಾಜ ಹಾಗೂ ವ್ಯವಸ್ಠೆ ಸಾಮಾನ್ಯ ಮುಸ್ಲೀಮರನ್ನು ಯಾವ ರೀತಿಯಲ್ಲಿ ನಡೆಸಿಕೊಳ್ಳುತ್ತಿರಬಹುದು!” ಎಂದು ನೆಟ್ಟಿಗರು ಕಿಡಿಕಾರಿದ್ದಾರೆ.

ಈ ಮಾಧ್ಯಮ ನಿಮ್ಮದು. ನಿಮ್ಮ ಬೆಂಬಲವೇ ನಮ್ಮ ಬಲ. ವಂತಿಗೆ ನೀಡುವುದರ ಮೂಲಕ ಕೈಜೋಡಿಸಿ, ಸತ್ಯ ನ್ಯಾಯ ಪ್ರೀತಿಯ ಮೌಲ್ಯಗಳನ್ನು ಹಂಚಲು ಜೊತೆಯಾಗಿ. ಸಹಾಯ ಅಥವಾ ಬೆಂಬಲ ನೀಡಲು ದಯವಿಟ್ಟು +91 9035362958 ಅನ್ನು ಸಂಪರ್ಕಿಸಿ.

ಪೋಸ್ಟ್ ಹಂಚಿಕೊಳ್ಳಿ:

LEAVE A REPLY

Please enter your comment!
Please enter your name here

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಒಳಮೀಸಲಾತಿ | ಅಲೆಮಾರಿ ಸಮುದಾಯಗಳಿಗೆ 1% ಪ್ರತ್ಯೇಕ ಮೀಸಲಾತಿಗೆ ಆಗ್ರಹ; ದೆಹಲಿಯಲ್ಲಿ ಪ್ರತಿಭಟನೆ

ಕರ್ನಾಟಕ ಸರ್ಕಾರವು ಒಳಮೀಸಲಾತಿಯನ್ನು ಜಾರಿಗೊಳಿಸಿದೆ. ಆದರೆ, ಅಲೆಮಾರಿ ಸಮುದಾಯಗಳಿಗೆ ಪ್ರತ್ಯೇಕ 1%...

‘ನನ್ನ ಗಂಡನನ್ನು ಭೇಟಿಯಾಗುವ ಅರ್ಹತೆ ನನಗಿಲ್ಲವೇ?’: ರಾಷ್ಟ್ರಪತಿ, ಮೋದಿಗೆ ಪತ್ರ ಬರೆದ ವಾಂಗ್ಚುಕ್ ಪತ್ನಿ

ಲಡಾಖ್‌ಗೆ ರಾಜ್ಯ ಸ್ಥಾನಮಾನ ನೀಡಬೇಕು ಎಂಬುದು ಸೇರಿದಂತೆ ಹಲವು ಬೇಡಿಕೆಗಳನ್ನು ಇಟ್ಟುಕೊಂಡು...

ಯುವಜನರಿಗಾಗಿ ಪ್ರಾಣವನ್ನೇ ತ್ಯಾಗ ಮಾಡುತ್ತೇನೆ: ಉತ್ತರಾಖಂಡ ಮುಖ್ಯಮಂತ್ರಿ ಪುಷ್ಕರ್ ಸಿಂಗ್ ಧಾಮಿ

ಸುಡುವ ಬಿಸಿಲಿನಲ್ಲಿ ಕುರಿತು ಯುವಜನರು ತಮ್ಮ ಹಕ್ಕೊತ್ತಾಯಗಳ ಈಡೇರಿಕೆಗಾಗಿ ಹೋರಾಟ ನಡೆಸುತ್ತಿದ್ದಾರೆ....

ದೆಹಲಿ ಶಾಲೆಗಳಲ್ಲಿ RSS ಬೋಧನೆ: ಮಕ್ಕಳ ಎಳೆ ಮನಸ್ಸಲ್ಲಿ ಕೋಮುದ್ವೇಷ ಬಿತ್ತುವ ಹುನ್ನಾರ!

ಕೋಮುವಾದಿ, ಕೋಮುದ್ವೇಷಿ, ಸಮಾಜಘಾತುಕ ಸಂಘಟನೆಯ ಬಗ್ಗೆ ಶಾಲೆಗಳಲ್ಲಿ ಬೋಧಿಸುವುದು ಎಳೆ ಮನಸ್ಸುಗಳಲ್ಲಿ...

Download Eedina App Android / iOS

X