ಧರ್ಮಸ್ಥಳದಲ್ಲಿ ನೂರಾರು ಮಹಿಳೆಯರು ಕೊಲೆಯಾದ ಘಟನೆಗಳು, ಅತ್ಯಾಚಾರ ಪ್ರಕರಣಗಳು ಹಾಗೂ ಅಸಹಜ ಸಾವುಗಳು ಅಮಾನವೀಯ ಕೃತ್ಯಗಳ ಹಿಂದೆ ಇದ್ದವರ ವಿರುದ್ಧ ಹಾಗೂ ಆರೋಪಿಗಳಿಗೆ ಕಠಿಣ ಶಿಕ್ಷೆ ವಿಧಿಸಬೇಕು ಎಂದು ಪ್ರಗತಿಪರ ಸಂಘಟನೆಗಳ ಒಕ್ಕೂಟ ಸಿಂಧನೂರು ಘಟಕ ವತಿಯಿಂದ ಪ್ರತಿಭಟಿಸಿದರು.
ನಗರದ ಪ್ರವಾಸಿ ಮಂದಿರದಿಂದ , ಕೋರ್ಟ್ ವೃತ್ತ ಮೂಲಕ ತಹಶೀಲ್ದಾರ ಕಚೇರಿಗೆ ತೆರಳಿ ನಿಷ್ಪಕ್ಷಪಾತ ತನಿಖೆ ನಡೆಸಿ ತಪ್ಪಿತಸ್ಥರಿಗೆ ಕ್ರಮ ಜರುಗಿಸಬೇಕು ಎಂದು ತಹಶೀಲ್ದಾರ ಅವರಿಗೆ ಮನವಿ ಪತ್ರ ಸಲ್ಲಿಸಿದರು.
ಪ್ರತಿಭಟನೆ ಉದ್ದೇಶಿಸಿ ಪಿ.ರುದ್ರಪ್ಪ ಮಾತನಾಡಿ ನೂರಾರು ಪ್ರಕರಣಗಳು ನಡೆದರು,ಹಲವು ದಿನಗಳಿಂದ ಹೋರಾಟ ನಡೆದರು ಸರಕಾರಗಳು ಧ್ವನಿ ಎತ್ತದೇ ಇರುವುದು ಬಹಳ ಆಘಾತಕಾರಿ. ಜನಪ್ರತಿನಿಧಿಗಳು ತಕ್ಷಣ ಪ್ರತಿಕ್ರಿಯಿಸಬೇಕಾಗಿತ್ತು. ನ್ಯಾಯ ದೊರೆಯಬೇಕಾದ ಸಂತ್ರಸ್ತರು ಮತ್ತಷ್ಟು ಶೋಷಣೆಗೆ ಒಳಗಾಗುತ್ತಿದ್ದಾರೆ. ನ್ಯಾಯಾಂಗ ಮೇಲ್ವಿಚಾರಣೆಯಲ್ಲಿ ಎಸ್ ಐಟಿ ತನಿಖೆ ನಡೆಯಬೇಕೆಂದು ಎಂದು ಹೇಳಿದರು.

ಧರ್ಮಸ್ಥಳದಲ್ಲಿ ಅಕ್ರಮ ಕೂಟ ಕೊಲೆ ಮಾಡಿದವರನ್ನು ತಾನೇ ಕಾಡಿನಲ್ಲಿ ಹೂತುಹಾಕಿರುವುದಾಗಿ ಕೋರ್ಟ್‌ನಲ್ಲಿ ವ್ಯಕ್ತಿಯೊಬ್ಬರು ಸಾಕ್ಷಿ ನುಡಿದಿದ್ದು , ಆದರೆ ಧರ್ಮದ ಹೆಸರಿನಲ್ಲಿ ಪಟ್ಟಭದ್ರ ಹಿತಾಸಕ್ತಿಗಳು ದಾರಿ ತಪ್ಪಿಸುತ್ತಿದ್ದಾರೆ. ಈ ಹಿಂದೆಯೂ ಪದ್ಮಲತಾ, ವೇದಲತಾ ಕೊಲೆ ಪ್ರಕರಣಗಳು ತನಿಖೆ ನಡೆದರೂ ಮುಚ್ಚಿ ಹಾಕಲಾಗಿದೆ ಎಂದು ಅಸಮಾಧಾನ ವ್ಯಕ್ತಪಡಿಸಿದರು.
ಮತ್ತೋರ್ವ ಮಾತನಾಡಿದ ಹೋರಾಟಗಾರ ಬಾಸ್ಮಿಯಾ, ಧರ್ಮಸ್ಥಳ ಸೌಜನ್ಯ ಪ್ರಕರಣದ ಬಗ್ಗೆ ಮಾತನಾಡಿದ್ದಕ್ಕಾಗಿ ಯೂಟ್ಯೂಬರ್ ಸಮೀರ್ ಅವರಿಗೆ ಪ್ರಕರಣ ದಾಖಲಿಸುತ್ತಾರೆ. ಧರ್ಮಸ್ಥಳ ಬಗ್ಗೆ ಮಾತನಾಡುವವರಿಗೆ ಧಾರ್ಮಿಕ ಭಾವನೆಗಳಿಗೆ ಧಕ್ಕೆ ಮಾಡಿದ್ದಾರೆ ಎಂದು ಅವರ ಧ್ವನಿಯನ್ನು ದಮನ ಮಾಡುತ್ತಿದ್ದಾರೆ ಎಂದರು.
ನೈತಿಕ ಹೊಣೆ ಹೊತ್ತು ರಾಜ್ಯಸಭೆ ಸ್ಥಾನ ಹಾಗೂ ಧರ್ಮಧಿಕಾರಿ ಸ್ಥಾನಕ್ಕೆ ವೀರೇಂದ್ರ ಹೆಗಡೆ ರಾಜೀನಾಮೆ ನೀಡಬೇಕು ಎಂದು ಪ್ರಗತಿಪರ ಸಂಘಟನೆಗಳು ಆಗ್ರಹಿಸಿದರು.
ಈ ಸುದ್ದಿ ಓದಿದ್ದೀರಾ? ರಾಯಚೂರು | ಗೊಬ್ಬರ ಕಾಳಸಂತೆ ; 79 ಟನ್ ಯೂರಿಯಾ ಮಾರಾಟ ಆರೋಪ
ಈ ವೇಳೆ ಜನವಾದಿ ಮಹಿಳಾ ಸಂಘಟನೆಯ ಜಿಲ್ಲಾಧ್ಯಕ್ಷ ಶಕುಂತಲಾ, ಅಂಗನವಾಡಿ ಅಧ್ಯಕ್ಷೆ ಸುಲೋಚನಾ, ಕರ್ನಾಟಕ ಜನಶಕ್ತಿ ಜಿಲ್ಲಾ ಮುಖಂಡ ಬಸವರಾಜ್ ಬಾದರ್ಲಿ , ಡಿಎಚ್ ಕಾಂಬ್ಳೆ, ಜಮಾತ್ ಇಸ್ಲಾಂ ಹಿಂದ್ ಮುಖಂಡ ಹುಸೇನಸಾಬ, ಸಾಲಿಡಾರಿಟಿ ಯೂಥ್ ಮೂವ್ಮೆಂಟ್ ಸಿಂಧನೂರು ತಾಲ್ಲೂಕಾಧ್ಯಕ್ಷ ಅಬುಲೈಸ್ ನಾಯ್ಕ ,ಚಂದ್ರಶೇಖರ ಗೋರೆಬಾಳ, ಚಿಟ್ಟಿಬಾಬು, ಶರಬಣ್ಣ ನಾಗಲಾಪುರ, ಮಂಜುನಾಥ ಗಾಂಧಿನಗರ,ವಾಸಿಂ, ಗಂಗಮ್ಮ ಕಲವಲದೊಡ್ಡಿ ,ಚನ್ನಮ್ಮ ಬಾದರ್ಲಿ .ಎಸ್ ದೇವೇಂದ್ರಗೌಡ ಇನ್ನಿತರರು ಉಪಸ್ಥಿತರಿದ್ದರು.
