“ಯುರೋಪಿಯನ್ ರಾಷ್ಟ್ರಗಳಿಗೆ ರಫ್ತು ಸಾಗಿಸಲು ಗುಣಮಟ್ಟದ ಒಣ ದ್ರಾಕ್ಷಿ ಬೆಳೆಯಲು ಮಾರ್ಗಸೂಚಿ ರೂಪಿಸುವ ಅಗತ್ಯವಿದೆ. ಅಧಿಕ ಇಳುವರಿ, ವಿಶಿಷ್ಟವಾದ ಹೊಂದಿರುವ ಆಫ್ಘಾನಿಸ್ತಾನ್ ರಾಷ್ಟ್ರದ ದ್ರಾಕ್ಷಿ ತಳಿಗಳನ್ನು ಪರಿಚಯಿಸಲು ಕೃಷಿ ಮಾರುಕಟ್ಟೆ, ಜವಳಿ ಸಚಿವ ಶಿವಾನಂದ ಪಾಟೀಲ ನೇತೃತ್ವದಲ್ಲಿ ನಡೆದ ದಕ್ಷಿಣ ಭಾರತದ ದಾಕ್ಷಿ ಬೆಳೆಗಾರರ ಸಭೆಯಲ್ಲಿ ಚರ್ಚಿಸಲಾಯಿತು.
ವಿಜಯಪುರ ನಗರದ ಜಿಲ್ಲಾ ಕೇಂದ್ರ ಸಹಕಾರ ಬ್ಯಾಂಕಿನಲ್ಲಿ ಸಂಜೆ ಸಚಿವ ಶಿವಾನಂದ ಪಾಟೀಲರನ್ನು ಭೇಟಿ ಮಾಡಿದ ಕರ್ನಾಟಕ, ಮಹಾರಾಷ್ಟ್ರ, ತಮಿಳುನಾಡು, ಆಂಧ್ರಪ್ರದೇಶ, ದ್ರಾಕ್ಷಿ ಬೆಳೆಗಾರ ಸಂಘದ ಪ್ರತಿನಿಧಿಗಳು ಒಣ ದ್ರಾಕ್ಷಿ ಕುರಿತು ಚರ್ಚಿಸಿದರು.
ಸಭೆಯಲ್ಲಿ ಸಚಿವ ಶಿವಾನಂದ ಪಾಟೀಲ ಮಾತನಾಡಿ, “ಸರ್ಕಾರ ದ್ರಾಕ್ಷಿ ಬೆಳೆಗಾರರಕ್ಷಣೆಗಾಗಿ ಕೋಲ್ಡ್ ಸ್ಟೋರೇಜ್ ನಿರ್ಮಾಣಕ್ಕೆ ಮುಂದಾಗಿದೆ. ಒಣ ದ್ರಾಕ್ಷಿ ಮಾರುಕಟ್ಟೆಗೆ ವಿಶೇಷ ಆದ್ಯತೆ ನೀಡುತ್ತಿದೆ. ದ್ರಾಕ್ಷಿ ಬೆಳಗಾರರಿಗೆ ಕಡಿಮೆ ಬಡ್ಡಿ ದರದ ಸಾಲ ಸೌಲಭ್ಯ ಸೇರಿದಂತೆ ಅನುಕೂಲ ಕಲ್ಪಿಸಿದೆ ಎಂದರು. ಭವಿಷ್ಯದಲ್ಲಿ ದ್ರಾಕ್ಷಿ ಬೆಳೆಗಾರರ ಬೇಡಿಕೆಗಳಿಗೆ ಸರಕಾರ ಸಕಾರಾತ್ಮಕವಾಗಿ ಸ್ಪಂದಿಸಲಿದೆ” ಎಂದು ಭರವಸೆ ನೀಡಿದರು.
“ಆಫ್ರಿಕನ್ ರಾಷ್ಟ್ರಗಳಲ್ಲಿ ದ್ರಾಕ್ಷಿ ಬೆಳೆಯಲಾಗುತ್ತಿದ್ದರು ತಾಂತ್ರಿಕತೆ ಇಲ್ಲದ ಕಾರಣ ಅಂತರಾಷ್ಟ್ರೀಯ ಮಾರುಕಟ್ಟೆಯಲ್ಲಿ ಅವರು ಪೈಪೋಟಿ ನೀಡಲು ಸಾಧ್ಯವಾಗುತ್ತಿಲ್ಲ. ಇದರ ಲಾಭ ಪಡೆಯಲು ಭಾರತೀಯ ದ್ರಾಕ್ಷಿ ಬೆಳಗಾರರಿಗೆ ಸುವರ್ಣ ಅವಕಾಶವಿದೆ. ಈ ನಿಟ್ಟಿನಲ್ಲಿ ಗಂಭೀರ ಚಿಂತನೆ ನಡೆಸಬೇಕಿದೆ. ಎಂದು ಒಣ ದ್ರಾಕ್ಷಿ ಉದ್ಯಮಿ ಎ. ಎಸ್ ಬಿರಾದಾರ ಮಹಾರಾಷ್ಟ್ರದ ದ್ರಾಕ್ಷಿ ಬೆಳೆಗಾರರ ಸಂಘಟನೆ ಉಪಾಧ್ಯಕ್ಷ ಮಾರುತಿ ಚೌಹಾಣ್ ತಿಳಿಸಿದರು.
“ರಫ್ತು ಗುಣಮಟ್ಟದ ಒಣ ದ್ರಾಕ್ಷಿ ಉತ್ಪಾದನೆ, ವಿಷಮುಕ್ತ ದ್ರಾಕ್ಷಿ ಬೆಳೆಯುವುದಕ್ಕಾಗಿ ಮಾರ್ಗಸೂಚಿ ರೂಪಿಸಬೇಕಿದೆ. ಮಹಾರಾಷ್ಟ್ರ ಸರ್ಕಾರದ ನೀತಿಗಳು ದ್ರಾಕ್ಷಿ ಬೆಳೆಗಾರರಿಗೆ ಪ್ರೋತ್ಸಾಹದಾಯಕ ಆಗಿಲ್ಲ. ಕರ್ನಾಟಕದಲ್ಲಿನ ನೀತಿಗಳು ದ್ರಾಕ್ಷಿ ಬೆಳೆಗಾರರಿಗೆ ಪೂರಕವಾಗಿವೆ. ಹೀಗಾಗಿ ಎರಡು ರಾಜ್ಯಗಳ ದ್ರಾಕ್ಷಿ ಬೆಳೆಗಾರರ ಶ್ರೇಯಕ್ಕಾಗಿ ವಿಜಯಪುರ ಭಾಗದಲ್ಲಿ ಪ್ರಯೋಗಾಲಯ ಸ್ಥಾಪಿಸಬೇಕು” ಎಂಬ ಅಭಿಪ್ರಾಯ ಸಭೆಯಲ್ಲಿ ವ್ಯಕ್ತವಾಯಿತು.
ಈ ಸುದ್ದಿ ಓದಿದ್ದೀರಾ? ಹಾವೇರಿ | ಕೇಂದ್ರ, ರಾಜ್ಯ ಸರ್ಕಾರಗಳು ರೈತರಿಗೆ ಪರಿಹಾರ ನೀಡಬೇಕು: ರೈತ ಮುಖಂಡ ಹನುಮಂತಪ್ಪ ಕಬ್ಬಾರ್
“ಕೃಷಿ ವಿಷಯದಲ್ಲಿ ಜ್ಞಾನ ಹೊಂದಿದ ನಿವೃತ್ತ ಐಎಎಸ್ ಅಧಿಕಾರಿಯನ್ನು ಸಮನ್ವಯಕ್ಕಾಗಿ ನೇಮಿಸಿಕೊಂಡು, ದ್ರಾಕ್ಷಿ ಬೆಳಗಾರರಿಗೆ ಆದಾಯ ಹೆಚ್ಚಿಸುವ ಕುರಿತು ಯೋಜನೆ ರೂಪಿಸಬೇಕು” ಎಂದು ಅಭಿಪ್ರಾಯಸಿದರು.