ಅತ್ಯಾಚಾರ ಪ್ರಕರಣಗಳಲ್ಲಿ ನಾಲ್ವರು ಆರೋಪಿಗಳಿಗೆ 10 ವರ್ಷಗಳ ಜೈಲು ಶಿಕ್ಷೆ ಹಾಗೂ ದಂಡ ವಿಧಿಸಿದ ಘಟನೆ ಚಿಕ್ಕಮಗಳೂರು ಜಿಲ್ಲೆ ಘನ ಹೆಚ್ಚುವರಿ ಜಿಲ್ಲಾ ಹಾಗೂ ಸತ್ರ ನ್ಯಾಯಾಲಯ ತೀರ್ಪು ಪ್ರಕಟಿಸಿದೆ.
ಜಿಲ್ಲೆಯ ಮಹಿಳಾ ಪೊಲೀಸ್ ಠಾಣೆಯಲ್ಲಿ ಪ್ರnbpಕರಣ ದಾಖಲಾಗಿತ್ತು. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಆರೋಪಿಗಳಾದ ಫರ್ಜಾನ ದಸ್ತಗೀರ್ (32), ರಾಮನಹಳ್ಳಿ, ಚಿಕ್ಕಮಗಳೂರು, ಪ್ರಶಾಂತ ಶಿವಕುಮಾರ್ (31), ಆದರ್ಶನಗರ, ಚಿಕ್ಕಮಗಳೂರು, ಲಕ್ಷ್ಮಿ ದಿನೇಶ್ (32) ಗಾಡಿದೇವಣ್ಣ ರಸ್ತೆ, ಹಾಸನ ದಿನೇಶ್ ಡಿ.ಎಂ. (35), ಗಾಡಿದೇವಣ್ಣ ರಸ್ತೆ, ಹಾಸನ ಜಿಲ್ಲೆಯ ಶಿಕ್ಷೆಗೊಳಗಾದ ಆರೋಪಿಗಳು ಇವರ ಪೈಕಿ ಫರ್ಜಾನ ಮತ್ತು ಪ್ರಶಾಂತ್ ಅವರಿಗೆ ತಲಾ ₹32,000 ದಂಡದೊಂದಿಗೆ 10 ವರ್ಷ ಜೈಲು ಶಿಕ್ಷೆ, ಲಕ್ಷ್ಮಿ ಮತ್ತು ದಿನೇಶ್‌ಗೆ ತಲಾ ₹35,000 ದಂಡದೊಂದಿಗೆ 10 ವರ್ಷ ಶಿಕ್ಷೆ ವಿಧಿಸಲಾಗಿದೆ. ಸಂತ್ರಸ್ಥೆಗೆ ನೊಂದ ಬಾಲಕಿಗೆ ₹1 ಲಕ್ಷ ಪರಿಹಾರ ನೀಡುವಂತೆ ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರ ಚಿಕ್ಕಮಗಳೂರು ಅವರಿಗೆ ಸೂಚನೆ ನೀಡಲಾಗಿದೆ.
ಇದನ್ನೂ ಓದಿದ್ದೀರಾ?ಚಿಕ್ಕಮಗಳೂರು l ಸಾಮಾಜಿಕ ಕಾರ್ಯಕರ್ತ ಅಬ್ದುಲ್ ಸಗೀರ್ ಸಾವಿಗೆ ನ್ಯಾಯ ದೊರಕಿಸಿ; ಸಂಘಟನೆ ಮುಖಂಡರ ಆಗ್ರಹ
ಈ ಪ್ರಕರಣದ ತನಿಖೆಗೆ ಚಿಕ್ಕಮಗಳೂರು ಉಪವಿಭಾಗದ ಡಿವೈಎಸ್‌ಪಿ ಶೈಲೇಂದ್ರ ಹೆಚ್. ಎಂ. ಅವರ ನೇತೃತ್ವದಲ್ಲಿ ನಡೆದಿದೆ. ಸರ್ಕಾರದ ಪರವಾಗಿ ಸರ್ಕಾರಿ ಅಭಿಯೋಜಕರಾದ ಹೆಚ್.ಎಸ್. ಲೋಹಿತಾಶ್ವಚಾರ್ ಮತ್ತು ವಿಶೇಷ ಸರ್ಕಾರಿ ಅಭಿಯೋಜಕರಾದ ಬಿ. ಭರತ್ ಕುಮಾರ್ ಅವರು ವಾದ ಮಂಡಿಸಿದ್ದಾರೆ. ನ್ಯಾಯಾಲಯದ ಕರ್ತವ್ಯಗಳಲ್ಲಿ ಎಎಸ್‌ಐ ಸೋಮಶೇಖರ್ ಎ.ಎಸ್. ಎಚ್‌ಪಿಸಿ ವೇದಶ್ರೀ, ಸಿಪಿಸಿ ಪೂರ್ಣೇಶ್, ಸಿಪಿಸಿ ಅರುಣ್ ಕುಮಾರ್ ಹಾಗೂ ಇನ್ನಿತರರಿದ್ದರು.