KSRTC ಬಸ್‌ ನಿಲ್ದಾಣದಲ್ಲಿ ಜ್ಯೋತಿಷ್ಯದ ಜಾಹೀರಾತು; ಸಾರ್ವಜನಿಕ ಜಾಗದಲ್ಲಿ ಇದೆಂಥಾ ಪ್ರಚಾರ?

Date:

Advertisements

ಶಿವಮೊಗ್ಗ ನಗರದ KSRTC ಬಸ್ ನಿಲ್ದಾಣದ ಕಾಂಪ್ಲೆಕ್ಸ್‌ಗಳಲ್ಲಿ ಇತ್ತೀಚೆಗೆ ಕಾಣಿಸುತ್ತಿರುವ ಕೆಲವು ಫ್ಲೆಕ್ಸ್ ಜಾಹೀರಾತುಗಳು ಸಾರ್ವಜನಿಕರಲ್ಲಿ ಗಂಭೀರ ಚರ್ಚೆಗೆ ಕಾರಣವಾಗಿವೆ. ಟಿವಿ, ರಸ್ತೆ, ಪೇಪರ್‌ಗಳಲ್ಲಿ ಕಾಣಸಿಗುತ್ತಿದ್ದ ಜ್ಯೋತಿಷ್ಯದ ಜಾಹೀರಾತು ಇದೀಗ ಸರ್ಕಾರಿ ಬಸ್‌ ನಿಲ್ದಾಣದಲ್ಲಿಯೂ ಕಾಣುತ್ತಿರುವುದು ʼಸರ್ಕಾರಿ ಸಂಸ್ಥೆಗಳೂ ಮೌಢ್ಯತೆಯ ಪ್ರಚಾರಕ್ಕೆ ನಿಂತವೆ?ʼ ಎನ್ನುವ ಸಂಶಯಕ್ಕೆ ಎಡೆ ಮಾಡಿಕೊಟ್ಟಿದೆ. ಇದು ಸಾರ್ವಜನಿಕ ಸ್ಥಳಗಳಲ್ಲಿ ಇವುಗಳ ಅಳವಡಿಕೆ ಸಂಬಂಧಿತ ಸಂಸ್ಥೆಗಳ ಜವಾಬ್ದಾರಿತನದ ಕುರಿತು ಪ್ರಶ್ನೆಗಳನ್ನೂ ಎಬ್ಬಿಸುತ್ತಿದೆ.

ಸಾಮಾನ್ಯ ಜನರ ಭಾವನೆಗಳನ್ನು ಬಳಸಿಕೊಂಡು ಹಣದ ದುರುಪಯೋಗ ಮಾಡುವ ಇಂತಹ ಜಾಹೀರಾತುಗಳು ಅಕ್ಷರಶಃ ಮೌಢ್ಯತೆಯ ಬೀಜವನ್ನು ಬಿತ್ತುತ್ತಿವೆ. ಮಾನಸಿಕ, ವೈವಾಹಿಕ ಅಥವಾ ವೈಯಕ್ತಿಕ ಬಿಕ್ಕಟ್ಟಿನಲ್ಲಿ ಸಿಲುಕಿರುವವರನ್ನು ಗುರಿಯಾಗಿಸಿಕೊಂಡು, ವೈಜ್ಞಾನಿಕತೆ ಇಲ್ಲದ, ಸುಳ್ಳು ಭರವಸೆಯೊಂದಿಗೆ ಈ ರೀತಿಯ ಬೋರ್ಡುಗಳು ಜನಮನದ ಮೇಲೆ ಗಾಢವಾದ ಪರಿಣಾಮ ಬೀರಬಹುದು. ಇನ್ನು ಶುದ್ಧವಾಗಿ ವ್ಯಾಪಾರ ಉದ್ದೇಶದಿಂದ ಇವುಗಳನ್ನು ಪ್ರದರ್ಶಿಸುವ ಇಕೆಕೆ ಸಂಸ್ಥೆಯ ನೈತಿಕ ಹೊಣೆಗಾರಿಕೆ ಕುರಿತು ಪ್ರಶ್ನೆ ಏಳುತ್ತಿದೆ.

ಇನ್ನೂ ಆಶ್ಚರ್ಯವೆಂದರೆ, ಇಂತಹ ಜಾಹೀರಾತುಗಳು ನೊಂದಾಯಿತ ಸರ್ಕಾರಿ ನಿಲ್ದಾಣದ ಆವರಣದಲ್ಲೇ ರಾರಾಜಿಸುತ್ತಿವೆ. ಇದು ಕೇವಲ ಮೌಢ್ಯತೆಯ ಪ್ರಚಾರವಷ್ಟೇ ಅಲ್ಲದೆ ಸಾರ್ವಜನಿಕ ಆಸ್ತಿ ಬಳಸಿಕೊಂಡು ನಡೆಯುತ್ತಿರುವ ವೈಜ್ಞಾನಿಕತೆ ವಿರೋಧಿ ಚಟುವಟಿಕೆಗೆ ಸ್ಪಷ್ಟ ಉದಾಹರಣೆಯಾಗಿದೆ. ಬಸ್ ನಿಲ್ದಾಣದಂತಹ ಸರಕಾರಿ ಜಾಗಗಳು ಶೈಕ್ಷಣಿಕ, ಸಾಮಾಜಿಕ ಜಾಗೃತಿಗಾಗಿ ಬಳಸಬೇಕಾದ ಸ್ಥಳಗಳಾಗಿದ್ದು, ಇಂಥ ಪ್ರಚೋದಕ ಮತ್ತು ಮೋಸದ ಭರವಸೆ ನೀಡುವ ಜಾಹೀರಾತುಗಳು ಪ್ರಜ್ಞೆಗಿಂತ ಭ್ರಮೆ ಬಿತ್ತುವ ಕೆಲಸ ಮಾಡುತ್ತಿವೆ.

1001988809

ಸಾರ್ವಜನಿಕ ಆವರಣದಲ್ಲಿ ಇಂಥ ಜಾಹೀರಾತುಗಳು ಕಾಣಿಸಿಕೊಳ್ಳುತ್ತಿರುವುದು, ಸಂಬಂಧಿತ ಸಂಸ್ಥೆಗಳ ನಿಯಂತ್ರಣ ವ್ಯವಸ್ಥೆ ಎಷ್ಟು ಶಿಥಿಲವಾಗಿದೆ ಎಂಬುದನ್ನು ಸ್ಪಷ್ಟವಾಗಿ ತೋರಿಸುತ್ತದೆ. ಇದು ಯಾವುದೇ ಅನುಮತಿ ಪ್ರಕ್ರಿಯೆಯಿಲ್ಲದೆ ನಡೆದಿದೆಯೋ ಅಥವಾ ಸಂಬಂಧಿತ ಅಧಿಕಾರಿಗಳ ನಿರ್ಲಕ್ಷ್ಯದಿಂದ ನಡೆದಿದೆಯೋ ಎಂಬುದನ್ನು ಬಹಿರಂಗಪಡಿಸುವ ಗಂಭೀರ ತನಿಖೆ ಅವಶ್ಯಕವಾಗಿದೆ. ಇಂತಹ ಜಾಹೀರಾತುಗಳನ್ನು ಹಾಕುವವರ, ಅವುಗಳನ್ನು ಅನುಮತಿಸಿದವರ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳುವುದು ಮತ್ತು ಭವಿಷ್ಯದಲ್ಲಿ ಈ ರೀತಿಯ ಮೋಸದ ಬಿತ್ತಣಕ್ಕೆ ಅವಕಾಶ ನೀಡದ ರೀತಿಯಲ್ಲಿ ಕಟ್ಟುನಿಟ್ಟಾದ ನಿಯಮ ರೂಪಿಸುವುದು ಇಂದು ಅತ್ಯವಶ್ಯಕವಾಗಿದೆ.

ಸಾರ್ವಜನಿಕ ಸ್ಥಳಗಳಲ್ಲಿ, ವಿಶೇಷವಾಗಿ ಸರ್ಕಾರಿ ಆಸ್ತಿಗಳಲ್ಲಿ ಇವುಗಳು ಸಂಪೂರ್ಣ ನಿಷೇಧವಾಗಬೇಕು.ಈ ಜಾಹೀರಾತುಗಳಿಗೆ ಅನುಮತಿ ನೀಡಿದ ಅಧಿಕಾರಿಗಳ ವಿರುದ್ಧ ಕ್ರಮ ಜರುಗಿಸಬೇಕಾಗಿದೆ.ಈ ರೀತಿಯ ಜಾಹೀರಾತುಗಳು ಸಮಾಜದಲ್ಲಿ ಸುಳ್ಳು ನಿರೀಕ್ಷೆ ಹುಟ್ಟುಹಾಕುತ್ತವೆ ಮತ್ತು ಜನರನ್ನ ದುರ್ಬಳಕೆ ಮಾಡುತ್ತವೆ. ಇದಕ್ಕೆ ತಕ್ಷಣದ ಮಟ್ಟದಲ್ಲಿ ಕಡಿವಾಣ ಹಾಕಬೇಕಾಗಿದೆ.

ಈ ಸಂಬಂಧ, ನಿತ್ಯ ಪ್ರಯಾಣಿಸುವ ಪ್ರಯಾಣಿಕರೊಬ್ಬರು ಈದಿನ ಡಾಟ್ ಕಾಮ್ ಗೆ ತಮ್ಮ ಅಸಮಾಧಾನವನ್ನು ವ್ಯಕ್ತಪಡಿಸಿದ್ದಾರೆ. ಅವರು KSRTC ಬಸ್ ನಿಲ್ದಾಣದಂತಹ ಸಾರ್ವಜನಿಕ ಜಾಗದಲ್ಲಿ ಇಂತಹ ಮಾಟ-ಮಂತ್ರ ಹಾಗೂ ವೈಜ್ಞಾನಿಕತೆಯಿಲ್ಲದ ಜಾಹೀರಾತುಗಳನ್ನು ಅನುಮತಿಸಲಾಗುತ್ತಿರುವುದನ್ನು ತೀವ್ರವಾಗಿ ವಿರೋಧಿಸುತ್ತಿದ್ದು, ಇದು ಸಾರ್ವಜನಿಕ ಬುದ್ಧಿವಂತಿಕೆ ಹಾಗೂ ಜ್ಞಾನದ ಬೆಳವಣಿಗೆಗೆ ಮಾರಕವೆಂದು ಹೇಳಿದ್ದಾರೆ. ಅಲ್ಲದೇ, ಇವು ಭಾವನಾತ್ಮಕ ಬಿಕ್ಕಟ್ಟಿನಲ್ಲಿರುವ ಸಾಮಾನ್ಯ ಜನರನ್ನು ಮೋಸಗೊಳಿಸುತ್ತವೆ ಎಂದು ಆತಂಕ ವ್ಯಕ್ತಪಡಿಸಿ, ಈ ಕುರಿತು ಸಂಬಂಧಿತ ಅಧಿಕಾರಿಗಳು ತಕ್ಷಣ ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿದ್ದಾರೆ.

ಜಾಹೀರಾತು ಪ್ರದರ್ಶನದ ಬಗ್ಗೆ ಪ್ರತಿಕ್ರಿಯಿಸಿರುವ KSRTC ಜಿಲ್ಲಾ ಸಾರಿಗೆ ಅಧಿಕಾರಿ (DTO) ದಿನೇಶ್, “ಈ ಜಾಹೀರಾತು ಯಾವ ರೀತಿಯದು ಎಂಬ ಮಾಹಿತಿ ಬಂದಿರಲಿಲ್ಲ. ಗೈಡ್‌ಲೈನ್ಸ್ ಉಲ್ಲಂಘನೆಯಾಗದಂತೆ ಕ್ರಮ ಕೈಗೊಳ್ಳಲಾಗುತ್ತದೆ. ಜಾಹೀರಾತು ಫಲಕ ತೆಗೆಸುತ್ತೇವೆ ಸರ್” ಎಂದು ಸ್ಪಷ್ಟಪಡಿಸಿದರು. ಆದರೆ, ಸಾರ್ವಜನಿಕ ಆಸ್ತಿಯ ಮೇಲಿನ ಜವಾಬ್ದಾರಿಯ ನಿರ್ವಹಣೆ ಕುರಿತು ಅಧಿಕೃತ ಗೈಡ್‌ಲೈನ್‌ಗಳು ಪಾಲನೆಯಾಗಿಲ್ಲ ಎಂಬ ಆರೋಪಕ್ಕೆ ಸ್ಪಷ್ಟ ಉತ್ತರ ನೀಡಿಲ್ಲ.

ಇದೇ ಸಂದರ್ಭದಲ್ಲಿ, ಈ ರೀತಿಯ ಮೌಢ್ಯಪ್ರೇರಿತ ಜಾಹೀರಾತುಗಳಿಗೆ ಅವಕಾಶ ನೀಡುವುದು ಸರಿಯೇ? ಎಂದು ಪ್ರಶ್ನಿಸಲಾಗಿ, KSRTC ಡಿವಿಷನ್ ಕಂಟ್ರೋಲರ್ (DC) ರವರನ್ನು ಸಂಪರ್ಕಿಸಲು ಸಲಹೆ ನೀಡಿದರು. “DC ಸೋಮವಾರದವರೆಗೆ ರಜೆಯಲ್ಲಿದ್ದಾರೆ, ನಂತರ ಮಾತನಾಡಿ ಮಾಹಿತಿ ಪಡೆಯಿರಿ” ಎಂದು ವಿಷಯವನ್ನು ಮುಂದೂಡಿದರು. ಈ ಉತ್ತರ ಆಡಳಿತಾತ್ಮಕ ನಿರ್ಲಕ್ಷ್ಯವನ್ನು ಬಹಿರಂಗಗೊಳಿಸುತ್ತಿದ್ದು, ಸರಕಾರಿ ಸ್ವಾಮ್ಯದ ಸಂಸ್ಥೆಯೇ ಇಂತಹ ಜಾಹೀರಾತುಗಳಿಗೆ ಪ್ರೋತ್ಸಾಹ ನೀಡುತ್ತಿರುವುದು ಹಲವಾರು ಪ್ರಶ್ನೆಗಳಿಗೆ ಎಡೆಮಾಡಿಕೊಡುತ್ತಿದೆ.

ಇದನ್ನೂ ಓದಿ: ಶಿವಮೊಗ್ಗ | ನಿರ್ಮಿತಿ ಕೇಂದ್ರದ ನಿರ್ಲಕ್ಷ್ಯ; ಕ್ರಮ ಕೈಗೊಳ್ಳಲು ಮನವಿ

ಸರ್ಕಾರಿ ಸಂಸ್ಥೆಗಳ ಜವಾಬ್ದಾರಿಯುತ ನಿಲುವು ಹಾಗೂ ನೈತಿಕ ನಡತೆಯ ನಿರೀಕ್ಷೆಯ ನಡುವೆ, ಕೇವಲ ಜಾಹೀರಾತುದಾರರಿಂದ ಹಣ ಬರತ್ತೆ ಎಂಬ ಲಾಭದ ದೃಷ್ಟಿಯಿಂದ ಮೌಢ್ಯತೆಯಂತಹ ಭ್ರಾಂತಿಯ ವಿಚಾರಗಳನ್ನು ಸಾರ್ವಜನಿಕ ಜಾಗಗಳಲ್ಲಿ ಸಕ್ರಿಯಗೊಳಿಸುವುದು ಖಂಡನಾರ್ಹ. ಜನಸಾಮಾನ್ಯರು ನಂಬಿಕೆಯನ್ನಿಟ್ಟಿರುವ ಸಂಸ್ಥೆಗಳೇ ಈ ರೀತಿ ಕಾರ್ಯನಿರ್ವಹಿಸುವುದಾದರೆ, ಖಾಸಗಿ ಬೋರ್ಡುಗಳಿಗೂ ತಡೆ ಇರುವುದೆಂಬ ಭರವಸೆಯೇ ಕುಸಿಯುತ್ತದೆ. ಇಂತಹ ಸಂದರ್ಭದಲ್ಲಿ, “ಸರ್ಕಾರದ ಸಂಸ್ಥೆಯೇ ಜನರ ಮಾರ್ಗ ತಪ್ಪಿಸುತ್ತಿದೆಯಾದರೆ, ಸಾರ್ವಜನಿಕರ ಭದ್ರತೆ ಮತ್ತು ಜಾಗೃತಿಯ ಭವಿಷ್ಯವೇನು?” ಎಂಬ ಪ್ರಶ್ನೆಯು ಹೆಚ್ಚು ಪ್ರಸ್ತುತವಾಗುತ್ತದೆ.

raghavendra 1
+ posts

ರಾಘವೇಂದ್ರ ರವರು ಹಾಸನ ಜಿಲ್ಲೆಯ ಅರಸೀಕೆರೆ ತಾಲೂಕಿನ ಉಂಡಿಗನಾಳು ಗ್ರಾಮದವರು. ಕುವೆಂಪು ವಿಶ್ವವಿದ್ಯಾಲಯದಲ್ಲಿ ಬಿಎಸ್ಸಿ ಪದವಿ ಪಡೆದಿರುವ ಇವರು ಈದಿನ ಡಾಟ್ ಕಾಮ್ ಮಾಧ್ಯಮ ಸಂಸ್ಥೆಯಲ್ಲಿ ಕಳೆದ 2023 ರಿಂದ ಶಿವಮೊಗ್ಗ ಜಿಲ್ಲಾ ವರದಿಗಾರರಾಗಿ ಕರ್ತವ್ಯ ನಿರ್ವಹಿಸುತ್ತಿದ್ದಾರೆ.
ವರದಿಗಾರಿಕೆ, ರಾಜಕೀಯ ವಿಶ್ಲೇಷಣೆ,Anchoring, (ನಿರೂಪಣೆ) ವಿಶೇಷ ಸ್ಟೋರಿ ಹಾಗೂ ತನಿಖಾ ವರದಿಗಾರಿಕೆ ಮಾಡುವುದು ಇವರ ಅಚ್ಚು ಮೆಚ್ಚಿನ ಕ್ಷೇತ್ರ.

ಈ ಮಾಧ್ಯಮ ನಿಮ್ಮದು. ನಿಮ್ಮ ಬೆಂಬಲವೇ ನಮ್ಮ ಬಲ. ವಂತಿಗೆ ನೀಡುವುದರ ಮೂಲಕ ಕೈಜೋಡಿಸಿ, ಸತ್ಯ ನ್ಯಾಯ ಪ್ರೀತಿಯ ಮೌಲ್ಯಗಳನ್ನು ಹಂಚಲು ಜೊತೆಯಾಗಿ. ಸಹಾಯ ಅಥವಾ ಬೆಂಬಲ ನೀಡಲು ದಯವಿಟ್ಟು +91 9035362958 ಅನ್ನು ಸಂಪರ್ಕಿಸಿ.

ಪೋಸ್ಟ್ ಹಂಚಿಕೊಳ್ಳಿ:

ರಾಘವೇಂದ್ರ
ರಾಘವೇಂದ್ರ
ರಾಘವೇಂದ್ರ ರವರು ಹಾಸನ ಜಿಲ್ಲೆಯ ಅರಸೀಕೆರೆ ತಾಲೂಕಿನ ಉಂಡಿಗನಾಳು ಗ್ರಾಮದವರು. ಕುವೆಂಪು ವಿಶ್ವವಿದ್ಯಾಲಯದಲ್ಲಿ ಬಿಎಸ್ಸಿ ಪದವಿ ಪಡೆದಿರುವ ಇವರು ಈದಿನ ಡಾಟ್ ಕಾಮ್ ಮಾಧ್ಯಮ ಸಂಸ್ಥೆಯಲ್ಲಿ ಕಳೆದ 2023 ರಿಂದ ಶಿವಮೊಗ್ಗ ಜಿಲ್ಲಾ ವರದಿಗಾರರಾಗಿ ಕರ್ತವ್ಯ ನಿರ್ವಹಿಸುತ್ತಿದ್ದಾರೆ. ವರದಿಗಾರಿಕೆ, ರಾಜಕೀಯ ವಿಶ್ಲೇಷಣೆ,Anchoring, (ನಿರೂಪಣೆ) ವಿಶೇಷ ಸ್ಟೋರಿ ಹಾಗೂ ತನಿಖಾ ವರದಿಗಾರಿಕೆ ಮಾಡುವುದು ಇವರ ಅಚ್ಚು ಮೆಚ್ಚಿನ ಕ್ಷೇತ್ರ.

LEAVE A REPLY

Please enter your comment!
Please enter your name here

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಯುವಪರಿವರ್ತನೆ ಯಾತ್ರೆ: ಬಾಗಲಕೋಟೆಯಲ್ಲಿ ಚಾಲನೆ

ಯುವಜನರನ್ನು ರಾಜ್ಯದ ಅಭಿವೃದ್ಧಿಯತ್ತ ಚಿತ್ತಹರಿಸಲು, ಪ್ರಜೆಗಳ ಆರೋಗ್ಯ, ಶಿಕ್ಷಣ, ಸಬಲೀಕರಣ, ಉದ್ಯೋಗದ...

ಕೊಪ್ಪಳ | ಪ್ರವಾದಿ ಮಹಮ್ಮದ್‌ ಸಂದೇಶವನ್ನು ನಾವು ಪಾಲನೆ ಮಾಡಬೇಕು: ಲಾಲ್ ಹುಸೇನ್ ಕಂದ್ಗಲ್

'ಖುರಾನ್' ಬರುವ ಪ್ರವಾದಿ ಮಹಮ್ಮದ್‌ ಅವರು ಹೇಳಿದ ಸತ್ಯವನ್ನೇ ಭಾರತೀಯ ಪುರಾಣಗಳು...

ಶಿವಮೊಗ್ಗದ ಸಂಚಾರ ವ್ಯವಸ್ಥೆಯಲ್ಲಿ ಅರಾಜಕತೆ: ಅಧಿಕಾರಿಗಳ ನಿರ್ಲಕ್ಷ್ಯಕ್ಕೆ ನಾಗರಿಕರು ಹೈರಾಣು

ಒಮ್ಮೆ ಶಾಂತ, ಶಿಕ್ಷಣ ಹಾಗೂ ಸಂಸ್ಕೃತಿಯ ತಾಣವಾಗಿದ್ದ ಶಿವಮೊಗ್ಗ ನಗರ ಇತ್ತೀಚಿನ...

ವಿದ್ಯಾರ್ಥಿ ಕಣ್ಣಲ್ಲಿ ಗಾಂಧೀಜಿ ಬಯಸಿದ ನ್ಯಾಯಸಮ್ಮತ ತತ್ವದ ರಾಜಕೀಯ ವ್ಯವಸ್ಥೆ

ಸ್ವಾತಂತ್ರ್ಯೋತರ ಭಾರತ ಹೇಗಿರಬೇಕು ಎಂಬುದರ ಕುರಿತು ಗಾಂಧೀಜಿಯ ಕನಸು ವಿಭಿನ್ನವಾಗಿದ್ದು, ರಾಜಕೀಯವು...

Download Eedina App Android / iOS

X