ಪ್ರತಿ ವರ್ಷದಂತೆ ತುಂಬಿ ಹರಿಯುತ್ತಿರುವ ಧರ್ಮ ಜಲಾಶಯಕ್ಕೆ ರೈತರೊಂದಿಗೆ ಸವಣೂರು ಉಪ ವಿಭಾಗಾಧಿಕಾರಿ ಶುಭಂ ಶುಕ್ಲಾ, ಹಾನಗಲ್ಲ ತಹಸೀಲ್ದಾರರು ಬಾಗೀನ ಅರ್ಪಣೆ ಮಾಡಿದರು.
ಹಾವೇರಿ ಜಿಲ್ಲೆಯ ಹಾನಗಲ ತಾಲ್ಲೂಕಿನಲ್ಲಿರುವ ಧರ್ಮ ಜಲಾಶಯಕ್ಕೆ ಬಾಗೀನ ಅರ್ಪಣೆ ಸಲ್ಲಿಸಿದರು.
ನಂತರ ಧರ್ಮಾ ಜಲಾಶಯದ ಸ್ಥಿತಿಗತಿಯನ್ನು ವೀಕ್ಷಿಸಿ ಮರೀಚಿಕೆಯಾದ ಅಭಿವೃದ್ಧಿ ಕಾಮಗಾರಿಗಳು ಹಾಗೂ ಡ್ಯಾಂ ನಿರ್ಮಾಣ ಆಗಲು ತಮ್ಮ ಭೂಮಿ ಬಿಟ್ಟುಕೊಟ್ಟು, ಯಾವುದೇ ದಾಖಲೆಗಲಿಲ್ಲದೆ ನಿರಾಶ್ರಿತರಂತೆ ಬದುಕು ನಡೆಸುತ್ತಿರುವ ಧರ್ಮಾ ಕಾಲೋನಿ ರೈತರ ಕುಂದು ಕೊರತೆ ಆಲಿಸಿದರು.
ಧರ್ಮಾ ಜಲಾಶಯವನ್ನು ಪ್ರವಾಸಿ ತಾಣವಾಗಿಸಲು ಕೈಗೊಳ್ಳಬೇಕಾದ ಯೋಜನೆಗಳ ಕುರಿತು ರೈತರೊಂದಿಗೆ ಹಾಗೂ ಅಧಿಕಾರಿಗಳೊಂದಿಗೆ ಚರ್ಚಿಸಿದರು.
ಈ ಸುದ್ದಿ ಓದಿದ್ದೀರಾ? ಗದಗ | ಶಿರಹಟ್ಟಿ ತಾಲೂಕಿನ ವಿವಿಧ ಗ್ರಾಮಗಳಿಗೆ ಸಿಇಓ ಭರತ್ ಎಸ್ ಭೇಟಿ
ಈ ಸಂದರ್ಭದಲ್ಲಿ ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ ಹಾವೇರಿ ಜಿಲ್ಲಾ ಕಾರ್ಯಾದ್ಯಕ್ಷರು ರುದ್ರಪ್ಪ ಬಳಿಗಾರ, ಹಾನಗಲ್ಲ ತಾಲೂಕ ಅದ್ಯಕ್ಷರು ಚನ್ನಬಸಪ್ಪ ಹಾವಣಗಿ, ಜಿಲ್ಲಾ ಮುಖಂಡರು ಬಸವಂತಪ್ಪ ಮೆಳ್ಳಳ್ಳಿ, ಪುಟ್ಟಪ್ಪ ಸಾಬಳದ, ಗರುಶಾಂತಪ್ಪ ಗುರುಸಿದ್ದಪ್ಪನವರ, ಕಾರವಾರ ಜಿಲ್ಲಾ ಅದ್ಯಕ್ಷರು ಸತೀಶ ನಾಯ್ಕ, ರಾಜ್ಯ ಕಾರ್ಯದರ್ಶಿಗಳು ರಾಘವೇಂದ್ರ ನಾಯ್ಕ,
ಅಧಿಕಾರಿಗಳು ಗಿರೀಶ ಹಾಗೂ ರಾಖೇಶ ಸೇರಿದಂತೆ ಹಲವು ಅಧಿಕಾರಿಗಳು ರೈತ ಮುಖಂಡರು, ಮಹಿಳೆಯರು ಉಪಸ್ಥಿತರಿದ್ದರು.