ಕಲ್ಲಿಗೆ ಡಿಕ್ಕಿ ಹೊಡೆದು ಕಾರ ಪಲ್ಟಿಯಾಗಿ ಸ್ಥಳದಲ್ಲೇ ಮಹಿಳೆ ಸಾವನ್ನಪ್ಪಿದ್ದು ಕುಟುಂಬದ ಐವರಿಗೆ ಗಂಭೀರ ಗಾಯಗೊಂಡ ಘಟನೆ ರಾಯಚೂರು ನಗರದ ಮುನ್ಸಲಾಪುರ ಕ್ರಾಸ್ ಬಳಿ ನಡೆದಿದೆ.
ಹಾಜೀರಾ (65) ಮೃತಪಟ್ಟ ಮಹಿಳೆ ಎಂದು ಗುರುತಿಸಲಾಗಿದೆ. ಉಡುಪಿ ಜಿಲ್ಲೆಯ ಕುಂದಾಪುರ ತಾಲ್ಲೂಕಿನ ಕೊಟ್ರೇಶ್ವರ ಗ್ರಾಮದ ನಿವಾಸಿ ಎಂದು ಹೇಳಲಾಗಿದೆ. ಗಂಭೀರ ಗಾಯಗೊಂಡ ಇಶಾನ್ ಅಬ್ದುಲ್, ಇಲಾನ್, ಇಸ್ಮಾಯಿಲ್, ಮಹಮದ್ ಇಜಾನ್, ಮಹಮದ್ ಇಮ್ರಾನ್ ಎಂಬುವವರನ್ನು ರಿಮ್ಸ್ ಆಸ್ಪತ್ರೆಗೆ ದಾಖಲಿಸಲಾಗಿದೆ.
ಈ ಸುದ್ದಿ ಓದಿದ್ದೀರಾ? ರಾಯಚೂರು | ನಾಡ ತಹಶೀಲ್ದಾರ್ ಕಚೇರಿಯಲ್ಲಿ ಶಾರ್ಟ್ ಸರ್ಕ್ಯೂಟ್‌ನಿಂದ ಅಗ್ನಿ ; ದಾಖಲೆಗಳು ಭಸ್ಮ
ಉಡುಪಿಯ ಕುಂದಾಪುರ ತಾಲ್ಲೂಕಿನ ಕೋಟೇಶ್ವರ ಗ್ರಾಮದಿಂದ ಹೈದ್ರಾಬಾದ್ ಗೆ ಪ್ರವಾಸಕ್ಕೆಂದು ಕುಟುಂಬ ಸದಸ್ಯರು ಹೋಗುತ್ತಿದ್ದು ಕುಂದಾಪುರ, ಹುಬ್ಬಳ್ಳಿ, ಸಿಂಧನೂರು, ರಾಯಚೂರು ಮಾರ್ಗವಾಗಿ ಹೋಗುವಾಗ ಬೆಳಗಿನ ಜಾವ ಬೈಪಾಸ್ ರಸ್ತೆ ಬದಿಯಲ್ಲಿರುವ ಕಲ್ಲಿಗೆ ಕಾರು ಡಿಕ್ಕಿ ಹೊಡೆದು ಪಲ್ಟಿಯಾಗಿ ದುರ್ಘಟನೆ ಸಂಭವಸಿದೆ ಎನ್ನಲಾಗಿದೆ.
