ಶಿವಮೊಗ್ಗ, ಜಿಪಂ ಸಿಇಒ ಅವರ ಮನೆಯ ಅಡುಗೆ ಕೆಲಸದವನಿಗೆ ನೋಟಿಸ್ ನೀಡಿದ ವಿಚಾರಕ್ಕೆ ವಿಷ ಸೇವಿಸಿದ್ದ ವ್ಯಕ್ತಿ ಇಂದು ಸಾವಿಗೀಡಾಗಿದ್ದಾನೆ.
ಎರಡು ದಿನ ರಜೆ ಕೇಳಿ ಹೋಗಿದ್ದ ಸಿಇಒ ಮನೆಯ ಅಡುಗೆ ಕೆಲಸದಾತ ಸುರೇಶ್ 10 ದಿನದ ಬಳಿಕ ಬಂದ ಹಿನ್ನಲೆಯಲ್ಲಿ ಆತನಿಗೆ ನೋಟೀಸ್ ನೀಡಲಾಗಿತ್ತು. ಈ ನೊಟೀಸ್ ಗೆ ಹೆದರಿ ಸುರೇಶ್ ರೌಂಡಪ್ ಸೇವಿಸಿದ್ದರು.
ಅಸ್ವಸ್ಥರಾಗಿದ್ದ ಸುರೇಶ್ ಅವರನ್ನು ಮೆಗ್ಗಾನ್ ಆಸ್ಪತ್ರೆಗೆ ದಾಖಲಿಸಲಾಗಿತ್ತು.ಮೆಗ್ಗಾನ್ ಆಸ್ಪತ್ರೆಯಲ್ಲಿ ದಾಖಲಾಗಿದ್ದ ಸುರೇಶ್ ರಿಗೆ ಹೆಚ್ಚಿನ ಚಿಕಿತ್ಸೆಗಾಗಿ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿತ್ತು.
ದಾಖಲಾದ ಮೂರು ದಿನಗಳ ನಂತರ ಸುರೇಶ್ ಗೆ ಚಿಕಿತ್ಸೆ ಫಲಕಾರಿಯಾಗದೆ ಸಾವಾಗಿದೆ, ಅವರ ಮೃತದೇಹವನ್ನು ಮೆಗ್ಗಾನ್ ಗೆ ಸಾಗಿಸಲಾಗಿದೆ.
