ದೇಶದ ಜನಸಮುದಾಯ ವ್ಯವಸ್ಥಿತವಾಗಿ ಬದುಕಲು ಸಂವಿಧಾನದ ಸಂರಕ್ಷಣೆ ಅತ್ಯಗತ್ಯ ಎಂದು ಸತ್ಯಶೋಧಕ ಸಂಘದ ರಾಜ್ಯಾಧ್ಯಕ್ಷ ಪರಶುರಾಮ ಮಹಾರಾಜನವರ್ ಹೇಳಿದರು.
ಬಾಗಲಕೋಟೆ ಜಿಲ್ಲೆಯ ಬಾದಾಮಿ ತಾಲೂಕಿನ ಬೆವೂರು ಆದರ್ಶ ವಿದ್ಯಾವರ್ಧಕ ಸಂಘ, ಮಹಾವಿದ್ಯಾಲಯ, ಆದರ್ಶ ಸಂಯುಕ್ತ ಪದವಿಪೂರ್ವ ಕಲಾ ಮಹಾವಿದ್ಯಾಲಯ ಹಾಗೂ ಸತ್ಯಶೋಧನ ಸಂಸ್ಥೆಯ ಸಹಯೋಗದಲ್ಲಿ ಸಂಸ್ಥೆಯ ಸಭಾಭವನದಲ್ಲಿ ಹಮ್ಮಿಕೊಂಡಿದ್ದ ಸಂವಿಧಾನಯಾನ ಕಾರ್ಯಕ್ರಮದದಲ್ಲಿ ಅವರು ಮಾತನಾಡಿದರು.
”ಸರ್ವರಿಗೂ ಸಮಬಾಳು, ಸಮಪಾಲು ಸಂವಿಧಾನದ ಆಶಯವಾಗಿದೆ. ಎಲ್ಲರಿಗೂ ಸಾಮಾಜಿಕ, ಆರ್ಥಿಕ, ರಾಜಕೀಯ ನ್ಯಾಯವನ್ನು ಒದಗಿಸುವ ಅಂಶಗಳು ಸಂವಿಧಾನದಲ್ಲಿ ಅಡಕಗೊಂಡಿವೆ” ಎಂದರು.
ಪ್ರಾಚಾರ್ಯ ವಿ.ಬಿ.ಅರಹುಣಸಿ ಮಾತನಾಡಿ, “ವಿದ್ಯಾರ್ಥಿಗಳು ಸಂವಿಧಾನದ ಮಹತ್ವವನ್ನು ಅರಿತಾಗ ಗೌರವಯುತ ನಾಗರಿಕರಾಗಿ ಬಾಳಲು ಸಾಧ್ಯ” ಎಂದು ಹೇಳಿದರು.
ಇದನ್ನೂ ಓದಿ: ಬಾಗಲಕೋಟೆ | ಪಿಎಚ್‌ಸಿಗೆ ಕಾಯಂ ವೈದ್ಯರ ನೇಮಕಕ್ಕೆ ಮೆಟಗುಡ್ಡ ಗ್ರಾಮಸ್ಥರ ಆಗ್ರಹ: ಟಿಎಚ್‌ಒ ಭರವಸೆ
ಕಾರ್ಯಕ್ರಮದಲ್ಲಿ ಸಂಸ್ಥೆಯ ಅಧ್ಯಕ್ಷ ಜಿ.ಜಿ.ಮಾಗನೂರ, ಉಪಾಧ್ಯಕ್ಷ ರತನ್ ಕುಮಾರ ವೈಜಾಪುರ, ಗ್ರಾಪಂ ಸದಸ್ಯ ಶರಣಪ್ಪ,ಮಾಗನೂರ, ಸತ್ಯಶೋಧಕ ಸಂಸ್ಥೆಯ ಸಂಚಾಲಕ ಎ.ಬಿ.ಕಲಾಲ್, ಮುಖ್ಯಗುರು ಯೋಗೇಶ್ ಲಮಾಣಿ, ಉಪನ್ಯಾಸಕರಾದ ಜೆ. ಕೆ.ಮಲ್ಲಾಪುರ, ಎಸ್.ಎನ್.ಬಾರ್ಕಿ, ಪ್ರಕಾಶ ತಳವಾರ, ಎಸ್.ಬಿ.ಹಂಚಿನಾಳ, ಜಿ.ಎಸ್. ಗೌಡರ, ಡಿ.ವೈ.ಬುಡ್ಡಿ, ವಸಂತ್ ಕುಮಾರ ನಿಲುಗಲ್, ಎಸ್.ಕೆ.ಮಾದಳ್ಳಿ, ಮಾಗನೂರ ಸೇರಿದಂತೆ ಇತರರಿದ್ದರು.