ಕೊಡಗು ಜಿಲ್ಲೆ, ವಿರಾಜಪೇಟೆ ತಾಲ್ಲೂಕಿನ ಮಾಲ್ದಾರೆ ಅರಣ್ಯ ಪ್ರದೇಶ ವ್ಯಾಪ್ತಿಯ ಅವರೆಗುಂದ ಗ್ರಾಮದಲ್ಲಿ ಬೃಹತ್ ಗಾತ್ರದ ಹೆಬ್ಬಾವು ಪತ್ತೆಯಾಗಿದೆ.
ಸ್ನೇಕ್ ಸುರೇಶ್ ಪೂಜಾರಿ ಹಾಗೂ ಅರಣ್ಯ ಸಿಬ್ಬಂದಿಗಳು ಹೆಬ್ಬಾವನ್ನು ರಕ್ಷಿಸಿ ಅರಣ್ಯಕ್ಕೆ ಬಿಡುವಲ್ಲಿ ಯಶಸ್ವಿಯಾಗಿದ್ದಾರೆ. ಗ್ರಾಮದ ಸಮುದಾಯ ಭವನದ ಬಳಿರುವ ಅಂಗನವಾಡಿ ಪಕ್ಕ ಬೃಹತ್ ಗಾತ್ರದ ಹೆಬ್ಬಾವು ಕಂಡು ಬಂದಿದ್ದು ಸ್ಥಳೀಯರು ತಕ್ಷಣವೇ ಗ್ರಾಮ ಪಂಚಾಯ್ತಿ ಸದಸ್ಯ ಮಹೇಶ್ ಕುಮಾರ್ ಗೆ ಸುದ್ದಿ ಮುಟ್ಟಿಸಿದ್ದಾರೆ.
ಈ ಸುದ್ದಿ ಓದಿದ್ದೀರಾ? ಮೈಸೂರು | ಕನ್ನಡಪರ ಹೋರಾಟಗಾರ ಸ. ರ. ಸುದರ್ಶನ ಹೃದಯಾಘಾತದಿಂದ ನಿಧನ
ತಕ್ಷಣ ಅರಣ್ಯ ಇಲಾಖೆಗೆ ಮಾಹಿತಿ ನೀಡಿದ್ದು. ಅರಣ್ಯ ಇಲಾಖೆಯ ಆರ್ ಆರ್ ಟಿ ತಂಡ ಮತ್ತು ಸ್ನೇಕ್ ಸುರೇಶ್ ಬರೋಬ್ಬರಿ 12 ಅಡಿ ಉದ್ದ 42 ಕೆಜಿ ತೂಕದ ಹೆಬ್ಬಾವನ್ನು ಸೆರೆ ಹಿಡಿದ್ದಾರೆ. ಅಂಗನವಾಡಿ ಬಳಿ ಪುಟ್ಟ ಪುಟ್ಟ ಮಕ್ಕಳು ಇರುವ ಸಂದರ್ಭದಲ್ಲೇ ಹಾವು ಗೋಚರಿಸಿದ್ದು, ಗ್ರಾಮಸ್ಥರಲ್ಲಿ ಆತಂಕ ಮೂಡಿಸಿದೆ.