ಜಾತಿ, ಧರ್ಮಗಳ ನಡುವೆ ದ್ವೇಷ ಹುಟ್ಟುವಂತಹ ವಿವಾದಾತ್ಮಕ ಹೇಳಿಕೆ ನೀಡಿ ಯೂಟ್ಯೂಬ್ನಲ್ಲಿ ಪ್ರಸಾರ ಮಾಡಿದ ಹಿನ್ನೆಲೆಯಲ್ಲಿ ವಸಂತ್ ಗಿಳಿಯಾರ್ ವಿರುದ್ಧ ಬೆಳ್ತಂಗಡಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಸಾಮಾಜಿಕ ಹೋರಾಟಗಾರ ಶೇಖರ ಲಾಯಿಲ ಅವರು ನೀಡಿದ ದೂರಿನನ್ವಯ ಸೆಕ್ಷನ್ 196(1)(a) ಹಾಗೂ 353(2) ಬಿ ಎನ್ ಎಸ್ ನಡಿ ದೂರು ದಾಖಲಿಸಲಾಗಿದೆ.
ಬೆಂಗಳೂರಿನಲ್ಲಿ ನಡೆದ ಧರ್ಮ ಸಂರಕ್ಷಣಾ ಸಮಾವೇಶದಲ್ಲಿ ವಸಂತ್ ಗಿಳಿಯಾರ್, “ಬೆಳ್ತಂಗಡಿ ಭಾಗದಲ್ಲಿ ಮಿಷನರಿಗಳ ಪ್ರಭಾವದಿಂದ ಹಿಂದೂಗಳ ತುಳಸಿಕಟ್ಟೆಯನ್ನು ಒಡೆದು ಅಲ್ಲಿ ಶಿಲುಬೆಗಳನ್ನು ಇಡಲಾಗಿತ್ತು. ಗ್ರಾಮಾಭಿವೃದ್ಧಿ ಯೋಜನೆ ಬಂದ ಬಳಿಕ ಶಿಲುಬೆಗಳನ್ನು ತೆಗೆದು ಮತ್ತೆ ತುಳಸಿಕಟ್ಟೆಗಳನ್ನು ಮರು ಸ್ಥಾಪಿಸಲಾಗಿದೆ” ಎಂಬ ಪ್ರಚೋದನಾಕಾರಿ ಹೇಳಿಕೆ ನೀಡಿದ್ದಾರೆ ಎಂದು ದೂರಿನಲ್ಲಿ ಉಲ್ಲೇಖಿಸಲಾಗಿದೆ.
ಇದನ್ನು ಓದಿದ್ದೀರಾ? ಬಡವರ ಕೆಲಸದಲ್ಲಿ ಉದಾಸೀನತೆ ತೋರುವ ಅಧಿಕಾರಿಗಳ ಶೀಘ್ರ ವರ್ಗಾವಣೆ : ಶಾಸಕ ಅಶೋಕ್ ರೈ
ಈ ಹೇಳಿಕೆಯಿಂದ ಧರ್ಮಗಳ ನಡುವೆ ವೈಷಮ್ಯ ಬೆಳೆದು ಸಾಮಾಜಿಕ ಘರ್ಷಣೆಗೆ ಕಾರಣವಾಗುತ್ತದೆ ಎಂದು ಶೇಖರ್ ಲಾಯಿಲ ತಮ್ಮ ದೂರಿನಲ್ಲಿ ವಿವರಿಸಿದ್ದು, ಅದರಂತೆ ಪ್ರಕರಣ ದಾಖಲಿಸಿರುವುದಾಗಿ ಬೆಳ್ತಂಗಡಿ ಪೊಲೀಸರು ತಿಳಿಸಿದ್ದಾರೆ.
