ಇಳಕಲ್ | ಸರಕಾರ ನಿಗದಿಪಡಿಸಿದ ಬೆಳೆವಿಮೆ ಪಾವತಿಸಲು ಒತ್ತಾಯ: ಕಿಸಾನ್ ಸಂಘದಿಂದ ಪ್ರತಿಭಟನೆ

Date:

Advertisements

ಅತಿವೃಷ್ಟಿ , ಅನಾವೃಷ್ಟಿ ಹಾಗೂ ವಿವಿಧ ಪ್ರಕೃತಿ ವಿಕೋಪಗಳಿಂದ ಬೆಳೆಹಾನಿ ಆದರೆ ಪರಿಹಾರಕ್ಕಾಗಿ ಕರ್ನಾಟಕ ರೈತ ಸುರಕ್ಷಾ ಪ್ರಧಾನ ಮಂತ್ರಿ ಫಸಲ ಭೀಮಾ ಯೋಜನೆಯಡಿಯಲ್ಲಿ ವಿಮಾ ಕಂಪನಿಗೆ ಹೋಬಳಿವಾರು ಸರಕಾರ ನಿಗದಿಪಡಿಸಿದ ಬೆಳೆವಿಮೆ ಪಾವತಿಸಬೇಕು ಎಂದು ಭಾರತೀಯ ಕಿಸಾನ್ ಸಂಘದ ಜಿಲ್ಲಾಧ್ಯಕ್ಷ ವಿರೂಪಾಕ್ಷಯ್ಯ ಪಂ.ಹಿರೇಮಠ ಸರಕಾರಕ್ಕೆ ಒತ್ತಾಯಿಸಿದರು.

ಬಾಗಲಕೋಟೆ ಜಿಲ್ಲೆಯ ಇಳಕಲ್ ನಗರದ ತಹಶೀಲ್ದಾರ ಕಚೇರಿ ಮುಂದೆ ಭಾರತೀಯ ಕಿಸಾನ್ ಸಂಘ ಕರ್ನಾಟಕ ಪ್ರದೇಶ ಉತ್ತರ ಪ್ರಾಂತ ಜಿಲ್ಲಾ ಘಟಕ ಹಾಗೂ ಇಲಕಲ್ ತಾಲೂಕು ಘಟಕದ ನೇತ್ರತ್ವದಲ್ಲಿ ರೈತರು ಪ್ರತಿಭಟನೆ ನಡೆಸಿ ಪ್ರಧಾನ ಮಂತ್ರಿ ಹಾಗೂ ಮುಖ್ಯಮಂತ್ರಿಗೆ ತಹಶೀಲ್ದಾರ ಮೂಲಕ ಮನವಿ ಸಲ್ಲಿಸಿದ ನಂತರ ಅವರು ಮಾತನಾಡಿದರು.

ಬೆಳೆಗೆ ಪ್ರತಿ ವರ್ಷ ರೈತರು ವಿಮಾ ಪ್ರೀಮಿಯಮ್ ಪಾವತಿಸಿದರೂ ಬೆಳೆ ಹಾನಿ ಆದ ಸಂದರ್ಭದಲ್ಲಿ ವಿಮಾ ಕಂಪನಿಯವರು ಜಿಲ್ಲೆಯಲ್ಲಿ ಕ್ಲೇಮ ಪಾವತಿಸದೇ ಸದಾ ಕಾಲ ಮೋಸ ಮಾಡಿ‌ ನಿಗದಿ ಪಡಿಸಿದ ಇನ್ಸೂರೆನ್ಸ್‌ ಕಂಪನಿಯವರು ಭ್ರಷ್ಟಾಚಾರದಲ್ಲಿ ತೊಡಗಿದ್ದು, ತಕ್ಷಣ ಸರಕಾರ ಈ ಹಗರಣವನ್ನು ಸಿ.ಬಿ.ಐ ಇಲ್ಲವೆ ಸಿ.ಐ.ಡಿ ತನಿಖೆಗೊಳಪಡಿಸಿ ರೈತರಿಗೆ ಹಲವಾರು ವರ್ಷಗಳಿಂದ ಆಗಿರುವ ಮೋಸಕ್ಕೆ ನ್ಯಾಯ ದೊರಕಿಸಿಕೊಂಡಬೇಕೆಂದು ಆಗ್ರಹಿಸಿದರು.

ಇಳಕಲ್ ತಾಲೂಕು ಅಧ್ಯಕ್ಷ ಮಲ್ಲಿಕಾರ್ಜುನ ಹಾವರಗಿ ಮಾತನಾಡಿ, ಕಳೆದ ಕೆಲವು ದಿನಗಳಿಂದ ಸತತವಾಗಿ ಸುರಿಯುತ್ತಿರುವ ಮಳೆಯಿಂದಾಗಿ ತಾಲೂಕಿನಲ್ಲಿ ತೇವಾಂಶ ಹೆಚ್ಚಾಗಿ ಬೆಳೆಗಳಾದ ಈರುಳ್ಳಿ, ಗೋವಿನಜೋಳ, ಸಜ್ಜೆ, ತೊಗರಿ, ಹೆಸರು,ಹತ್ತಿ, ಜೋಳ,ಮೆಣಸಿನಕಾಯಿ ಸೇರಿದಂತೆ ಕೃಷಿ ಹಾಗೂ ತೋಟಗಾರಿಕೆ,ರೇಷ್ಮೆ ಇಲಾಖೆಯ ವಿವಿಧ ಬೆಳೆಗಳು ನೀರುಪಾಲಾಗಿದೆ. ರೈತರು ಈ ಬೆಳೆಗಳನ್ನು ಬೆಳೆಯಲು ಲಕ್ಷಾಂತರ ರೂಪಾಯಿಗಳನ್ನು ಖರ್ಚು ಮಾಡಿದ್ದು, ಸಂಕಷ್ಟದಲ್ಲಿ ಸಿಲುಕಿದ್ದಾರೆ. ರೈತರಿಗೆ ಸರಕಾರ ಯಾವುದೇ ತಾಂತ್ರಿಕ ತೊಂದರೆ ನೆಪ ಹೇಳದೆ, ಸರಕಾರ ಬೆಳೆ ಹಾನಿಯಾದ ಜಮೀನಗಳ ಸಮೀಕ್ಷೆ ನಡೆಸಿ ನ್ಯಾಯೋಚಿತ ಬೆಳೆ ನಷ್ಟ ಪರಿಹಾರ ಒದಗಿಸಬೇಕೆಂದು ಆಗ್ರಹ ಪಡಿಸಿದರು.

ಉತ್ತರ ಪ್ರಾಂತ ಕಾರ್ಯಕಾರಿಣಿ ಸದಸ್ಯ ಸುಬ್ಬರಾಯಗೌಡ ಪಾಟೀಲ ಮಾತನಾಡಿ, ಬೆಳೆಗಳಿಗೆ ಆರ್.ಸಿ.ಎಪ್.ಜೈಕಿಸಾನ್ ದ ಜುವಾರಿ ಯೂರಿಯಾ ರಸಗೊಬ್ಬರ ಕೊರತೆಯಾಗಿದ್ದು ಈಗ ಅವಶಕತೆ ಇದ್ದು ತಕ್ಷಣ ಪೂರೈಸಬೇಕು. ಅತಿವೃಷ್ಡಿಯಿಂದಾಗಿ ಮನೆಗಳು ಬೀಳುತ್ತಿದ್ದು, ಮರು ನಿರ್ಮಾಣಕ್ಕೆ ಪರಿಹಾರ ಒದಗಿಸಬೇಕು. ಎಲ್ಲ ಬೇಡಿಕೆಗಳನ್ಬು ಶೀಘ್ರದಲ್ಲಿ ಈಡೇರಿಸಬೇಕು, ಇಲ್ಲದಿದ್ದರೆ ಮುಂಬರುವ ದಿನಗಳಲ್ಲಿ ರೈತರು ಉಗ್ರ ಹೋರಾಟ ಮಾಡಬೇಕಾಗುತ್ತದೆ ಎಚ್ಚರಿಸಿದರು.

ಇದನ್ನು ಓದಿದ್ದೀರಾ? ಮಂಗಳೂರು | ಬಾಲಕರ ಜಿಲ್ಲಾಮಟ್ಟದ ಕರಾಟೆ ಸ್ಪರ್ಧೆ: ಮೊಹಮ್ಮದ್ ಮಿಕ್ದಾದ್‌ಗೆ ಪ್ರಥಮ ಸ್ಥಾನ

ಪ್ರತಿಭಟನೆಯಲ್ಲಿ ಉಪಾಧ್ಯಕ್ಷ ಚಂದ್ರು ಗೌಡರ, ಪ್ರಧಾನ ಕಾರ್ಯದರ್ಶಿ ಮಂಜುನಾಥ ಗುಡಗುಂಟಿ, ದುರೀಣರಾದ ಬಸವರಾಜ ಅಂಗಡಿ,ಶರಷು ಗುಡಿಹಾಳ, ಬಸವರಾಜ ಕಂದಕೂರ, ರಾಚನಗೌಡ ಪಾಟೀಲ, ವೆಂಕಟೇಶ ಗದಗಿ, ವಿಶ್ವನಾಥ ಪಾಟೀಲ ಸೇರಿದಂತೆ ಅನೇಕರು ಇದ್ದರು.

ಈದಿನ 2
ಈ ದಿನ ಡೆಸ್ಕ್
+ posts

ಈ ಮಾಧ್ಯಮ ನಿಮ್ಮದು. ನಿಮ್ಮ ಬೆಂಬಲವೇ ನಮ್ಮ ಬಲ. ವಂತಿಗೆ ನೀಡುವುದರ ಮೂಲಕ ಕೈಜೋಡಿಸಿ, ಸತ್ಯ ನ್ಯಾಯ ಪ್ರೀತಿಯ ಮೌಲ್ಯಗಳನ್ನು ಹಂಚಲು ಜೊತೆಯಾಗಿ. ಸಹಾಯ ಅಥವಾ ಬೆಂಬಲ ನೀಡಲು ದಯವಿಟ್ಟು +91 9035362958 ಅನ್ನು ಸಂಪರ್ಕಿಸಿ.

ಪೋಸ್ಟ್ ಹಂಚಿಕೊಳ್ಳಿ:

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಶಿವಮೊಗ್ಗ | ಅಂಬೇಡ್ಕರ್ ಓದು ; ಭಾರತವನ್ನು ಅರಿಯುವ ದಾರಿ : ಕೋಟಿಗಾನಹಳ್ಳಿ ರಾಮಯ್ಯ ಅಭಿಪ್ರಾಯ

ಶಿವಮೊಗ್ಗ ಮಾನವತಾವಾದಿ ಅಂಬೇಡ್ಕರ್ ಅವರನ್ನು ಓದುವುದು ಎಂದರೆ ಭಾರತವನ್ನು ನೈಜವಾಗಿ ಅರಿಯುವುದು,...

ಬಿಜೆಪಿಯ ಆತ್ಮವಂಚನೆ ಪ್ರತಿಭಟನೆಗಳು ಕಲಬುರಗಿಗೆ ಅಗತ್ಯವಿಲ್ಲ: ಸಚಿವ ಪ್ರಿಯಾಂಕ್ ಖರ್ಗೆ

ಅಧಿಕಾರದಲ್ಲಿದ್ದಾಗ ಕಲಬುರಗಿ ಜಿಲ್ಲೆಯ ರೈತರಿಗೆ ದ್ರೋಹವೆಸಗಿದ್ದ ಬಿಜೆಪಿ ಈಗ ಪ್ರತಿಭಟನೆಯ ನಾಟಕ...

ಧಾರವಾಡ | ಹಿಂದುಳಿದ ವರ್ಗಗಳ ಸಮೀಕ್ಷೆ; ಸಬ್‌ಜೈಲ್ ಸುತ್ತ ಪ್ರದೇಶಗಳಲ್ಲಿ ನೆಟವರ್ಕ್ ಸಮಸ್ಯೆ

ಧಾರವಾಡ ಜಿಲ್ಲೆಯಲ್ಲಿ ಹಿಂದುಳಿದ ವರ್ಗಗಳ ಸಾಮಾಜಿಕ ಮತ್ತು ಶೈಕ್ಷಣಿಕ ಸಮೀಕ್ಷೆ ಪ್ರಗತಿಯಲ್ಲಿದ್ದು,...

ವಿಜಯಪುರ | ಪರಿಸರ ಸಂರಕ್ಷಣೆ ಪ್ರತಿಯೊಬ್ಬರ ಕರ್ತವ್ಯ: ಶಂಕರಗೌಡ ಸೋಮನಾಳ

ಪರಿಸರಕ್ಕೆ ಹಾನಿ ಮಾಡದಂತಹ ತಂತ್ರಜ್ಞಾನಗಳನ್ನು ನಾವು ಪ್ರೋತ್ಸಾಹಿಸಬೇಕು. ಪರಿಸರ ಸಂರಕ್ಷಣೆಯಲ್ಲಿ ವಿದ್ಯಾರ್ಥಿಗಳ...

Download Eedina App Android / iOS

X