ಪಂಜಾಬ್‌ನಲ್ಲಿ ಭಾರೀ ಮಳೆಯಿಂದಾಗಿ ಪ್ರವಾಹ ಉಂಟಾಗಿದ್ದು, ಗುರುದಾಸ್‌ಪುರ ಜಿಲ್ಲೆಯ ದಬುರಿ ಗ್ರಾಮದ ಜವಾಹರ್ ನವೋದಯ ವಿದ್ಯಾಲಯದಲ್ಲಿ ಸುಮಾರು 400 ವಿದ್ಯಾರ್ಥಿಗಳು ಮತ್ತು 40 ಸಿಬ್ಬಂದಿ ಹೆಚ್ಚುತ್ತಿರುವ ಪ್ರವಾಹದ ನೀರಿನಲ್ಲಿ ಸಿಲುಕಿರುವ ಸಾಧ್ಯತೆಯಿದೆ.
ಎಂಟು ಜಿಲ್ಲೆಗಳಾದ ಗುರುದಾಸ್‌ಪುರ, ಪಠಾಣ್‌ಕೋಟ್, ಅಮೃತಸರ, ಹೋಶಿಯಾರ್‌ಪುರ್, ಕಪುರ್ತಲಾ, ತರಣ್ ತರಣ್, ಫಿರೋಜ್‌ಪುರ್ ಮತ್ತು ಫಜಿಲ್ಕಾದಲ್ಲಿ ಭಾರೀ ಮಳೆಯಿಂದಾಗಿ ಪ್ರವಾಹ ಸ್ಥಿತಿ ನಿರ್ಮಾಣವಾಗಿದೆ. ರಾವಿ, ಬಿಯಾಸ್ ಮತ್ತು ಸಟ್ಲೆಜ್ ನದಿಗಳು ಉಕ್ಕಿ ಹರಿಯುತ್ತಿವೆ.
ಇದನ್ನು ಓದಿದ್ದೀರಾ? ಪಂಜಾಬ್ ಪ್ರವಾಹ: 41 ಸಾವು, 1600 ಕ್ಕೂ ಹೆಚ್ಚು ಮಂದಿ ಪರಿಹಾರ ಶಿಬಿರಗಳಲ್ಲಿ ವಾಸ
ಗುರುದಾಸ್‌ಪುರ-ಡೊರಾಂಗ್ಲಾ ರಸ್ತೆ ಮಾರ್ಗದಲ್ಲಿ ಶಾಲೆಯಿದೆ. ಇನ್ನು ಹಲವು ಮಂದಿ ಆಶ್ರಯ ಪಡೆದಿದ್ದ ಕಟ್ಟಡ ಕುಸಿದು ಬೀಳುವ ಕೆಲವೇ ನಿಮಿಷಗಳ ಮೊದಲು, 22 ಸಿಆರ್‌ಪಿಎಫ್ ಸಿಬ್ಬಂದಿ ಮತ್ತು ಮೂವರು ನಾಗರಿಕರನ್ನು ಸೇನಾ ಹೆಲಿಕಾಪ್ಟರ್ ಮೂಲಕ ಪ್ರವಾಹ ಪೀಡಿತ ಗ್ರಾಮದಿಂದ ಜನರನ್ನು ಸ್ಥಳಾಂತರಿಸಿದ್ದರು ಎಂದು ಹೇಳಲಾಗಿದೆ.
ಇನ್ನು ಜಮ್ಮು ಕಾಶ್ಮೀರದ ಲಖನ್‌ಪುರದ ಗಡಿಯಲ್ಲಿರುವ ಪ್ರದೇಶವಾದ ಮಾಧೋಪುರ್ ಹೆಡ್‌ವರ್ಕ್ಸ್ ಬಳಿ ಸಿಲುಕಿಕೊಂಡಿದ್ದ ಜನರನ್ನು ಸೇನೆಯು ಸ್ಥಳಾಂತರಿಸಿದೆ ಎಂದು ವಕ್ತಾರರು ಹೇಳಿದ್ದಾರೆ.
“ಸಿಲುಕಿದ್ದ ಎಲ್ಲರನ್ನೂ ರಕ್ಷಿಸಲಾಗಿದೆ. ಇದು ಭಾರತೀಯ ಸೇನೆಯ ಅಚಲ ಬದ್ಧತೆ, ಬಿಕ್ಕಟ್ಟಿನ ಸಂದರ್ಭಗಳಲ್ಲಿ ತಕ್ಷಣ ಪ್ರತಿಕ್ರಿಯಿಸುವ ಸಾಮರ್ಥ್ಯವನ್ನು ಪ್ರತಿಬಿಂಬಿಸುತ್ತದೆ. ಸೇನೆ ಮತ್ತು ಸ್ಥಳೀಯ ಅಧಿಕಾರಿಗಳ ನಡುವಿನ ಸಮನ್ವಯವು ದುರಂತವನ್ನು ತಪ್ಪಿಸಿದೆ” ಎಂದು ವಕ್ತಾರರು ತಿಳಿಸಿದ್ದಾರೆ.
