ಚಿಕ್ಕಬಳ್ಳಾಪುರದ ಅಮ್ಮ ಎಜುಕೇಷನಲ್ ಅಂಡ್ ರೂರಲ್ ಡೆವಲಪ್ಮೆಂಟ್ ಟ್ರಸ್ಟ್‌ನ ವಾರ್ಷಿಕೋತ್ಸವದ ಹಿನ್ನೆಲೆಯಲ್ಲಿ ರಕ್ತದಾನ ಶಿಬಿರವನ್ನು ಹಮ್ಮಿಕೊಳ್ಳಲಾಗಿತ್ತು.
ಅಂಬೇಡ್ಕರ್ ಭವನದಲ್ಲಿ ಆಯೋಜಿಸಿದ್ದ ಈ ಕಾರ್ಯಕ್ರಮದಲ್ಲಿ ರಕ್ತದಾನ ಶಿಬಿರದ ಜೊತೆಗೆ ವಿವಿಧ ಕ್ಷೇತ್ರಗಳಲ್ಲಿ ಸಾಧನೆ ಮಾಡಿದ 100 ಸಾಧಕರಿಗೆ ಸನ್ಮಾನ ಕೂಡ ಹಮ್ಮಿಕೊಳ್ಳಲಾಗಿತ್ತು.
ರಕ್ತದಾನ ಶಿಬಿರಕ್ಕೆ ಡಿ.ವೈ.ಎಸ್ಪಿ ಶಿವಕುಮಾರ್ ಚಾಲನೆ ನೀಡಿ, ಸಮಾಜಕ್ಕೆ ಏನಾದರೂ ಮಾಡಬೇಕು ಎಂಬ ಸಂಕಲ್ಪದೂಂದಿಗೆ ಉದ್ಭವವಾದ ಈ ಟ್ರಸ್ಟ್‌ಗೆ ಇಂದು ವರ್ಷದ ಸಂಭ್ರಮ. ಟ್ರಸ್ಟ್‌ನ ಶೈಕ್ಷಣಿಕ ಸೇವೆ ಪಡೆಯುತ್ತಿರುವ ವಿದ್ಯಾರ್ಥಿಗಳ ಭವಿಷ್ಯ ಉಜ್ವಲವಾಗಲಿ ಎಂದು ಆಶಿಸಿದರು.
ನಿಮ್ಮ ಉಜ್ವಲ ಭವಿಷ್ಯಕ್ಕೆ ಪೋಷಕರು ಪಡುವ ಕಷ್ಟಗಳು ಅಷ್ಟಿಷ್ಟಲ್ಲ. ಜೊತೆಗೆ ನಿಮ್ಮ ಭವಿಷ್ಯದ ದೃಷ್ಟಿಯಿಂದ ಅವರು ಪಟ್ಟಂತಹ ಶ್ರಮವನ್ನು ಅವರಿಗೆ ಸುಖಕರ ಜೀವನ ಒದಗಿಸಿ ಹಿಂತಿರುಗಿಸಿ ಶಿಸ್ತು ಸಮಯ ಪಾಲನೆ ಮಾಡಬೇಕು. ಶಿಕ್ಷಕರನ್ನು ಗೌರವಿಸಿ, ವಿದ್ಯಾಭಾಸದ ದಿನಗಳಲ್ಲಿ ಕೇವಲ ಓದಿನ ಕಡೆ ಗಮನ ಹರಿಸಬೇಕು. ಭವಿಷ್ಯಕ್ಕೆ ಕುತ್ತು ತರುವಂತಹ ಆಸೆ ಅಮಿಷ ತೋರಿಸುವವರಿಂದ ದೂರವಿರಿ. ಒಳ್ಳೆ ದಾರಿಯನ್ನು ತೋರಿಸುವ ಸ್ನೇಹಿತರ ಜೊತೆ ಬಾಂಧವ್ಯ ಬೆಳೆಸಿಕೊಳ್ಳಬೇಕು. ಸ್ವಾವಲಂಬಿ ಜೀವನ ನಡೆಸಿ ದುಷ್ಚಟಿಕೆಗಳಿಗೆ ಬಲಿಯಾಗದಿರಿ ಎಂದು ವಿದ್ಯಾರ್ಥಿಗಳಿಗೆ ಕಿವಿ ಮಾತು ಹೇಳಿದರು.
ಭಗತ್ ಸಿಂಗ್ ಚಾರಿಟೇಬಲ್ ಟ್ರಸ್ಟ್ ಅಧ್ಯಕ್ಷ ಸಂದೀಪ್.ಬಿ ರೆಡ್ಡಿ ಮಾತನಾಡಿ , ಸಂಸ್ಥೆ ಕಟ್ಟುವುದು ಸುಲಭ, ಆದರೆ ನಿರ್ವಹಣೆ ಕಷ್ಟದ. ಶೋಷಿತರಿಗೆ, ನಿರ್ಗತಿಕರಿಗೆ, ಬಡ ವಿದ್ಯಾರ್ಥಿಗಳಿಗೆ ಕೈಲಾದಷ್ಟು ನೆರವು ನೀಡಲು ಮುಂದಾಗುವ ಸಂಘ ಸಂಸ್ಥೆಗಳಿಗೆ ಮಾನಸಿಕವಾಗಿ ಆರ್ಥಿಕವಾಗಿ ಧೈರ್ಯ ತುಂಬಬೇಕು ಎಂದು ಸ್ನೇಹಿತರಾದ ಶ್ರೀನಿವಾಸ್ ಸಾಮಾಜಿಕ ಕಳಕಳಿಯೊಂದಿಗೆ ಅಮ್ಮ ಎಜುಕೇಷನಲ್ ಟ್ರಸ್ಟ್ ಮುಖಾಂತರ ಸಮಾಜ ಸೇವೆ ಮಾಡಲು ಮುಂದಾಗಿದ್ದಾರೆ. ಅವರ ಜೊತೆ ನಾವೆಲ್ಲರೂ ನಿಲ್ಲಬೇಕು ಎಂದರು.

ಸಮ ಸಮಾಜ ನಿರ್ಮಾಣಕ್ಕೆ ನಮ್ಮ ಮೇಲಿರುವ ಸಾಮಾಜಿಕ ಜವಾಬ್ದಾರಿಯನ್ನು ಸಮರ್ಥವಾಗಿ ನಿಭಾಯಿಸಬೇಕು. ಕೆಟ್ಟದ್ದನ್ನ ಖಂಡಿಸಿ ನಿಲ್ಲಿಸಬೇಕು. ಒಳ್ಳೆಯದನ್ನ ಅನುಸರಿಸಿ ಸಮಾಜದಲ್ಲಿ ಸಾಧನೆ ಮಾಡಿದ ಬಹುತೇಕ ವ್ಯಕ್ತಿಗಳನ್ನು ಸ್ಪೂರ್ತಿಯಾಗಿಟ್ಟಿಕೊಂಡು ಇತರರಿಗೆ ಮಾದರಿಯಾಗಬೇಕೆಂದು ಕರೆ ನೀಡಿದರು.
ಅಮ್ಮ ಎಜುಕೇಷನಲ್ ಅಂಡ್ ರೂರಲ್ ಡೆವಲಪ್ಮೆಂಟ್ ಟ್ರಸ್ಟ್‌ನ ಅಧ್ಯಕ್ಷ ಗೋಳ್ಳು ಶ್ರೀನಿವಾಸ್ ಮಾತನಾಡಿ, ಕೋವಿಡ್ ಸಮಯದಲ್ಲಿ ಬದುಕು ಎನೆಂಬುದು ಎಲ್ಲರಿಗೂ ಗೂತ್ತಾಗಿದೆ. ಜನರು ಪಟ್ಟಂತಹ ಕಷ್ಟಗಳನ್ನು ನೋಡಿ ಐದು ಜನ ಸ್ನೇಹಿತರ ತಂಡವನ್ನು ಕಟ್ಟಿಕೊಂಡು ಕಳೆದ ವರ್ಷ ಅಮ್ಮ ಎಜುಕೇಷನಲ್ ಅಂಡ್ ರೂರಲ್ ಡೆವಲಪ್ಮೆಂಟ್ ಟ್ರಸ್ಟ್ ಪ್ರಾರಂಭಿಸಿದ್ದೇವೆ. ಶೈಕ್ಷಣಿಕ,ಆರೋಗ್ಯ ಹಾಗೂ ಇತರೆ ಕ್ಷೇತ್ರಗಳಲ್ಲಿ ಆದಷ್ಟು ಸಹಾಯ ಮಾಡುತ್ತ ಬಂದಿದ್ದು ಇಂದು ವಾರ್ಷಿಕೋತ್ಸವ ಅಂಗವಾಗಿ ಜೀವ ಉಳಿಸುವ ಕಾರ್ಯ ರಕ್ತದಾನ ಶಿಬಿರ ಹಮ್ಮಿಕೊಳ್ಳಲಾಗಿದೆ. ಬದುಕು ಶಾಶ್ವತವಲ್ಲ, ಇದ್ದಷ್ಟು ದಿನ ಸಮಾಜಕ್ಕೆ ಏನಾದರೂ ಮಾಡಬೇಕೆಂಬ ಉದ್ದೇಶದಿಂದ ಮುಂದೆ ಸಾಗಿದ್ದೇವೆ ಎಂದರು.
ಇದನ್ನು ಓದಿದ್ದೀರಾ? ಬಾಗೇಪಲ್ಲಿ | ಗಣೇಶ ಹಬ್ಬ: ಎಲ್ಲೆಡೆ ಪರಿಸರ ಪೂರಕ ಮೂರ್ತಿ ಪ್ರತಿಷ್ಠಾಪನೆ
ಕಾರ್ಯಕ್ರಮದಲ್ಲಿ ವಿಷೇಶ ಅಹ್ವಾನಿತರಾಗಿ ಮಕ್ಕಳ ತಜ್ಞ ಡಾ. ರವಿ ಕುಮಾರ್, ಕನ್ನಡ ಸಾಹಿತ್ಯ ಪರಿಷತ್ ಜಿಲ್ಲಾಧ್ಯಕ್ಷ ಕೋಡಿರಂಗಪ್ಪ, ಟಿಎಪಿಸಿಎಂಎಸ್ ಅಧ್ಯಕ್ಷ ಆವಲಕೊಂಡರಾಯಪ್ಪ, ನಿರ್ದೇಶಕ ಈರಚಿನ್ನಪ್ಪ, ವಿಶ್ವ ವಿವೇಕ ಪ್ರಥಮ ದರ್ಜೆ ಕಾಲೇಜಿನ ಪ್ರಾಂಶುಪಾಲ ಅಂಜಿ, ಉಮೇಶ್. ಜಿ, ಕೆ.ಸಿ. ರಾಜಾಕಾಂತ್, ಸುಧಾ ವೆಂಕಟೇಶ್, ಬಿ.ಎನ್. ಗಂಗಾಧರಪ್ಪ, ಕರವೇ ರಾಜ್ಯ ಉಪಾಧ್ಯಕ್ಷ ತಿಪ್ಪೇನಹಳ್ಳಿ ನಾರಾಯಣಸ್ವಾಮಿ, ಡಿ.ವಿ.ನಾರಾಯಣಸ್ವಾಮಿ, ಅಮ್ಮ ಎಜುಕೇಷನಲ್ ಅಂಡ್ ರೂರಲ್ ಡೆವಲಪ್ಮೆಂಟ್ ಟ್ರಸ್ಟ್ ನ ಕಾರ್ಯದರ್ಶಿ ಗಂಗರಾಜು, ಜಂಟಿ ಕಾರ್ಯದರ್ಶಿ ವೆಂಕಟೇಶ್, ಖಂಜಾಜಿ ಆನಂದ್, ಸದಸ್ಯರಾದ ಶಿಲ್ಪ ವೆಂಕಟೇಶ್ ಮತ್ತಿತರರು ಉಪಸ್ಥಿತರಿದ್ದರು.
