ಮೈಸೂರು ಕೆ ಆರ್ ಮೊಹಲ್ಲಾದ ತೊಗರಿ ಬೀದಿಯಲ್ಲಿ ಪಂಚಮುಖಿ ವಿನಾಯಕ ಯುವಕರ ಬಳಗದ ಯುವಕರು ತಮ್ಮ ಮುಸಲ್ಮಾನ್ ಸ್ನೇಹಿತರ ಜೊತೆ ಸೇರಿ ಗೌರಿ ಗಣೇಶ ಪೂಜೆಯನ್ನು ಒಟ್ಟಾಗಿ ಸಲ್ಲಿಸುವ ಮೂಲಕ ಸಮಾಜಕ್ಕೆ ಮಾದರಿಯಾದರು.
ಪೂಜೆಯ ಬಳಿಕ ಸಿಹಿಯನ್ನು ಪರಸ್ಪರ ತಿನ್ನಿಸಿ ಖುಷಿಪಟ್ಟರು. ಗಣೇಶ ಹಾಗೂ ಈದ್ ಮಿಲಾದ್ ಹಬ್ಬದ ಶುಭಾಶಯಗಳನ್ನು ವಿನಿಮಯ ಮಾಡಿಕೊಂಡು, ಹಿಂದೂ ಮುಸ್ಲಿಂ ಭಾಯಿ ಭಾಯಿ ಎಂಬ ಸಂದೇಶವನ್ನು ಜನತೆಗೆ ರವಾನಿಸಿದರು.
ಪಂಚಮುಖಿ ವಿನಾಯಕ ಯುವಕರ ಬಳಗದ ಅಧ್ಯಕ್ಷ ರವಿನಂದನ್ ಮಾತನಾಡಿ “ಇತಿಹಾಸದಲ್ಲಿ ಎರಡು ಸಮುದಾಯಗಳ ಹಬ್ಬಗಳು ಬಂದರೆ ಸೌಹಾರ್ಧವಾಗಿ ಆಚರಣೆ ಮಾಡುವ ಪದ್ಧತಿ ನಮ್ಮ ನಾಡಿನಲ್ಲಿದೆ. ಆದರೆ, ಕೆಲವು ಕಿಡಿಗೇಡಿಗಳಿಂದ ಎರಡು ಸಮುದಾಯದಲ್ಲಿ ಶಾಂತಿಯನ್ನು ಕದಡುವ ಯತ್ನಗಳು ನಡೆಯುತ್ತಿದೆ. ಆದ್ದರಿಂದ, ಹಿಂದೂ, ಮುಸ್ಲಿಂ ಸಮುದಾಯದ ಮುಖಂಡರು ಈ ಬಗ್ಗೆ ಲಕ್ಷ್ಯ ವಹಿಸಿ ಹಬ್ಬಗಳನ್ನು ಆಚರಣೆ ಮಾಡಲು ಮುಂದಾಗಬೇಕು”.
ಯುವಕರು ಒಟ್ಟಾಗಿ ಸೌಹಾರ್ದತೆಯಿಂದ ಹಬ್ಬವನ್ನು ಆಚರಿಸುತ್ತಾ ಬಂದಿರುವುದು ಬಹಳ ಸಂತಸದ ವಿಚಾರ. ಇದೇ ಥರ ಸೌಹಾರ್ದತೆ ಆಚರಣೆ ಪ್ರತಿ ಜಿಲ್ಲೆಯಲ್ಲಿ ಆದರೆ ಬಹಳ ಉತ್ತಮ ಬೆಳವಣಿಗೆ ರಾಜ್ಯದಲ್ಲಿ ಕಾಣಲು ಸಾಧ್ಯವಿದೆ ಎಂದು ಅಭಿಪ್ರಾಯ ಪಟ್ಟರು.
ಈ ಸುದ್ದಿ ಓದಿದ್ದೀರಾ? ಮೈಸೂರು | ಕರಡಿ ದಾಳಿಗೊಳಗಾದ ಅರಣ್ಯ ಇಲಾಖೆ ಸಿಬ್ಬಂದಿ; ಅಧಿಕಾರಿಗಳಿಂದ ವೈಯಕ್ತಿಕ ಆರ್ಥಿಕ ನೆರವು
ಕಾರ್ಯಕ್ರಮದಲ್ಲಿ ಮುಸಲ್ಮಾನ್ ಬಾಂಧವರಾದ ಗುಲ್ಸಿಯನ್ ಪಾಷಾ, ಅಮೀನ್, ಕೊಹಿಲ್, ಅಹಮದ್ ಜೂನಿಯರ್, ಮುಶೀರ್, ಸಲ್ಮಾನ್ ಪಾಷಾ, ಸಮೀರ್, ಕೆಪಿಸಿಸಿ ಸದಸ್ಯರಾದ ನಜರ್ಬಾದ್ ನಟರಾಜ್, ಜಿ ರಾಘವೇಂದ್ರ, ರವಿತೇಜ, ಗಿರೀಶ್, ಹರ್ಷ, ಸುಭಾಷ್, ಉಮೇಶ್ ಮತ್ತು ಇನ್ನಿತರ ಯುವಕರು ಇದ್ದರು.