ಶಿವಮೊಗ್ಗ ಕುಂದಾಪುರದಿಂದ ಶಿವಮೊಗ್ಗಕ್ಕೆ ಬರುತ್ತಿದ್ದ ಇಂಧನ ತುಂಬಿದ್ದ ಲಾರಿಯೊಂದು ಹೊಳೆಯಲ್ಲಿ ಪಲ್ಟಿಯಾದ ಪರಿಣಾಮ ಸಿದ್ದಾಪುರ-ಹೊಸನಗರ ರಾಜ್ಯ ಹೆದ್ದಾರಿಯಲ್ಲಿ ಆತಂಕ ಸೃಷ್ಟಿಯಾಗಿತ್ತು.
ಅದೃಷ್ಟಕ್ಕೆ ಘಟನೆಯಲ್ಲಿ ಯಾರಿಗೂ ಹಾಗೂ ಯಾವುದೇ ಹಾನಿಯಾಗಲಿಲ್ಲ.ಘಟನೆಯಲ್ಲಿ ಚಾಲಕ ಸಹ ಸುರಕ್ಷಿತವಾಗಿದ್ದಾನೆ. ಇಲ್ಲಿನ ಸಿದ್ದಾಪುರ ವ್ಯಾಪ್ತಿಯಲ್ಲಿ ಪಡುವ ಪಟ್ನಾಹೊಳೆಯಲ್ಲಿ ಲಾರಿಯು ಪಲ್ಟಿಯಾಗಿತ್ತು. ಹಾಗಾಗಿ ಇಂಧನ ಲೀಕ್ ಆಗಿ ಅನಾಹುತ ಸಂಭವಿಸುವ ಅಪಾಯ ಎದುರಾಗಿತ್ತು.
ಈ ನಡುವೆ ಸ್ಥಳಕ್ಕೆ ಬಂದ ಅಗ್ನಿಶಾಮಕ ಸಿಬ್ಬಂದಿ ಸನ್ನಿವೇಶವನ್ನು ಪೂರ್ತಿಯಾಗಿ ಕಂಟ್ರೋಲ್ಗೆ ತೆಗೆದುಕೊಂಡರು. ಈ ಮಧ್ಯೆ ಪರಿಸ್ಥಿತಿ ನಿಯಂತ್ರಣ ಬರುವರೆಗೂ ಸಂಚಾರಕ್ಕೆ ನಿರ್ಬಂಧ ಹೇರಲಾಗಿತ್ತು.