ಗುಬ್ಬಿ | ನಿವೇಶನಕ್ಕೆ ಕಾದಿರಿಸಿದ ಜಮೀನಿಗೆ ತಡೆಯಾಜ್ಞೆ ಖಂಡಿಸಿ ದಿಢೀರ್ ಪ್ರತಿಭಟನೆ

Date:

Advertisements

ತ್ಯಾಗಟೂರು ಗ್ರಾಮ ಪಂಚಾಯಿತಿ ವ್ಯಾಪ್ತಿಯ ಬೊಮ್ಮರಸನಹಳ್ಳಿ ಗ್ರಾಮದಲ್ಲಿ ನಿವೇಶನ ರಹಿತರಿಗೆ ಜಿಲ್ಲಾಧಿಕಾರಿಗಳು ಕಾದಿರಿಸಿದ ಜಮೀನು ಹಸ್ತಾಂತರ ಆಗಿದ್ದರೂ ಪಿಡಿಓ ವಿಳಂಬ ಅನುಸರಿಸಿ ಹಾಲಿ ಅಧ್ಯಕ್ಷರಿಗೆ ಕಾಲಾವಕಾಶ ನೀಡಿ ನ್ಯಾಯಾಲಯ ಮೂಲಕ ತಡೆಯಾಜ್ಞೆ ತರಲು ಅವಕಾಶ ನೀಡಿದ್ದು ಬಡವರು, ದೀನ ದಲಿತರ ವಿರೋಧಿ ನೀತಿ ಎಂದು ಆಕ್ರೋಶ ವ್ಯಕ್ತಪಡಿಸಿದ ದಲಿತ ಮುಖಂಡರು ತ್ಯಾಗಟೂರು ಗ್ರಾಮ ಪಂಚಾಯಿತಿ ಮುಂದೆ ನಡೆದಿದ್ದ ಕಾರ್ಯಕ್ರಮದಲ್ಲಿ ದಿಢೀರ್ ಪ್ರತಿಭಟನೆ ನಡೆಸಿ ಅಧಿಕಾರಿಗಳ ವಿರುದ್ಧ ಘೋಷಣೆ ಕೂಗಿದರು.

ಬೊಮ್ಮರಸನಹಳ್ಳಿ ಸರ್ವೆ ನಂಬರ್ 101/2 ರ ಜಮೀನು ಬಡವರ ನಿವೇಶನಕ್ಕೆ ಜಿಲ್ಲಾಧಿಕಾರಿಗಳು ತಮ್ಮ ಹೆಸರಿನ ಒಟ್ಟು 6.13 ಎಕರೆ ಜಾಗದಲ್ಲಿ 4.13 ಎಕರೆ ಜಮೀನು ಮಂಜೂರು ಮಾಡಿ ಕೂಡಲೇ ಹಸ್ತಾಂತರ ಮಾಡಲಾಯಿತು. ಈ ಪ್ರಕ್ರಿಯೆ ನಡೆದು 9 ತಿಂಗಳು ಕಳೆದಿದೆ. ಹಸ್ತಾಂತರ ಮಾಡಿದ ಬಳಿಕ ಗ್ರಾಮ ಪಂಚಾಯಿತಿ ತಮ್ಮ ವಶಕ್ಕೆ ಪಡೆಯದೆ ಹಾಲಿ ಅಧ್ಯಕ್ಷರ ಕೈಗೊಂಬೆಯಂತೆ ವರ್ತಿಸಿ ನ್ಯಾಯಾಲಯ ಮೆಟ್ಟಿಲೇರಿ ತಡೆಯಾಜ್ಞೆ ತರಲು ಕಾಲಾವಕಾಶ ನೀಡಿದ್ದು ಸರಿಯಲ್ಲ. ಜಿಲ್ಲಾಧಿಕಾರಿಗಳಿಂದ ಮಂಜೂರು ಆಗಿರುವ ಜಮೀನು ಬಡವರಿಗೆ ನೀಡಲು ಹಿಂದೇಟು ಹಾಕಿದ ಪಿಡಿಓ ಅಧಿಕಾರಿ ವಿರುದ್ಧ ಕ್ರಮ ಕೈಗೊಳ್ಳುವಂತೆ ಪ್ರತಿಭಟನಕಾರರು ಆಗ್ರಹಿಸಿ ಕೂಡಲೇ ಬಡವರಿಗೆ ಮೀಸಲಿಟ್ಟ ಜಮೀನು ಹಸ್ತಾಂತರಕ್ಕೆ ಪಡೆದು ನಿವೇಶನ ವಿಂಗಡಿಸಿ ಬಡವರಿಗೆ ಹಂಚಬೇಕು ಎಂದು ಒತ್ತಾಯಿಸಿ ಗ್ರಾಮ ಪಂಚಾಯಿತಿ ಭವನ ಉದ್ಘಾಟನಾ ಕಾರ್ಯಕ್ರಮದಲ್ಲಿ ದಿಢೀರ್ ಪ್ರತಿಭಟನೆ ನಡೆಸಿದರು.

ದಲಿತ ಸಂಘರ್ಷ ಸಮಿತಿ ಜಿಲ್ಲಾ ಸಂಚಾಲಕ ನಿಟ್ಟೂರು ರಂಗಸ್ವಾಮಿ ಹಾಗೂ ತಾಲ್ಲೂಕು ಸಂಚಾಲಕ ಕಡಬ ಶಂಕರ್ ನೇತೃತ್ವದಲ್ಲಿ ಪ್ರತಿಭಟನೆ ನಡೆಸಿದ ದಲಿತ ಮುಖಂಡರು, ಸಂಘಟನೆಯ ಕಾರ್ಯಕರ್ತರು ಅಧಿಕಾರಿಗಳ ಹಾಗೂ ಜನಪ್ರತಿನಿಧಿಗಳ ಧೋರಣೆ ಖಂಡಿಸಿ ಭವನ ಉದ್ಘಾಟನೆ ನಡೆಯುವ ಸಮಯದಲ್ಲಿ ವೇದಿಕೆ ಬಳಿ ಧರಣಿ ಕುಳಿತರು.

ಮುಖಂಡ ಈಶ್ವರಯ್ಯ ಮಾತನಾಡಿ ಬಡವರಿಗೆ ನಿವೇಶನ ಕೋರಿ ಹಲವು ಬಾರಿ ಅರ್ಜಿ ಸಲ್ಲಿಸಿದ್ದ ಹಿನ್ನಲೆ ಜಿಲ್ಲಾಧಿಕಾರಿಗಳು ಒಂದು ವರ್ಷದ ಹಿಂದೆ ಬೊಮ್ಮರಸನಹಳ್ಳಿ ಬಳಿಯ ಜಿಲ್ಲಾಧಿಕಾರಿಗಳ ಹೆಸರಿನ ಜಮೀನಿನಲ್ಲಿ 4.13 ಎಕರೆ ಮಂಜೂರು ಮಾಡಿ ಕೂಡಲೇ ಗ್ರಾಮ ಪಂಚಾಯಿತಿಗೆ ಹಸ್ತಾಂತರ ಮಾಡಲಾಗಿತ್ತು. ಆದರೆ ಇಲ್ಲಿನ ಪಿಡಿಓ ಮೇಡಂ ಅವರು ಹಾಲಿ ಅಧ್ಯಕ್ಷರಿಗೆ ಕೆಲ ತಿಂಗಳ ಅವಕಾಶ ನೀಡಿ ತಡೆಯಾಜ್ಞೆ ತರಲು ಅನುವು ಮಾಡಿದ್ದಾರೆ. ಈ ಬಗ್ಗೆ ಹಲವು ಬಾರಿ ಕೇಳಿದರೂ ಈಗ ನ್ಯಾಯಾಲಯ ಮೆಟ್ಟಿಲೇರಿದ್ದಾರೆ. ಏನೂ ಮಾಡಲು ಸಾಧ್ಯವಿಲ್ಲ ಎನ್ನುವ ಹಾರಿಕೆ ಉತ್ತರ ನೀಡುತ್ತಾರೆ. ಆದರೆ ಸಮಯ ನೀಡಿದ್ದಕ್ಕೆ ಸಕಾರಣ ನೀಡಬೇಕು. ಬಡವರ ವಿರೋಧಿ ನೀತಿ ಅನುಸರಿಸಿದ ಪಿಡಿಓ ಹಾಗೂ ಅಧ್ಯಕ್ಷರು ಸಾಮಾಜಿಕ ನ್ಯಾಯ ಕೊಡುವಲ್ಲಿ ವಿಫಲರಾಗಿದ್ದಾರೆ. ಆಡಳಿತ ನಡೆಸುವ ಇವರು ಬಡವರ ಪರ ನಿಲ್ಲಬೇಕು. ಆದರೆ ಇಲ್ಲಿ ಬೇಲಿಯೇ ಎದ್ದು ಹೊಲ ಮೇಯ್ದಂತೆ ಕಾಣುತ್ತಿದೆ. ತಾಪಂ ಇಓ ಸ್ಥಳಕ್ಕೆ ಭೇಟಿ ನೀಡಿ ಸಮಸ್ಯೆ ಬಗೆಹರಿಸಬೇಕು. ಇಲ್ಲವಾದಲ್ಲಿ ಜಿಲ್ಲಾ ಪಂಚಾಯಿತಿ ಮುಂದೆ ಪ್ರತಿಭಟನೆ ನಡೆಸುವುದಾಗಿ ಎಚ್ಚರಿಕೆ ನೀಡಿದರು.

ದಸಂಸ ಜಿಲ್ಲಾ ಸಂಚಾಲಕ ನಿಟ್ಟೂರು ರಂಗಸ್ವಾಮಿ ಮಾತನಾಡಿ ಎಲ್ಲಾ ಜನಾಂಗದ ಬಡವರಿಗೆ ನಿವೇಶನ ನೀಡಲು ಅರ್ಜಿ ಸಲ್ಲಿಸಲಾಗಿದೆ. ಕೋರಿಕೆಯನ್ನು ಈಡೇರಿಸಿದ್ದ ಜಿಲ್ಲಾಧಿಕಾರಿಗಳ ಅದೇಶಕ್ಕೆ ಗ್ರಾಮ ಪಂಚಾಯಿತಿಯಲ್ಲಿ ಬೆಲೆ ಸಿಕ್ಕಿಲ್ಲ. ಕಾರ್ಯ ನಿರ್ವಾಹಕ ಅಧಿಕಾರಿಗಳು ಸ್ಥಳಕ್ಕೆ ಬಂದು ಸಮಸ್ಯೆ ಬಗೆಹರಿಸಬೇಕು. ಇಲ್ಲವಾದಲ್ಲಿ ಸಿಇಓ ಹಾಗೂ ಜಿಲ್ಲಾಧಿಕಾರಿಗಳ ಕಚೇರಿ ಮುಂದೆ ಜಮಾಯಿಸಿ ಪ್ರತಿಭಟನೆ ನಡೆಸುತ್ತೇವೆ ಎಂದು ಎಚ್ಚರಿಸಿದರು.

ದಸಂಸ ತಾಲ್ಲೂಕು ಸಂಚಾಲಕ ಕಡಬ ಶಂಕರ್ ಮಾತನಾಡಿ ಗ್ರಾಮ ಪಂಚಾಯಿತಿ ಅಧ್ಯಕ್ಷರೇ ಹೀಗೆ ಬಡವರ ವಿರುದ್ಧ ನಿಂತಿರುವುದು ಸರಿಯಲ್ಲ. ಭವನ ಉದ್ಘಾಟನಾ ಕಾರ್ಯಕ್ರಮದಲ್ಲಿ ಆಕ್ರೋಶ ಹೊರ ಹೊಮ್ಮಿದೆ ಎಂದರೆ ಅಧಿಕಾರಿಗಳ ಬೇಜವಾಬ್ದಾರಿ ಹಾಗೂ ಜನ ವಿರೋಧಿ ನೀತಿ ಎರಡೂ ಎದ್ದು ಕಾಣುತ್ತಿದೆ. ಕೂಡಲೇ ನಿವೇಶನಕ್ಕೆ ಅನುವು ಮಾಡದಿದ್ದರೆ ಉಗ್ರ ಹೋರಾಟ ನಡೆಸಲಾಗುವುದು ಎಂದು ತಿಳಿಸಿದರು.

ಸ್ಥಳಕ್ಕೆ ಆಗಮಿಸಿದ ತಾಪಂ ಸಹಾಯಕ ನಿರ್ದೇಶಕ ರಂಗನಾಥ್, ಮಾಜಿ ಅಧ್ಯಕ್ಷ ಶಿವಕುಮಾರಸ್ವಾಮಿ ಹಾಗೂ ಪಿಡಿಓ ವನಜಾಕ್ಷಿ ನಿವೇಶನಕ್ಕೆ ಅವಶ್ಯ ಸೌಕರ್ಯ ಮಾಡುತ್ತೇವೆ. ನ್ಯಾಯಾಲಯದಲ್ಲಿ ಕಾದಿರಿಸಿದ ಜಮೀನು ಪರ ವಾದ ನಡೆಸಿ ಜಮೀನು ವಶಕ್ಕೆ ಪಡೆದು ನಿವೇಶನ ಹಂಚಿಕೆ ಮಾಡುವ ಭರವಸೆ ನೀಡಿದ ಬಳಿಕ ತಾತ್ಕಾಲಿಕವಾಗಿ ಪ್ರತಿಭಟನೆ ನಿಲ್ಲಿಸಲಾಯಿತು. ನಂತರ ದಲಿತ ಸಂಘರ್ಷ ಸಮಿತಿ ಹಾಗೂ ಅರ್ಹ ಫಲಾನುಭವಿಗಳಿಂದ ಮನವಿ ಸಲ್ಲಿಸಲಾಯಿತು.

ಪ್ರತಿಭಟನೆಯಲ್ಲಿ ಕಲ್ಲೂರು ರವಿಕುಮಾರ್, ಹೊಸಹಳ್ಳಿ ರವೀಶ್, ಕುಂದರನಹಳ್ಳಿ ನಟರಾಜ್, ಎಂ.ಎನ್.ಕೋಟೆ ಕಲ್ಲೇಶ್, ಲೋಕೇಶ್ ಇತರರು ಇದ್ದರು.

eedina
ಈ ದಿನ ಡೆಸ್ಕ್‌
Website |  + posts

ಈ ಮಾಧ್ಯಮ ನಿಮ್ಮದು. ನಿಮ್ಮ ಬೆಂಬಲವೇ ನಮ್ಮ ಬಲ. ವಂತಿಗೆ ನೀಡುವುದರ ಮೂಲಕ ಕೈಜೋಡಿಸಿ, ಸತ್ಯ ನ್ಯಾಯ ಪ್ರೀತಿಯ ಮೌಲ್ಯಗಳನ್ನು ಹಂಚಲು ಜೊತೆಯಾಗಿ. ಸಹಾಯ ಅಥವಾ ಬೆಂಬಲ ನೀಡಲು ದಯವಿಟ್ಟು +91 9035362958 ಅನ್ನು ಸಂಪರ್ಕಿಸಿ.

ಪೋಸ್ಟ್ ಹಂಚಿಕೊಳ್ಳಿ:

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಶಿವಮೊಗ್ಗದ ಸಂಚಾರ ವ್ಯವಸ್ಥೆಯಲ್ಲಿ ಅರಾಜಕತೆ: ಅಧಿಕಾರಿಗಳ ನಿರ್ಲಕ್ಷ್ಯಕ್ಕೆ ನಾಗರಿಕರು ಹೈರಾಣು

ಒಮ್ಮೆ ಶಾಂತ, ಶಿಕ್ಷಣ ಹಾಗೂ ಸಂಸ್ಕೃತಿಯ ತಾಣವಾಗಿದ್ದ ಶಿವಮೊಗ್ಗ ನಗರ ಇತ್ತೀಚಿನ...

ತುಮಕೂರು | ಗಾಂಧೀ ತತ್ವಗಳಿಗೆ ವಿಶ್ವ ಮನ್ನಣೆ : ಡಾ. ಜಿ.ಪರಮೇಶ್ವರ

ರಾಷ್ಟ್ರಪಿತ ಮಹಾತ್ಮ ಗಾಂಧೀಜಿಯವರ ಅಹಿಂಸಾ ತತ್ವಗಳಿಗೆ ಇಡೀ ವಿಶ್ವದಲ್ಲಿಯೇ ಮನ್ನಣೆ ದೊರೆತಿದೆ...

ಶಿವಮೊಗ್ಗ | ಸತ್ಯ – ಅಹಿಂಸೆ ಪ್ರಬಲ ಅಸ್ತ್ರಗಳು : ಡಾ. ಟಿ. ಅವಿನಾಶ್

ಶಿವಮೊಗ್ಗ, ಭಾರತ ದೇಶಕ್ಕೆ ಸ್ವಾತಂತ್ರ್ಯವನ್ನು ತಂದುಕೊಡಲು ಮಹಾತ್ಮ ಗಾಂಧೀಜಿಯವರು ಬಳಸಿದ ಅಸ್ತ್ರಗಳೆಂದರೆ...

ಉಡುಪಿ | ಕಾರ್ಕಳ ಬ್ಲಾಕ್ ಕಾಂಗ್ರೆಸ್ ವತಿಯಿಂದ ಮಹಾತ್ಮಾ ಗಾಂಧೀಜಿ ಹಾಗೂ ಶಾಸ್ತ್ರಿ ಜಯಂತಿ ಆಚರಣೆ

ದೇಶದಲ್ಲಿ ಸಮಾನತೆಯನ್ನು ಬಯಸಿದ್ದೇ ಗಾಂಧೀಜಿಯವರ ಹತ್ಯೆಗೆ ಕಾರಣವಾಯಿತು, ಶೂದ್ರ ಮತ್ತು ಅತ್ಯಂತ...

Download Eedina App Android / iOS

X