75 ವರ್ಷ ತುಂಬಿದ ನಂತರ ಆರ್ಎಸ್ಎಸ್ ಮತ್ತು ಬಿಜೆಪಿ ನಾಯಕರ ನಿವೃತ್ತಿಯ ಕುರಿತಾದ ಸುದ್ದಿಯಾಗುತ್ತಿರುವ ನಡುವೆ ಆರ್ಎಸ್ಎಸ್ ಮುಖ್ಯಸ್ಥ ಮೋಹನ್ ಭಾಗವತ್ ಅವರ ಹೇಳಿಕೆ ಹೊರಬಿದ್ದಿದೆ. “ನಾನು ನಿವೃತ್ತಿ ಹೊಂದುತ್ತಿದ್ದೇನೆ ಎಂದು ಎಂದಿಗೂ ಹೇಳಿಲ್ಲ ಅಥವಾ ಯಾರಾದರೂ ನಿವೃತ್ತರಾಗಬೇಕೆಂದು ಸೂಚಿಸಿಲ್ಲ” ಎಂದು ಭಾಗವತ್ ಹೇಳಿಕೊಂಡಿದ್ದಾರೆ. ಆರ್ಎಸ್ಎಸ್ ಶತಮಾನೋತ್ಸವದ ಅಂಗವಾಗಿ ದೆಹಲಿಯಲ್ಲಿ ನಡೆದ ಮೂರು ದಿನಗಳ ಉಪನ್ಯಾಸ ಸರಣಿಯ ಕೊನೆಯಲ್ಲಿ ಈ ಬಗ್ಗೆ ಮಾತನಾಡಿದ ಭಾಗವತ್, “ಆರ್ಎಸ್ಎಸ್ ನಿಲ್ಲಿಸಲು ಹೇಳುವವರೆಗೂ ನಾವು ಕೆಲಸ ಮಾಡಲು ಸಿದ್ಧರಿದ್ದೇವೆ” ಎಂದರು.
