75 ವರ್ಷವಾದಾಗ ನಿವೃತ್ತಿ | ನಾನೂ ಇಲ್ಲ ಬೇರೆಯವರೂ ಇಲ್ಲ: ಮೋಹನ್ ಭಾಗವತ್

Date:

Advertisements

75 ವರ್ಷ ತುಂಬಿದ ನಂತರ ಆರ್‌ಎಸ್‌ಎಸ್ ಮತ್ತು ಬಿಜೆಪಿ ನಾಯಕರ ನಿವೃತ್ತಿಯ ಕುರಿತಾದ ಸುದ್ದಿಯಾಗುತ್ತಿರುವ ನಡುವೆ ಆರ್‌ಎಸ್‌ಎಸ್ ಮುಖ್ಯಸ್ಥ ಮೋಹನ್ ಭಾಗವತ್ ಅವರ ಹೇಳಿಕೆ ಹೊರಬಿದ್ದಿದೆ. “ನಾನು ನಿವೃತ್ತಿ ಹೊಂದುತ್ತಿದ್ದೇನೆ ಎಂದು ಎಂದಿಗೂ ಹೇಳಿಲ್ಲ ಅಥವಾ ಯಾರಾದರೂ ನಿವೃತ್ತರಾಗಬೇಕೆಂದು ಸೂಚಿಸಿಲ್ಲ” ಎಂದು ಭಾಗವತ್ ಹೇಳಿಕೊಂಡಿದ್ದಾರೆ.

ಆರ್‌ಎಸ್‌ಎಸ್ ಶತಮಾನೋತ್ಸವದ ಅಂಗವಾಗಿ ದೆಹಲಿಯಲ್ಲಿ ನಡೆದ ಮೂರು ದಿನಗಳ ಉಪನ್ಯಾಸ ಸರಣಿಯ ಕೊನೆಯಲ್ಲಿ ಈ ಬಗ್ಗೆ ಮಾತನಾಡಿದ ಭಾಗವತ್, “ಆರ್‌ಎಸ್‌ಎಸ್ ನಿಲ್ಲಿಸಲು ಹೇಳುವವರೆಗೂ ನಾವು ಕೆಲಸ ಮಾಡಲು ಸಿದ್ಧರಿದ್ದೇವೆ” ಎಂದರು.

ಇದನ್ನು ಓದಿದ್ದೀರಾ? ಭಾಗವತ್, ಆರ್‌ಎಸ್‌ಎಸ್‌ ಜೊತೆ ಮೋದಿ ಇರುಸು-ಮುರುಸು: ಬಿಕ್ಕಟ್ಟಿನ ನಡುವೆ ಧನಕರ್ ರಾಜೀನಾಮೆ, ನಡೆದಿರುವುದೇನು?

ಭಾಗವತ್ ಮತ್ತು ಪ್ರಧಾನಿ ನರೇಂದ್ರ ಮೋದಿ ಇಬ್ಬರಿಗೂ ಮುಂದಿನ ತಿಂಗಳು 75 ವರ್ಷವಾಗಲಿದೆ. 2014ರ ಲೋಕಸಭೆ ಚುನಾವಣೆಗೂ ಮುನ್ನವೇ ಬಿಜೆಪಿ ಗೆಲುವಿನ ನಂತರ ಇಬ್ಬರು ಮಾಜಿ ಬಿಜೆಪಿ ಅಧ್ಯಕ್ಷರಾದ ಎಲ್ ಕೆ ಅಡ್ವಾಣಿ ಮತ್ತು ಎಂ ಎಂ ಜೋಶಿ ಅವರಿಗೆ 75 ವರ್ಷ ಕಳೆದ ಕಾರಣ ನಿವೃತ್ತಿ ನೀಡಲಾಗಿತ್ತು. ಇಬ್ಬರನ್ನೂ ಬದಿಗೊತ್ತಲಾಗಿದೆ. ಇದೀಗ ಮೋದಿ, ಭಾಗವತ್‌ಗೆ 75 ವರ್ಷವಾಗಲಿರುವ ಕಾರಣ ಅವರೂ ನಿವೃತ್ತಿ ಹೊಂದಬೇಕು ಎಂಬ ಆಗ್ರಹ ಕೇಳಿಬಂದಿದೆ. ಮೋದಿ ನಿವೃತ್ತಿ ಹೊಂದಬೇಕೆಂದು ಪರೋಕ್ಷವಾಗಿ ಭಾಗವತ್ ಕೂಡಾ ಹೇಳಿದ್ದರು.

“ನಾನು 50 ವರ್ಷಗಳಿಂದ ಶಾಖೆ ನಡೆಸುತ್ತಿದ್ದೇನೆ, ಆದ್ದರಿಂದ ಯಾರಾದರೂ ನನಗೆ ಅದರ ಬಗ್ಗೆ ಸಲಹೆ ನೀಡಿದರೆ, ನಾನು ಅಲ್ಲಿ ಪರಿಣಿತ. ರಾಜ್ಯವನ್ನು ನಡೆಸುವ ವಿಷಯಕ್ಕೆ ಬಂದಾಗ, ಅವರು ಅದನ್ನು ಬಹಳ ಸಮಯದಿಂದ ಮಾಡುತ್ತಿದ್ದಾರೆ. ಆದ್ದರಿಂದ ಅವರು ತಜ್ಞರು. ನಮಗೆ ಪರಸ್ಪರರ ಪರಿಣತಿ ತಿಳಿದಿದೆ. ಸಲಹೆಗಳನ್ನು ನೀಡಬಹುದು. ಆದರೆ ಅವರ ಕ್ಷೇತ್ರದಲ್ಲಿ ನಿರ್ಧಾರ ಅವರದು, ಮತ್ತು ನಮ್ಮ ಕ್ಷೇತ್ರದಲ್ಲಿ ನಮ್ಮದು” ಎಂದೂ ಬಿಜೆಪಿ ನಾಯಕತ್ವವನ್ನು ಉದ್ದೇಶಿಸಿ ಭಾಗವತ್ ಹೇಳಿದರು.

ಆರ್‌ಎಸ್‌ಎಸ್ ಸಿದ್ಧಾಂತವಾದಿ ಮೊರೊಪಂತ್ ಪಿಂಗಲೆ 75ನೇ ಹುಟ್ಟುಹಬ್ಬದ ಸಂದರ್ಭದಲ್ಲಿ ಮಾತನಾಡಿದ್ದ ಮೋಹನ್ ಭಾಗವತ್ 75ನೇ ವಯಸ್ಸಿನಲ್ಲಿ ನಾಯಕರು ಹಿಂದೆ ಸರಿಯಬೇಕು ಎಂದು ಹೇಳಿದ್ದರು. “ನಿಮಗೆ 75 ವರ್ಷವಾದಾಗ ಶಾಲನ್ನು ಹೊದಿಸಿದರೆ ನೀವು ಒಂದು ಪಕ್ಕಕ್ಕೆ ಸರಿದು ಇತರರು ಕೆಲಸ ಮಾಡಲು ಬಿಡಬೇಕು ಎಂದು ಅರ್ಥ ಎಂದು ಪಿಂಗಲೆ ಹೇಳಿದ್ದರು” ಎಂದು ಭಾಗವತ್ ತಿಳಿಸಿದ್ದರು.

ಈದಿನ 1
ಈ ದಿನ ಡೆಸ್ಕ್
+ posts

ಈ ಮಾಧ್ಯಮ ನಿಮ್ಮದು. ನಿಮ್ಮ ಬೆಂಬಲವೇ ನಮ್ಮ ಬಲ. ವಂತಿಗೆ ನೀಡುವುದರ ಮೂಲಕ ಕೈಜೋಡಿಸಿ, ಸತ್ಯ ನ್ಯಾಯ ಪ್ರೀತಿಯ ಮೌಲ್ಯಗಳನ್ನು ಹಂಚಲು ಜೊತೆಯಾಗಿ. ಸಹಾಯ ಅಥವಾ ಬೆಂಬಲ ನೀಡಲು ದಯವಿಟ್ಟು +91 9035362958 ಅನ್ನು ಸಂಪರ್ಕಿಸಿ.

ಪೋಸ್ಟ್ ಹಂಚಿಕೊಳ್ಳಿ:

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಯುವಜನರಿಗಾಗಿ ಪ್ರಾಣವನ್ನೇ ತ್ಯಾಗ ಮಾಡುತ್ತೇನೆ: ಉತ್ತರಾಖಂಡ ಮುಖ್ಯಮಂತ್ರಿ ಪುಷ್ಕರ್ ಸಿಂಗ್ ಧಾಮಿ

ಸುಡುವ ಬಿಸಿಲಿನಲ್ಲಿ ಕುರಿತು ಯುವಜನರು ತಮ್ಮ ಹಕ್ಕೊತ್ತಾಯಗಳ ಈಡೇರಿಕೆಗಾಗಿ ಹೋರಾಟ ನಡೆಸುತ್ತಿದ್ದಾರೆ....

ದೆಹಲಿ ಶಾಲೆಗಳಲ್ಲಿ RSS ಬೋಧನೆ: ಮಕ್ಕಳ ಎಳೆ ಮನಸ್ಸಲ್ಲಿ ಕೋಮುದ್ವೇಷ ಬಿತ್ತುವ ಹುನ್ನಾರ!

ಕೋಮುವಾದಿ, ಕೋಮುದ್ವೇಷಿ, ಸಮಾಜಘಾತುಕ ಸಂಘಟನೆಯ ಬಗ್ಗೆ ಶಾಲೆಗಳಲ್ಲಿ ಬೋಧಿಸುವುದು ಎಳೆ ಮನಸ್ಸುಗಳಲ್ಲಿ...

ಆರ್‌ಎಸ್‌ಎಸ್‌ನ ಕೈಗಳಿಗೆ ಮಹಾತ್ಮ ಗಾಂಧಿಯ ರಕ್ತದ ಕಲೆ ಅಂಟಿದೆ: ಕಾಂಗ್ರೆಸ್‌

ಆರ್‌ಎಸ್‌ಎಸ್ ಮಹಾತ್ಮ ಗಾಂಧಿ, ಭಗತ್ ಸಿಂಗ್ ಮತ್ತು ಚಂದ್ರಶೇಖರ್ ಆಜಾದ್ ಅವರಂತಹ...

RSS ಕುರಿತ ₹100 ನಾಣ್ಯ & ಅಂಚೆ ಚೀಟಿ ಬಿಡುಗಡೆ, ಸಂವಿಧಾನಕ್ಕೆ ಎಸಗಿದ ಘೋರ ಅಪಚಾರ: ಸಿಪಿಐ(ಎಂ)

ರಾಷ್ಟ್ರೀಯ ಸ್ವಯಂಸೇವಕ ಸಂಘದ (ಆರ್‌ಎಸ್‌ಎಸ್) ಶತಮಾನೋತ್ಸವ ಸಮಾರಂಭದ ಪ್ರಯುಕ್ತ ಪ್ರಧಾನಿ ನರೇಂದ್ರ...

Download Eedina App Android / iOS

X