ಪ್ರಕರಣವೊಂದರಲ್ಲಿ ಕಲಬುರಗಿ ದಕ್ಷಿಣ ವಿಭಾಗದ ಎಸಿಪಿ ಶರಣಬಸಪ್ಪ ಸುಬೇದಾರ್ ಸೇರಿ ಐವರು ಸಿಬ್ಬಂದಿ ಲೋಕಾಯುಕ್ತ ಪೊಲೀಸರ ಬಲೆಗೆ ಬಿದ್ದಿದ್ದು, ಪೊಲೀಸರು ಬಂಧಿಸಿದ್ದಾರೆ.
ʼಪ್ರಕರಣದ ತನಿಖೆ ಅಂತ್ಯಗೊಳಿಸಲು 40 ಲಕ್ಷ ರೂಪಾಯಿ ಲಂಚಕ್ಕೆ ಬೇಡಿಕೆಯಿಟ್ಟ ಎಸಿಪಿ ಶರಣಬಸಪ್ಪ ಸುಬೇದಾರ್ ಸೇರಿದಂತೆ ಐವರು ರೇವಣಸಿದ್ದಪ್ಪ ಎಂಬುವವರಿಂದ ಲಂಚದ ಹಣ ಪಡೆಯುತ್ತಿರುವ ವೇಳೆ ಲೋಕಾಯುಕ್ತ ಅಧಿಕಾರಿಗಳು ಬಲೆ ಬೀಸಿದರು.
ಎಸಿಪಿ ಶರಣಬಸಪ್ಪ ಸುಬೇದಾರ್, ರೈಟರ್ ಚಂದ್ರಕಾಂತ್, ಕಾನ್‌ಸ್ಟೇಬಲ್ ರಾಘವೇಂದ್ರ ಹಾಗೂ ಇಬ್ಬರು ಖಾಸಗಿ ವ್ಯಕ್ತಿಗಳಾದ ಶಿವಪ್ಪ, ದಸ್ತಗೀರ್ ಬಲೆಗೆ ಬಿದ್ದವರು. ಲೋಕಾಯುಕ್ತ ಎಸ್ಪಿ ಸಿದ್ದರಾಜು ನೇತ್ರತ್ವದಲ್ಲಿ ದಾಳಿ ನಡೆದಿದ್ದು, ಐವರನ್ನು ವಶಕ್ಕೆ ಪಡೆದು ವಿಚಾರಣೆ ನಡೆಸುತ್ತಿದ್ದಾರೆ.
ಇದನ್ನೂ ಓದಿ : ಕಲಬುರಗಿ | ಅನ್ಯಜಾತಿ ಯುವಕನನ್ನು ಪ್ರೀತಿಸಿದಕ್ಕೆ ಮಗಳನ್ನು ಕೊಂದ ತಂದೆ