ಶಿವಮೊಗ್ಗ | ಮಧ್ಯಪಾನ ಮಾಡಿ ಆಂಬುಲೆನ್ಸ್ ಚಾಲನೆ : ಬಿತ್ತು 10,000 ದಂಡ

Date:

Advertisements

ಶಿವಮೊಗ್ಗ ನಗರದಲ್ಲಿ ಸಂಚಾರಿ ನಿಯಮ ಉಲ್ಲಂಘಿಸುವ ಚಾಲಕರಿಗೆ ಸಿಂಹ ಸ್ವಪ್ನ ಆಗಿರುವ ಜೊತೆಗೆ ದಿನ ನಿತ್ಯ ಶಿವಮೊಗ್ಗ ನಗರದಲ್ಲಿ ವಾಹನ ಸವಾರರಿಗೆ ಅನುಕೂಲವಾಗಲೆಂದು ಪ್ರಾಮಾಣಿಕ ಕರ್ತವ್ಯ ಮಾಡುತ್ತಿರುವ,

ನಗರದಲ್ಲಿ ಟ್ರಾಫಿಕ್ ಸಮಸ್ಯೆ ಬಗೆಹರಿಸಿಕೊಡಲು ಸಾಕಷ್ಟು ಒಳ್ಳೆ ಒಳ್ಳೆಯ ಕೆಲಸ ಮಾಡುತ್ತ ಬಂದಿರುವ ಪಶ್ಚಿಮ ಸಂಚಾರಿ ಠಾಣೆಯ ಪಿಎಸ್ಐ ತಿರುಮಲೇಶ್ ಮತ್ತೊಮ್ಮೆ ಸುದ್ದಿಯಲ್ಲಿದ್ದು ಈ ಬಾರಿ ವಿಶೇಷ ಏನಂದರೆ,

ಮಧ್ಯಪಾನ ಮಾಡಿ ಆಂಬುಲೆನ್ಸ್ ಚಲಾಯಿಸಿದ ಚಾಲಕನಿಗೆ ಪಿಎಸ್ಐ ತಿರುಮಲೇಶ್ ರಿಂದ ಚಾಲಕನಿಗೆ 10,000₹ ದಂಡ ಬಿದ್ದಿದೆ .

ದಿ: 25/08/2025 ರಂದು ಮದ್ಯಪಾನ ಮಾಡಿ ಆಂಬ್ಯುಲೆನ್ಸ್ ಚಲಾಯಿಸಿದ ವಾಹನ ಚಾಲಕನ ವಿರುದ್ದ ಪಶ್ಚಿಮ ಸಂಚಾರ ಪೊಲೀಸ್ ಠಾಣಾ ಪಿಎಸ್‌ಐ ತಿರುಮಲೇಶ್ ಮತ್ತು ಅವರ ಸಿಬ್ಬಂದಿಗಳಾದ ಹೆಚ್ ಸಿ ರಾಜಾಸಾಬ್ & ಪಿಸಿ ಸುರೇಶ್ ರವರು ಪ್ರಕರಣ ದಾಖಲಿಸಿ ಮಾನ್ಯ ನ್ಯಾಯಾಲಯಕ್ಕೆ ದೋಷಾರೋಪಣೆ ಪತ್ರ ಸಲ್ಲಿಸಿದ್ದು.

ಅದರಂತೆ 4th ACJ & JMFC ನ್ಯಾಯಾಲಯ ಶಿವಮೊಗ್ಗ ಆಂಬ್ಯುಲೆನ್ಸ್ ಚಾಲಕನಿಗೆ 10,000/- ದಂಡ ವಿಧಿಸಿರುತ್ತದೆ.

ಇದೀಗ ಈ ವಿಡಿಯೋ ಸಾಕಷ್ಟು ವೈರಲ್ ಆಗುತ್ತಿದ್ದೂ ಅದರಂತೆ ನಗರದ ಪ್ರಜ್ಞಾವಂತ ಜನತೆ ತಿರುಮಲೇಶ್ ಅವರ ಕರ್ತವ್ಯಕ್ಕೆ ಫಿದಾ ಆಗಿದ್ದು. ಇದೆ ರೀತಿ ಮುಂದಿನ ದಿನಗಳಲ್ಲಿ ಒಳ್ಳೆಯ ಕೆಲಸ ಮುಂದುವರಿಯಲಿ ಎಂಬ ಅಭಿಪ್ರಾಯ ವ್ಯಕ್ತಪಡಿಸುತ್ತಿದ್ದಾರೆ.

eedina
ಈ ದಿನ ಡೆಸ್ಕ್‌
Website |  + posts

ಈ ಮಾಧ್ಯಮ ನಿಮ್ಮದು. ನಿಮ್ಮ ಬೆಂಬಲವೇ ನಮ್ಮ ಬಲ. ವಂತಿಗೆ ನೀಡುವುದರ ಮೂಲಕ ಕೈಜೋಡಿಸಿ, ಸತ್ಯ ನ್ಯಾಯ ಪ್ರೀತಿಯ ಮೌಲ್ಯಗಳನ್ನು ಹಂಚಲು ಜೊತೆಯಾಗಿ. ಸಹಾಯ ಅಥವಾ ಬೆಂಬಲ ನೀಡಲು ದಯವಿಟ್ಟು +91 9035362958 ಅನ್ನು ಸಂಪರ್ಕಿಸಿ.

ಪೋಸ್ಟ್ ಹಂಚಿಕೊಳ್ಳಿ:

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಗದಗ | ತಹಸೀಲ್ದಾರ ಕಚೇರಿಗಳಲ್ಲಿ ಅಧಿಕಾರಿಗಳ ಬ್ರಹ್ಮಾಂಡ ಭ್ರಷ್ಟಾಚಾರ ಆರೋಪ

"ಜಿಲ್ಲೆಯ ಎಲ್ಲಾ ತಾಲೂಕ ತಹಶೀಲ್ದಾರ್ ಕಚೇರಿ ಹಾಗೂ ಹೋಬಳಿಗಳಲ್ಲಿ ವೃಧ್ಯಾಪ್ಯ ವೇತನ,...

ಜನಮನ ಗೆದ್ದ ತುಮಕೂರು ದಸರಾ ಉತ್ಸವ : ಡಾ. ಜಿ.ಪರಮೇಶ್ವರ

 ತುಮಕೂರು ದಸರಾ ಉತ್ಸವವು ನಾಡಿನಾದ್ಯಂತ ಜನರ ಮನಸ್ಸನ್ನು ಗೆಲ್ಲುವ ಮೂಲಕ ಐತಿಹಾಸಿಕ...

ಶಿವಮೊಗ್ಗ | ಪಾಲಿಕೆಗೆ 19 ಗ್ರಾಮಗಳ ಸೇರ್ಪಡೆಗೆ ಸಿದ್ಧತೆ

ಶಿವಮೊಗ್ಗ, ನಿರೀಕ್ಷೆಯಂತೆಯೇ ತುಮಕೂರು ಮತ್ತು ಶಿವಮೊಗ್ಗ ನಗರ ಪಾಲಿಕೆಗಳ ವ್ಯಾಪ್ತಿ ವಿಸ್ತರಣೆಗೆ...

Download Eedina App Android / iOS

X