ಸ್ಥಿರಾಸ್ತಿಗಳ ಮೇಲಿನ ವ್ಯವಹಾರಗಳ ದಸ್ತಾವೇಜುಗಳ ನೋಂದಣಿ ಶುಲ್ಕ ಏರಿಕೆಯು ಇಂದಿನಿಂದಲೇ(ಆಗಸ್ಟ್ 31) ಜಾರಿಯಾಗಲಿದೆ. ರಾಜ್ಯ ಸರ್ಕಾರವು ನೋಂದಣಿ ಶುಲ್ಕವನ್ನು ಶೇಕಡ 1ರಿಂದ ಶೇಕಡಕ್ಕೆ 2ಕ್ಕೆ ಏರಿಸಿ ಆದೇಶ ಹೊರಡಿಸಿದೆ. ಪ್ರಸ್ತುತ ನೋಂದಣಿ ಶುಲ್ಕ ಏರಿಕೆ ಕಾರಣ ನೋಂದಣಿ ವೇಳೆ ಆಸ್ತಿಯ ಮಾರ್ಗಸೂಚಿ ಮೌಲ್ಯದ ಶೇ.5 ಮುದ್ರಾಂಕ ಶುಲ್ಕ, ಸೆಸ್ ಶೇ.0.5 ಮತ್ತು ಸರ್ಚಾರ್ಜ್ ಶೇ.0.1 ಸೇರಿ ಆಸ್ತಿಯ ಮಾರ್ಗಸೂಚಿ ಮೌಲ್ಯದ ಶೇಕಡ 7.5ರಷ್ಟನ್ನು ನೋಂದಣಿ ವೇಳೆ ಪಾವತಿಸಬೇಕಾಗುತ್ತದೆ. ಆದರೆ ಈ ಹಿಂದೆ ಮುದ್ರಾಂಕ ಶುಲ್ಕ ಶೇ.5, ಸೆಸ್ ಶೇ.0.5, ಸರ್ಚಾರ್ಜ್ ಶೇ.0.1 ಮತ್ತು ಶೇಕಡ ಒಂದರಷ್ಟು ನೋಂದಣಿ ಶುಲ್ಕ ಸೇರಿ ಒಟ್ಟು ಶೇಕಡ 6.6ರಷ್ಟು ವೆಚ್ಚವಾಗುತ್ತಿತ್ತು.
