ಮಧ್ಯಪ್ರದೇಶದ ಯುವಕನ ಮೇಲೆ ವೃಂದಾವನದ ಆಶ್ರಮದ ಮುಖ್ಯ ಪುರೋಹಿತರು ಲೈಂಗಿಕ ದೌರ್ಜನ್ಯ ಎಸಗಿ ಅದರ ವಿಡಿಯೋ ಮಾಡಿ ಬ್ಲ್ಯಾಕ್‌ಮೇಲ್ ಮಾಡಿದ ಆರೋಪ ಕೇಳಿಬಂದಿದೆ. ಈ ಸಂಬಂಧ ಮಥುರಾದ ಹಿರಿಯ ಪೊಲೀಸ್ ವರಿಷ್ಠಾಧಿಕಾರಿ (ಎಸ್‌ಎಸ್‌ಪಿ) ಮಾಧ್ಯಮಕ್ಕೆ ಮಾಹಿತಿ ನೀಡಿದ್ದಾರೆ.
2022ರ ನವೆಂಬರ್ 22ರಂದು ಯುವಕ ಆಶ್ರಮದಲ್ಲಿದ್ದಾಗ ಲೈಂಗಿಕ ದೌರ್ಜನ್ಯ ನಡೆದಿದೆ. ‘ಮಹಾಂತ್’ ಎಂದು ಕರೆಯಲ್ಪಡುವ ಪುರೋಹಿತ ತನ್ನ ಮೇಲೆ ದೌರ್ಜನ್ಯ ಎಸಗುವ ಮುನ್ನ ಮಾದಕ ದ್ರವ್ಯ ಬೆರೆಸಿ ಪ್ರಸಾದ ನೀಡಿದ್ದಾನೆ. ಬಳಿಕ ವಿಡಿಯೋ ಮಾಡಿ ಬ್ಲ್ಯಾಕ್‌ಮೇಲ್ ಮಾಡಿದ್ದಾನೆ ಎಂದು ಯುವಕ ಆರೋಪಿಸಿದ್ದಾನೆ.
ಇದನ್ನು ಓದಿದ್ದೀರಾ? ಈ ದಿನ ಸಂಪಾದಕೀಯ | ಮಹಿಳಾ ದಿನ ಕೇವಲ ಆಚರಣೆ ಮಾತ್ರವಲ್ಲ ಹಿರಿಮೆ
ತನ್ನ ಮೇಲಿನ ಲೈಂಗಿಕ ದೌರ್ಜನ್ಯವನ್ನು ಯುವಕ ವಿರೋಧಿಸಿದಾಗ ಆತನಿಗೆ ಥಳಿಸಲಾಗಿದೆ. ಯುವಕ ಕೊನೆಗೆ ಆಶ್ರಮದಿಂದ ಪರಾರಿಯಾಗಿ ತನ್ನ ಮನೆಗೆ ಮರಳಿದ್ದಾನೆ. ಬಳಿಕ ಈ ಸಂಬಂಧ ದೂರು ನೀಡಿದ್ದಾನೆ ಎಂದು ಹೇಳಲಾಗಿದೆ.
ಆರಂಭದಲ್ಲಿ ಯುವಕ ಗ್ರಾ ವ್ಯಾಪ್ತಿಯ ಪೊಲೀಸ್ ಉಪ ಮಹಾನಿರ್ದೇಶಕ (ಡಿಐಜಿ) ಅವರನ್ನು ಸಂಪರ್ಕಿಸಿದ್ದು, ಅವರು ಮಥುರಾದ ಎಸ್‌ಎಸ್‌ಪಿಗೆ ಸೂಕ್ತ ಕ್ರಮ ಕೈಗೊಳ್ಳುವಂತೆ ತಿಳಿಸಿದ್ದಾರೆ. ಇದರ ನಂತರ, ಎಸ್‌ಎಸ್‌ಪಿ ವೃತ್ತ ಅಧಿಕಾರಿ (ಸದರ್) ಸಂದೀಪ್ ಕುಮಾರ್ ಸಿಂಗ್ ಅವರಿಗೆ ತನಿಖೆ ಜವಾಬ್ದಾರಿ ವಹಿಸಲಾಗಿದೆ.
“ಮಹಂತ್ ವಿರುದ್ಧ ಯುವಕ ಮಾಡಿರುವ ಆರೋಪಗಳು ತುಂಬಾ ಗಂಭೀರವಾಗಿದೆ. ಆದಾಗ್ಯೂ, ಘಟನೆ ಸುಮಾರು ಮೂರು ವರ್ಷಗಳ ಹಿಂದೆ ನಡೆದಿರುವುದಾಗಿ ವರದಿಯಾಗಿರುವುದರಿಂದ, ಈ ವಿಷಯವನ್ನು ಕೂಲಂಕಷವಾಗಿ ತನಿಖೆ ಮಾಡಲಾಗುತ್ತಿದೆ” ಎಂದು ಅಧಿಕಾರಿ ಹೇಳಿದರು.
