ಭಾರತದ ‘Educate Girls’ಗೆ ಪ್ರತಿಷ್ಠಿತ ರಾಮನ್ ಮ್ಯಾಗ್ಸೆಸೆ ಪ್ರಶಸ್ತಿ: ಹೆಣ್ಣುಮಕ್ಕಳ ಶಿಕ್ಷಣಕ್ಕಾಗಿ ಐತಿಹಾಸಿಕ ಮೈಲಿಗಲ್ಲು

Date:

Advertisements

ಕುಗ್ರಾಮಗಳಲ್ಲಿ ಶಾಲೆಯಿಂದ ಹೊರಗುಳಿದ ಹೆಣ್ಣುಮಕ್ಕಳ ಶಿಕ್ಷಣಕ್ಕಾಗಿ ದಶಕಗಳಿಂದ ಶ್ರಮಿಸುತ್ತಿರುವ ಭಾರತೀಯ ಲಾಭರಹಿತ ಸಂಸ್ಥೆ ‘Educate Girls’ಗೆ 2025ನೇ ಸಾಲಿನ ರಾಮನ್ ಮ್ಯಾಗ್ಸೆಸೆ ಪ್ರಶಸ್ತಿ ಲಭಿಸಿದೆ.

ಏಷ್ಯಾದ ನೊಬೆಲ್ ಪ್ರಶಸ್ತಿ ಎಂದೇ ಪರಿಗಣಿತವಾದ ಈ ಗೌರವವನ್ನು ಪಡೆದ ಮೊದಲ ಭಾರತೀಯ ಸಂಸ್ಥೆ ಎಂಬ ಇತಿಹಾಸವನ್ನು ‘Educate Girls’ ನಿರ್ಮಿಸಿದೆ ಎಂದು ರಾಮನ್ ಮ್ಯಾಗ್ಸೆಸೆ ಪ್ರಶಸ್ತಿ ಪ್ರತಿಷ್ಠಾನ (RMAF) ತನ್ನ ಹೇಳಿಕೆಯಲ್ಲಿ ತಿಳಿಸಿದೆ. ಈ ಪ್ರಶಸ್ತಿಯು ಸಂಸ್ಥೆಯ ಸ್ಥಾಪಕಿ ಸಫೀನಾ ಹುಸೇನ್‌ರವರ ನೇತೃತ್ವದಲ್ಲಿ ಹೆಣ್ಣುಮಕ್ಕಳ ಶಿಕ್ಷಣಕ್ಕಾಗಿ ನಡೆಸಿದ ಅವಿರತ ಪ್ರಯತ್ನಗಳಿಗೆ ಸಂದ ಗೌರವವಾಗಿದೆ.

2007ರಲ್ಲಿ ಸ್ಥಾಪನೆಯಾದ ‘Educate Girls’ ಸಂಸ್ಥೆಯನ್ನು ಲಂಡನ್ ಸ್ಕೂಲ್ ಆಫ್ ಎಕನಾಮಿಕ್ಸ್‌ನ ಪದವೀಧರೆ ಸಫೀನಾ ಹುಸೇನ್ ಸ್ಥಾಪಿಸಿದರು. ಸ್ಯಾನ್ ಫ್ರಾನ್ಸಿಸ್ಕೊದಿಂದ ಭಾರತಕ್ಕೆ ಮರಳಿದ ಅವರು, ಗ್ರಾಮೀಣ ಭಾಗದ ಹೆಣ್ಣುಮಕ್ಕಳ ಅನಕ್ಷರತೆಯನ್ನು ನಿವಾರಿಸಲು ಈ ಸಂಸ್ಥೆಯನ್ನು ಆರಂಭಿಸಿದರು. ರಾಜಸ್ಥಾನದಿಂದ ತನ್ನ ಕಾರ್ಯವನ್ನು ಪ್ರಾರಂಭಿಸಿದ ಸಂಸ್ಥೆ, ಶಿಕ್ಷಣದಿಂದ ವಂಚಿತರಾದ ಹೆಣ್ಣುಮಕ್ಕಳಿರುವ ಅತ್ಯಂತ ಬಡತನದ ಗ್ರಾಮೀಣ ಪ್ರದೇಶಗಳನ್ನು ಗುರುತಿಸಿ, ಶಾಲೆಗೆ ಸೇರದ ಅಥವಾ ಶಾಲೆಯಿಂದ ಹೊರಗುಳಿದ ಹೆಣ್ಣುಮಕ್ಕಳನ್ನು ತರಗತಿಗೆ ಕರೆತಂದು, ಅವರಿಗೆ ಉನ್ನತ ಶಿಕ್ಷಣ ಮತ್ತು ಉದ್ಯೋಗಕ್ಕೆ ಅಗತ್ಯವಾದ ಶಿಕ್ಷಣವನ್ನು ಪೂರ್ಣಗೊಳಿಸುವವರೆಗೆ ತೊಡಗಿಸಿಕೊಂಡಿದೆ.

2015ರಲ್ಲಿ, ‘Educate Girls’ ಸಂಸ್ಥೆಯು ಶಿಕ್ಷಣ ಕ್ಷೇತ್ರದಲ್ಲಿ ವಿಶ್ವದ ಮೊದಲ ಡೆವಲಪ್‌ಮೆಂಟ್ ಇಂಪ್ಯಾಕ್ಟ್ ಬಾಂಡ್ (DIB) ಅನ್ನು ಪರಿಚಯಿಸಿತು. ಈ ಯೋಜನೆಯು ಆರ್ಥಿಕ ನೆರವನ್ನು ನೇರವಾಗಿ ಪರಿಮಾಣಾತ್ಮಕ ಫಲಿತಾಂಶಗಳಿಗೆ ಸಂಯೋಜಿಸಿತು. ಆರಂಭದಲ್ಲಿ 50 ಗ್ರಾಮಗಳ ಪೈಲಟ್ ಶಾಲೆಗಳಿಂದ ಶುರುವಾದ ಈ ಯೋಜನೆ, ಇಂದು ಭಾರತದ ಅತ್ಯಂತ ಹಿಂದುಳಿದ ಪ್ರದೇಶಗಳ 30,000ಕ್ಕೂ ಹೆಚ್ಚು ಗ್ರಾಮಗಳಿಗೆ ವಿಸ್ತರಿಸಿದೆ. ಈ ಪ್ರಯತ್ನದ ಮೂಲಕ 20 ಲಕ್ಷಕ್ಕೂ ಹೆಚ್ಚು ಹೆಣ್ಣುಮಕ್ಕಳು ಶಿಕ್ಷಣ ಪಡೆದಿದ್ದು, 90 ಶೇಕಡಕ್ಕಿಂತಲೂ ಹೆಚ್ಚು ಉಳಿಕೆ ದರವನ್ನು ಸಾಧಿಸಿದೆ ಎಂದು RMAF ತಿಳಿಸಿದೆ.

ಸಂಸ್ಥೆಯು ‘ಪ್ರಗತಿ’ ಎಂಬ ಓಪನ್ ಸ್ಕೂಲಿಂಗ್ ಕಾರ್ಯಕ್ರಮವನ್ನೂ ಪರಿಚಯಿಸಿದೆ. ಈ ಕಾರ್ಯಕ್ರಮವು 15 ರಿಂದ 29 ವರ್ಷದ ಹೆಣ್ಣು ಮಕ್ಕಳಿಗೆ ತಮ್ಮ ಶಿಕ್ಷಣವನ್ನು ಪೂರ್ಣಗೊಳಿಸಲು ಮತ್ತು ಜೀವನಾವಕಾಶಗಳನ್ನು ಪಡೆಯಲು ಸಹಾಯ ಮಾಡುತ್ತದೆ. 300 ಶಿಕ್ಷಾರ್ಥಿಗಳೊಂದಿಗೆ ಆರಂಭವಾದ ಈ ಕಾರ್ಯಕ್ರಮವು ಈಗ 31,500ಕ್ಕೂ ಹೆಚ್ಚು ತರಬೇತುದಾರರನ್ನು ಒಳಗೊಂಡಿದೆ.

ಇದನ್ನು ಓದಿದ್ದೀರಾ? ಈ ದಿನ ಸಂಪಾದಕೀಯ | ಅಗೆದಷ್ಟೂ ಆಳವಾಗುತ್ತಿದೆ ಧರ್ಮಸ್ಥಳ ಪ್ರಕರಣ; ಸೌಜನ್ಯಳಿಗೆ ಸಿಗಲಿ ನ್ಯಾಯ

ರಾಮನ್ ಮ್ಯಾಗ್ಸೆಸೆ ಪ್ರಶಸ್ತಿಯು ಏಷ್ಯಾದ ಜನರಿಗೆ ನಿಸ್ವಾರ್ಥ ಸೇವೆಯನ್ನು ಗುರುತಿಸಲು ನೀಡಲಾಗುವ ಗೌರವವಾಗಿದೆ. ಈ ವರ್ಷದ ಪ್ರಶಸ್ತಿಯನ್ನು ‘Educate Girls’ ಜೊತೆಗೆ ಮಾಲ್ಡೀವ್ಸ್‌ನ ಶಾಹಿನಾ ಅಲಿ ಮತ್ತು ಫಿಲಿಪೈನ್ಸ್‌ನ ಫ್ಲೇವಿಯಾನೊ ಆಂಟೋನಿಯೊ ಎಲ್ ವಿಲ್ಲಾನುಯೆವಾ ಅವರಿಗೂ ನೀಡಲಾಗಿದೆ. ಪ್ರಶಸ್ತಿ ಪುರಸ್ಕೃತರು ರಾಮನ್ ಮ್ಯಾಗ್ಸೆಸೆ ಅವರ ಚಿತ್ರವಿರುವ ಪದಕ, ಅವರ ಉಲ್ಲೇಖದೊಂದಿಗೆ ಕೆತ್ತಿದ ಪ್ರಮಾಣಪತ್ರ ಮತ್ತು 30,000 ಅಮೆರಿಕನ್ ಡಾಲರ್‌ಗಳ (ಅಂದಾಜು 25 ಲಕ್ಷ ರೂಪಾಯಿಗಳು) ನಗದು ಬಹುಮಾನವನ್ನು ಸ್ವೀಕರಿಸುತ್ತಾರೆ. 67ನೇ ರಾಮನ್ ಮ್ಯಾಗ್ಸೆಸೆ ಪ್ರಶಸ್ತಿ ಪ್ರದಾನ ಸಮಾರಂಭವು 2025ರ ನವೆಂಬರ್ 7ರಂದು ಫಿಲಿಪೈನ್ಸ್‌ನ ಮನಿಲಾದಲ್ಲಿ ನಡೆಯಲಿದೆ.

“‘Educate Girls’ಗೆ ರಾಮನ್ ಮ್ಯಾಗ್ಸೆಸೆ ಪ್ರಶಸ್ತಿಯು ಭಾರತಕ್ಕೆ ಐತಿಹಾಸಿಕ ಕ್ಷಣವಾಗಿದೆ. ಇದು ಒಂದು ಗ್ರಾಮದ ಒಬ್ಬ ಹೆಣ್ಣುಮಗುವಿನಿಂದ ಆರಂಭವಾದ ಜನರ ಚಳವಳಿಯ ಮೇಲೆ ಜಾಗತಿಕ ಗಮನವನ್ನು ಸೆಳೆದಿದೆ,” ಎಂದು ಸಂಸ್ಥೆಯ ಸ್ಥಾಪಕಿ ಸಫೀನಾ ಹುಸೇನ್ ಹೇಳಿದ್ದಾರೆ. “ಈ ಗೌರವವು ನಮ್ಮ ತಂಡದ ಸ್ವಯಂಸೇವಕರು, ಪಾಲುದಾರರು, ಲಿಂಗ ಸಮಾನತೆಯನ್ನು ಪ್ರೋತ್ಸಾಹಿಸಿದವರು ಮತ್ತು ಶಿಕ್ಷಣದ ಹಕ್ಕನ್ನು ಮರಳಿ ಪಡೆದ ಲಕ್ಷಾಂತರ ಹೆಣ್ಣುಮಕ್ಕಳಿಗೆ ಸಂದಿದೆ. ಮುಂದಿನ ದಶಕದಲ್ಲಿ 1 ಕೋಟಿ ಶಿಕ್ಷಾರ್ಥಿಗಳನ್ನು ತಲುಪುವ ಗುರಿಯೊಂದಿಗೆ, ಈ ಯೋಜನೆಯನ್ನು ಭಾರತದಾಚೆಗೂ ವಿಸ್ತರಿಸುವ ಗುರಿಯನ್ನು ನಾವು ಹೊಂದಿದ್ದೇವೆ. ಒಬ್ಬ ಹೆಣ್ಣುಮಗು ಶಿಕ್ಷಣ ಪಡೆದಾಗ, ಆಕೆ ಇತರರನ್ನೂ ಒಡಗೂಡಿಸುತ್ತಾಳೆ, ಕುಟುಂಬಗಳು, ಪೀಳಿಗೆಗಳು ಮತ್ತು ರಾಷ್ಟ್ರಗಳಾದ್ಯಂತ ಬದಲಾವಣೆಯನ್ನು ತರುತ್ತಾಳೆ,” ಎಂದು ಅವರು ಹೇಳಿದ್ದಾರೆ.

ಈದಿನ 1
ಈ ದಿನ ಡೆಸ್ಕ್
+ posts

ಈ ಮಾಧ್ಯಮ ನಿಮ್ಮದು. ನಿಮ್ಮ ಬೆಂಬಲವೇ ನಮ್ಮ ಬಲ. ವಂತಿಗೆ ನೀಡುವುದರ ಮೂಲಕ ಕೈಜೋಡಿಸಿ, ಸತ್ಯ ನ್ಯಾಯ ಪ್ರೀತಿಯ ಮೌಲ್ಯಗಳನ್ನು ಹಂಚಲು ಜೊತೆಯಾಗಿ. ಸಹಾಯ ಅಥವಾ ಬೆಂಬಲ ನೀಡಲು ದಯವಿಟ್ಟು +91 9035362958 ಅನ್ನು ಸಂಪರ್ಕಿಸಿ.

ಪೋಸ್ಟ್ ಹಂಚಿಕೊಳ್ಳಿ:

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಕರೂರ್ ದುರಂತ: 41 ಜನರ ಸಾವಿನ ನಂತರ ಟಿವಿಕೆ ರ‍್ಯಾಲಿ ತಾತ್ಕಾಲಿಕ ಸ್ಥಗಿತ

ತಮಿಳಗ ವೆಟ್ರಿ ಕಳಗಂ(ಟಿವಿಕೆ) ಪಕ್ಷದ ನಾಯಕ ವಿಜಯ್ ಅವರು ಬುಧವಾರ ತಮ್ಮ...

ಕೇಂದ್ರ ಸರ್ಕಾರಿ ಉದ್ಯೋಗಿಗಳಿಗೆ ಶೇ. 3 ರಷ್ಟು ತುಟ್ಟಿಭತ್ಯೆ ಹೆಚ್ಚಳ; ಸಚಿವ ಸಂಪುಟ ಅನುಮೋದನೆ

ಕೇಂದ್ರ ಸಂಪುಟ ಬುಧವಾರ ನಡೆದ ಸಭೆಯಲ್ಲಿ ಕೇಂದ್ರ ಸರ್ಕಾರದ ಉದ್ಯೋಗಿಗಳು ಮತ್ತು...

ಭಾರತದ ಅಗ್ರ ಕೋಟ್ಯಾಧಿಪತಿಗಳಲ್ಲಿ ಮಹಿಳೆಗೆ ಸ್ಥಾನ; ಅತೀ ಶ್ರೀಮಂತ ಮಹಿಳೆ ರೋಶ್ನಿ ಮಲ್ಹೋತ್ರಾ!

ಭಾರತದ ಬಿಲಿಯನೇರ್‌ಗಳ ಇತಿಹಾಸದಲ್ಲಿ ಐತಿಹಾಸಿಕ ಬೆಳವಣಿಗೆಯೊಂದು ನಡೆದಿದೆ. ಇದೇ ಮೊದಲ ಬಾರಿಗೆ...

NCRB report-2023 | ಹಲವು ಅಪರಾಧ ಕೃತ್ಯಗಳಲ್ಲಿ ಕರ್ನಾಟಕಕ್ಕೆ ಕುಖ್ಯಾತಿ

ಭಾರತದ ವಿವಿಧ ರಾಜ್ಯಗಳಲ್ಲಿ 2023ರಲ್ಲಿ ನಾನಾ ರೀತಿಯಲ್ಲಿ ನಡೆದಿರುವ ದಾಖಲಿತ ಅಪರಾಧ...

Download Eedina App Android / iOS

X