ತೈಲ ಮಾರುಕಟ್ಟೆ ಕಂಪನಿಗಳು ಸೆಪ್ಟೆಂಬರ್ 1, 2025ರಿಂದ ಜಾರಿಗೆ ಬರುವಂತೆ ವಾಣಿಜ್ಯ ಬಳಕೆಯ ಎಲ್ಪಿಜಿ ಗ್ಯಾಸ್ ಸಿಲಿಂಡರ್ಗಳ ಬೆಲೆಯನ್ನು ಇಳಿಕೆ ಮಾಡಿವೆ. 19 ಕೆಜಿ ವಾಣಿಜ್ಯ ಸಿಲಿಂಡರ್ ದರದಲ್ಲಿ 51.50 ರೂ. ಕಡಿತಗೊಳಿಸಲಾಗಿದೆ.
ಈ ಪರಿಷ್ಕೃತ ದರವು ರೆಸ್ಟೋರೆಂಟ್ಗಳು, ಹೋಟೆಲ್ಗಳು ಹಾಗೂ ಇತರ ವಾಣಿಜ್ಯ ಸಂಸ್ಥೆಗಳಿಗೆ ಅನುಕೂಲವಾಗಲಿದೆ. ಬೆಲೆ ಇಳಿಕೆಯ ನಂತರ ಬೆಂಗಳೂರಿನಲ್ಲಿ ವಾಣಿಜ್ಯ ಸಿಲಿಂಡರ್ನ ದರವು 1,653 ರೂ. ಆಗಿದ್ದರೆ, ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ 1,580 ರೂ. ಆಗಿದೆ.
ಬಹುತೇಕ ಜನರು ನಿರೀಕ್ಷಿಸಿದ್ದಂತೆ ಗೃಹಬಳಕೆ 14.2 ಕೆಜಿ ಎಲ್ಪಿಜಿ ಸಿಲಿಂಡರ್ಗಳ ದರದಲ್ಲಿ ಯಾವುದೇ ಬದಲಾವಣೆ ಆಗಿಲ್ಲ. ಈ ನಿರ್ಧಾರವು ಗೃಹಬಳಕೆದಾರರಿಗೆ ನಿರಾಸೆ ಮೂಡಿಸಿದೆ.
ಗಣೇಶ ಚತುರ್ಥಿಗೂ ಮೊದಲೇ ಅಂದರೆ ಆಗಸ್ಟ್ 1ರಂದು ಎಲ್ಪಿಜಿ ಸಿಲಿಂಡರ್ ಬೆಲೆಯಲ್ಲಿ ಭರ್ಜರಿ ಇಳಿಕೆಯಾಗಿತ್ತು. ಹಾಗೆಯೇ ಇದೀಗ ಸೆಪ್ಟೆಂಬರ್ ತಿಂಗಳ ಮೊದಲ ದಿನವೇ ದರ ಇಳಿಕೆಯಾಗಿದೆ. ಕರ್ನಾಟಕದ ಬೆಂಗಳೂರಿನಲ್ಲಿ ವಾಣಿಜ್ಯ ಬಳಕೆಯ ಎಲ್ಪಿಜಿ ಗ್ಯಾಸ್ ಸಿಲಿಂಡರ್ ದರ 51.50 ರೂಪಾಯಿ ಇಳಿಕೆಯೊಂದಿಗೆ 1,653 ರೂಪಾಯಿ ಆಗಿದೆ.
