ತಾನು ಪೊಲೀಸ್ ಅಧಿಕಾರಿಯಂತೆ ನಟಿಸಿ ನಕಲಿ ವಾಟ್ಸಾಪ್ ಖಾತೆಯ ಮೂಲಕ ಪೊಲೀಸರನ್ನೇ ವಂಚಿಸಲು ಯತ್ನಿಸಿದ ವಾಟ್ಸಾಪ್ ವಂಚಕ ಸಿಕ್ಕಿಬಿದ್ದಿದ್ದಾನೆ. ದಕ್ಷಿಣ ಕೇರಳ ಜಿಲ್ಲೆಯಲ್ಲಿ ಜಿಲ್ಲಾ ಪೊಲೀಸ್ ಮುಖ್ಯಸ್ಥರಂತೆ ನಟಿಸಿದ ಈ ವಂಚಕನ ಬಗ್ಗೆ ಪೊಲೀಸರು ತನಿಖೆ ಆರಂಭಿಸಿದ್ದಾರೆ ಎಂದು ಪೊಲೀಸ್ ಅಧಿಕಾರಿಯೊಬ್ಬರು ಸೋಮವಾರ ತಿಳಿಸಿದ್ದಾರೆ. ಕೊಲ್ಲಂ ಸೈಬರ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಕೊಲ್ಲಂ ಗ್ರಾಮೀಣ ಪೊಲೀಸರ ಹಲವಾರು ಅಧಿಕಾರಿಗಳಿಗೆ ಕಳೆದ ವಾರ +9779702927435 ಎಂಬ ವಾಟ್ಸಾಪ್ ಸಂಖ್ಯೆಯಿಂದ ಸಂದೇಶಗಳು ಬಂದಿವೆ. ಜಿಲ್ಲಾ ಪೊಲೀಸ್ ಮುಖ್ಯಸ್ಥ ವಿಶು ಪ್ರತೀಪ್ ಟಿಕೆ ಅವರ ಚಿತ್ರವನ್ನು ಪ್ರೊಫೈಲ್‌ನಲ್ಲಿ ಹೊಂದಿದ್ದ ವಾಟ್ಸಾಪ್ ಸಂಖ್ಯೆಯಿಂದ ಹಲವು ಪೊಲೀಸರಿಗೆ ಸಂದೇಶ ಬಂದಿದೆ ಎಂದು ಹೇಳಲಾಗಿದೆ.
ಇದನ್ನು ಓದಿದ್ದೀರಾ? ಸರ್ಕಾರಿ ಅಧಿಕಾರಿ ಸೋಗಿನಲ್ಲಿ ಮದುವೆ ನೆಪದಲ್ಲಿ 50 ಮಹಿಳೆಯರಿಗೆ ವಂಚನೆ; ಆರೋಪಿ ಬಂಧನ
“ಪೊಲೀಸ್ ಅಧಿಕಾರಿ ಎಂದು ಹೇಳಿಕೊಂಡು ಮೆಸೇಜ್ ಮಾಡಿದ ವಂಚಕನು ತುರ್ತಾಗಿ 40 ಸಾವಿರ ರೂಪಾಯಿ ವರ್ಗಾವಣೆ ಮಾಡುವಂತೆ ಕೇಳಿಕೊಂಡಿದ್ದಾನೆ. ರಾಜ್ಯಾದ್ಯಂತ ವರದಿಯಾದ ಇದೇ ರೀತಿಯ ಸೈಬರ್ ವಂಚನೆಗಳ ಬಗ್ಗೆ ತಿಳಿದಿದ್ದ ಅಧಿಕಾರಿಗಳು ತಕ್ಷಣ ಹಿರಿಯ ಅಧಿಕಾರಿಗಳಿಗೆ ಮಾಹಿತಿ ನೀಡಿದ್ದಾರೆ. ಯಾರೂ ಹಣ ಕಳೆದುಕೊಂಡಿಲ್ಲ” ಎಂದು ಪೊಲೀಸ್ ಅಧಿಕಾರಿ ಮಾಧ್ಯಮಗಳಿಗೆ ಮಾಹಿತಿ ನೀಡಿದ್ದಾರೆ.
ಪ್ರಾಥಮಿಕ ತನಿಖೆಯಲ್ಲಿ ವಂಚಕನು ನವದೆಹಲಿಯ ಸಾಂಗೇಟ್‌ನಲ್ಲಿರುವ ಬ್ಯಾಂಕ್ ಖಾತೆಗೆ ಹಣ ವರ್ಗಾವಣೆ ಮಾಡಲು ಕೇಳಿಕೊಂಡಿದ್ದಾನೆ. ಸದ್ಯ ಆತನ ಇತರೆ ವಂಚನೆಗಳ ಬಗ್ಗೆ ತನಿಖೆ ನಡೆಯುತ್ತಿದೆ. ಕೇರಳದಲ್ಲಿ ಇತ್ತೀಚೆಗೆ ಇದೇ ರೀತಿಯ ಹಲವು ವಂಚನೆಗಳು ನಡೆದಿದೆ. ವಂಚಕರು ಹಿರಿಯ ಪೊಲೀಸ್ ಅಧಿಕಾರಿಗಳು, ರಾಜಕಾರಣಿಗಳು ಅಥವಾ ಉದ್ಯಮಿಗಳಾಗಿ ನಟಿಸಿದ್ದಾರೆ.
