ಕೋಲಾರದಲ್ಲಿ ಭೀಮ ಪ್ರಜಾ ಸಂಘದ ಅಧ್ಯಕ್ಷ ವೈಟ್ ಫೀಲ್ಡ್ ಮುರುಗೇಶ್ ಮತ್ತು ಕೋಲಾರ ಜಿಲ್ಲಾ ಅಧ್ಯಕ್ಷ ಕಂಥೆಪುರ ಮಠ ಶಿವಾನಂದ ನೇತೃತ್ವದಲ್ಲಿ ಸಭೆ ನಡೆಸಿ ಭೀಮ ಪ್ರಜಾ ಸಂಘದ ಪದಾಧಿಕಾರಿಗಳ ಆಯ್ಕೆ ಮಾಡಲಾಯಿತು.
ಭೀಮ ಪ್ರಜಾ ಸಂಘ ಬಡವರ ಪರ ದ್ವನಿಯಾಗಿ ಕಾರ್ಯ ಮಾಡಿಕೊಂಡು ಬರುತ್ತಿದ್ದೇವೆ. ದೇಶದ ಅತಿ ಎತ್ತರ ಬಾಬಾ ಸಾಹೇಬರ ಪುತ್ಥಳಿ ನಿರ್ಮಾಣ ಮಾಡುತ್ತೇವೆ ಎಂದು ಹೇಳಿದ್ದು ರಾಜ್ಯದ ಹೆಮ್ಮೆಯ ಮುಖ್ಯಮಂತ್ರಿ ದಲಿತರಾಮಯ್ಯ ಅಂತ ಹೇಳುವ ಸಿದ್ದರಾಮಯ್ಯ ನವರು ಕೂಡಲೇ ಅದನ್ನು ಮಾಡಬೇಕು ಎಂದು ಆಗ್ರಹಿಸಲು ನವೆಂಬರ್ 3 ರಂದು ಕೋಲಾರದಿಂದ ಬೆಂಗಳೂರಿನ ಫ್ರೀಡಂ ಪಾರ್ಕ್ ವರೆಗೆ ಕಾಲ್ನಡಿಗೆ ಜಾಥಾ ಹಮ್ಮಿಕೊಂಡಿದ್ದೇವೆ. ಭೀಮ ಪ್ರಜಾ ಸಂಘದ ರಾಜ್ಯಾಧ್ಯಕ್ಷ ವೈಟ್ ಫೀಲ್ಡ್ ಮುರುಗೇಶ್ ತಿಳಿಸಿದರು.
ಕೋಲಾರ ಜಿಲ್ಲಾ ಭೀಮ ಪ್ರಜಾ ಸಂಘದ ಪದಾಧಿಕಾರಿಗಳಿಗೆ ಅಭಿನಂದಿಸಿ, ಎಲ್ಲರೂ ಬಡವರ, ದಲಿತರ ಪರ ಕೆಲಸ ಮಾಡ್ಬೇಕು, ಎಂದು ಜಿಲ್ಲಾಧ್ಯಕ್ಷ ಕಂಥೇಪುರ ಶಿವಾನಂದ ಹೇಳಿದರು.
ಭೀಮ ಪ್ರಜಾ ಸಂಘದ ಕೋಲಾರ ತಾಲೂಕು ಅಧ್ಯಕ್ಷರಾಗಿ ಗಂಗಾಧರ್. ಬಿ, ಬಂಗಾರಪೇಟೆ ಅಧ್ಯಕ್ಷರಾಗಿ ಹೆಚ್.ಎಂ.ಎನ್ ನಾರಯಣಪ್ಪ, ಉಪಾಧ್ಯಕ್ಷರಾಗಿ ಎಂ. ರಾಮಚಂದ್ರಪ, ಕೋಲಾರ ಜಿಲ್ಲಾ ಕಾರ್ಯದರ್ಶಿ ಶ್ರೀನಿವಾಸ್, ಕೆಜಿಎಫ್ ಅಧ್ಯಕ್ಷರಾದ ಓಬತ್ ಕುಮಾರ್,ಉಪಾಧ್ಯಕ್ಷ ಪ್ರಭಾಕರನ್, ಕೆಜಿಎಫ್ ಯುವ ಘಟಕದ ಅಧ್ಯಕ್ಷರಾದ ವಿಭಿಲ್ ಕುಮಾರ್, ಕೋಲಾರ ಜಿಲ್ಲಾ ಉಪಾಧ್ಯಕ್ಷರಾದ ನಂದಿನಿ ಅರಸು, ಬಂಗಾರಪೇಟೆ ಮೈನಾರಿಟಿ ಘಟಕದ ಅಧ್ಯಕ್ಷರಾಗಿ ಸೈಯದ್ ಪಾಷ ಇವರನ್ನು ಆಯ್ಕೆ ಮಾಡಲಾಗಿದೆ.
ಇದನ್ನೂ ಓದಿ: ಕೋಲಾರ | ಸಾರ್ವಜನಿಕ ಆಸ್ಪತ್ರೆಯಲ್ಲಿ ಔಷಧಿಗೆ ಹಣ ಕೇಳಿದರೆ ಕ್ರಮ: ಶಾಸಕ ಕೊತ್ತೂರು ಮಂಜುನಾಥ್
ಈ ಸಂದರ್ಭದಲ್ಲಿ ಭೀಮ ಪ್ರಜಾ ಸಂಘದ ಮುಖಂಡರು ಹಾಗೂ ಕಾರ್ಯಕರ್ತರು ಉಪಸ್ಥಿತರಿದ್ದರು.