ಊಟಕ್ಕೆಂದು ಡಾಭಾಕ್ಕೆ ಹೋಗಿದ್ದ ಇಬ್ಬರ ಪನೀರ್ ಖಾದ್ಯದಲ್ಲಿ ಸತ್ತ ಇಲಿ ಪತ್ತೆಯಾಗಿದ್ದು, ಸದ್ಯ ಸಾಮಾಜಿಕ ಜಾಲತಾಣದಲ್ಲಿ ವಿಡಿಯೋ ಹರಿದಾಡುತ್ತಿದೆ.
ಒಬ್ಬ ವ್ಯಕ್ತಿ ಪನೀರ್ ಖಾದ್ಯದಲ್ಲಿ ಬಿದ್ದಿದ್ದ ಎಲೆಯನ್ನು ಚಮಚದಿಂದ ಸರಿಸಿದಾಗ ಅದರಲ್ಲಿ ಸತ್ತ ಇಲಿ ಇರುವುದು ಕಂಡುಬಂದಿರುವುದು ವಿಡಿಯೋದಲ್ಲಿ ಕಾಣಬಹುದು.
ಇದನ್ನು ಓದಿದ್ದೀರಾ? ಬಿಹಾರ| ಕಾಲೇಜಿನ ಕ್ಯಾಂಟೀನ್ ಊಟದಲ್ಲಿ ಸತ್ತ ಹಾವು ಪತ್ತೆ
ಬಿಲ್ಸಿ ಪಟ್ಟಣದ ನಿವಾಸಿ ನಿಶಾಂತ್ ಮಹೇಶ್ವರಿ, ತನ್ನ ಸ್ನೇಹಿತ ಪುನೀತ್ ಜೊತೆ ಬಿಲ್ಸಿಯ ಅನ್ಮೋಲ್ ಢಾಬಾದಲ್ಲಿ ಹೋಗಿದ್ದಾಗ ಈ ಘಟನೆ ನಡೆದಿದೆ. ಢಾಬಾ ನಿರ್ವಾಹಕರಿಗೆ ದೂರು ನೀಡಿರುವ ನಿಶಾಂತ್ ಪೊಲೀಸರಿಗೆ ದೂರು ನೀಡುವುದಾಗಿ ಹೇಳಿದರು.
बदायूं जिले के बिल्सी में लव कुश सोमानी के मुस्कान ढाबे पर निशांत माहेश्वरी खाना खा रहे थे, इस दौरान सब्जी में मृत चूहा निकला, निशांत ने थाने में तहरीर देकर कार्रवाई कराने की मांग की है, जिले का खाद्य विभाग भ्रष्टाचार में पूरी तरह डूबा हुआ है, अधिकांश प्रतिष्ठानों से प्रति माह… pic.twitter.com/g60dErduGn
— Gautam Sandesh (@atgautamsandesh) August 31, 2025
ಇನ್ನು ಬಿಲ್ಸಿಯ ಉಪ-ವಿಭಾಗೀಯ ಮ್ಯಾಜಿಸ್ಟ್ರೇಟ್ (SDM) ಪ್ರೇಮ್ ಪಾಲ್ ಸಿಂಗ್ ಅವರೂ ವಿಡಿಯೋವನ್ನು ನೋಡಿರುವುದಾಗಿ, ಆದರೆ ಯಾವುದೇ ಲಿಖಿತ ದೂರು ಬಂದಿಲ್ಲ ಎಂದು ತಿಳಿಸಿದ್ದಾರೆ.
ಹಾಗೆಯೇ ವಿಡಿಯೋವನ್ನು ಪರಿಶೀಲಿಸಲಾಗುತ್ತಿದೆ. ಇತರ ಹೋಟೆಲ್‌ಗಳು ಮತ್ತು ರೆಸ್ಟೋರೆಂಟ್‌ಗಳಲ್ಲಿನ ಇತರ ಆಹಾರ ಪದಾರ್ಥಗಳನ್ನೂ ಪರೀಕ್ಷಿಸಲಾಗುವುದು ಎಂದು ಪ್ರೇಮ್ ಪಾಲ್ ಸಿಂಗ್ ಹೇಳಿದ್ದಾರೆ.
