ಗದಗ | 14ನೇ ದಿನಕ್ಕೆ ಕಾಲಿಟ್ಟ ರೈತರ ಧರಣಿ: ಕರುಣೆ ಇಲ್ಲದ ಸಚಿವರು, ರೈತರ ಬೇಡಿಕೆ ಈಡೇರಿಸುತ್ತಿಲ್ಲ: ರವಿಕಾಂತ ಅಂಗಡಿ ಕಿಡಿ

Date:

Advertisements

“ಸಚಿವರೇ ದಮ್ಮು ತಾಕತ್ತು, ಇದ್ರೆ ಈ ರೈತರಿಗೆ ನ್ಯಾಯಡಿಸಿ 14ನೇ ದಿನಕ್ಕೆ ಕಾಲಿಟ್ಟ ರೈತರ ಧರಣಿ, ರೈತರ ಬೇಡಿಕೆಗಳನ್ನು ಈಡೇರಿಸಲು ಮುಂದಾಗುತ್ತಿಲ್ಲ” ಎಂದು ಉತ್ತರ ಕರ್ನಾಟಕ ಮಹಾಸಭಾ ಹಕ್ಕು ಅರಣ್ಯ ಹೋರಾಟ ಸಮಿತಿ ರಾಜ್ಯಾಧ್ಯಕ್ಷ ರವಿಕಾಂತ ಅಂಗಡಿ ಆಕ್ರೋಶ ವ್ಯಕ್ತಪಡಿಸಿದರು.

ಗದಗ ಪಟ್ಟಣದ ಜಿಲ್ಲಾಡಳಿತ ಭವನದ ಎದುರಿಗೆ ಉತ್ತರ ಕರ್ನಾಟಕಮಹಾಸಭಾ ನೇತೃತ್ವದಲ್ಲಿ ಅರಣ್ಯ ಹಕ್ಕು ಹೋರಾಟ ಸಮಿತಿ, ಕಪ್ಪತ್ತಗುಡ್ಡ ಹೋರಾಟ ಸಮಿತಿ ಹಾಗೂ ಬಗರ್ ಹುಕುಂ ಸಾಗುವಳಿದಾರರ ಹೋರಾಟ ಸಮಿತಿ ಸಹಯೋಗದಲ್ಲಿ ರೈತರ ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ ಜಿಲ್ಲಾಡಳಿತ ಭವನದ ಎದುರಿಗೆ 14ನೇ ದಿನ ನಡೆದ ಧರಣಿಯಲ್ಲಿ ಮಾತನಾಡಿದರು.

“ಅರಣ್ಯ ಭೂಮಿಯಲ್ಲಿ ಉಳುಮೆ ಮಾಡುವ ರೈತರಿಗೆ, ವಾಸ ಮಾಡುವ ಮನೆಗಳಿಗೆ ಹಕ್ಕು ಪತ್ರ ಕೊಡಬೇಕು. ಈಗಾಗಲೇ ಎರಡು ಸಾವಿರ ಅರ್ಜಿಗಳನ್ನು ತಿರಸ್ಕರಿದವುಗಳನ್ನು ಪುನಃ ಪರಿಶೀಲನೆ ಮಾಡಿ ಅವರಿಗೆ ಹಕ್ಕು ಪತ್ರ ನೀಡಬೇಕೆಂದು ಬಹು ದಿನಗಳಿಂದ ಹಾಕ್ಕೋತ್ತಾಯ ಮಾಡುತ್ತಾ ಬಂದಿದ್ದೇವೆ” ಎಂದು ಹೇಳಿದರು.

“ಕಂದಾಯ ಭೂಮಿಯಲ್ಲಿ, ಹುಲ್ಲುಗವಾಲು ಭೂಮಿಯಲ್ಲಿ ಉಳುಮೆ ಮಾಡುವವರಿಗೆ, ಕಾಯ್ದೆ ಯ 53ನೇ ಅರ್ಜಿ ನಮೂನೆಯ ಹಾಕಿದ್ದು, ಸಕ್ರಮವೆಂದು ಘೋಷಣೆ ಮಾಡಬೇಕು. ಜೊತೆಗೆ ನಾಗಾವಿ ಗ್ರಾಮದಲ್ಲಿ ಆರ್.ಡಿ.ಪಿ.ಆರ್ ವಿಶ್ವವಿದ್ಯಾಲಯಕ್ಕೆ ಜಮೀನು ಕಳೆದುಕೊಂಡ ರೈತರಿಗೆ ಪರಿಹಾರ ಕೊಡಬೇಕು. ಅಥವಾ ಪರಿಹಾರ ರೂಪದಲ್ಲಿ ಪರ್ಯಾಯ ವ್ಯವಸ್ಥೆ ಮಾಡಬೇಕು. ಜೊತೆಗೆ ಗದಗ ಜಿಲ್ಲಾಧ್ಯಾಂತ ವ್ಯಾಪಕವಾಗಿ ವಿಂಡ್ ಫ್ಯಾನ್ ಕಂಪನಿಗಳು ಬಂದು ರೈತರನ್ನು ಒಕ್ಕಲೆಬ್ಬಿಸುತ್ತಿವೆ. ಒಂದೇ ರೀತಿಯಲ್ಲಿ ಪರಿಹಾರ, ಉದ್ಯೋಗ ಹೆಚ್ಚಿನ ಸೌಲಭ್ಯಗಳು ಸಿಗುವಂತೆ ಆಗಬೇಕು. ಇಲ್ಲದಿದ್ದರೆ ಕಂಪನಿಗಳು ಬಂದ್ ಮಾಡಬೇಕು” ಎಂದು ಒತ್ತಾಯಿಸಿದರು.

“ಕೆ. ಐ.ಡಬ್ಲೂ.ಡಿ ಕಾಯ್ದೆ ಅಡಿಯಲ್ಲಿ ವಶಪಡಿಸಿಕೊಂಡ ಜಮೀನುಗಳಿಗೆ ಹದಿನೈದು ವರ್ಷಗಳಿಂದ ಯಾವುದೇ ಪರಿಹಾರ ಕೊಟ್ಟಿಲ್ಲ. ಈಗಾಗಲೇ ರೈತ ಹೋರಾಟದಲ್ಲಿ ಹುತಾತ್ಮರಾದ ರೈತರಿಗೆ ಸ್ಮಾರಕ ಭವನ ನಿರ್ಮಾಣ ಮಾಡಬೇಕು. ಕಪ್ಪತಗುಡ್ಡದಲ್ಲಿ ಹತ್ತು ಕಿ.ಲೋ ಮೀಟರ್ ಗಣಿಗಾರಿಕೆ ಒಂದು ಕಿ.ಲೋ ಮೀಟರ್ ತಂದಿದ್ದು ಕೈಬಿಡಬೇಕು. ಯಾವುದೇ ಕಾರಣಕ್ಕೂ ರೈತರನ್ನು ಒಕ್ಕಲೆಬ್ಬಿಸಬಾರದು. ಅರಣ್ಯ ಅಧಿಕಾರಿಗಳು ಕಿರಿ ಕಿರಿ ನೀಡಬಾರದು” ಎಂದು ಒತ್ತಾಯಿಸಿದರು.

IMG 20250901 121830 copy 800x449 1

“ಎಸಿ ನೇತೃತ್ವದ ಸಮಿತಿ ರಚನೆ ಮಾಡಿತ್ತು. ಬಗರ್ ಹುಕುಂದಾರರಿಗೆ ಅರಣ್ಯಖೆಯಿಂದ ಹಕ್ಕು ಪತ್ರ ನೀಡಬೇಕು. ಅಪರ ಜಿಲ್ಲಾಧಿಕಾರಿ ನೇತೃತ್ವದಲ್ಲಿ ನಾಗಾವಿ ರೈತರಿಗೆ ಪರಿಹಾರ ಒದಗಿಸುವ ನಿಟ್ಟಿನಲ್ಲಿ ಕೆಲಸ ಮಾಡಬೇಕು. ಜಿಲ್ಲಾಧಿಕಾರಿ ಹಾಗೂ ಸಚಿವರು ಹಿಂದೆ ಭರವಸೆಯನ್ನು ಲಿಖಿತ ರೂಪದಲ್ಲಿ ಕೊಟ್ಟಿದ್ದರು. ಆದರೆ ಯಾವುದೇ ರೀತಿಯಿಂದ ಕೆಲಸ ಆಗಿಲ್ಲ. ಜೊತೆಗೆ ಅರಣ್ಯ ಇಲಾಖೆಯಿಂದ ಹೊಸ ಅರ್ಜಿಗಳನ್ನು ನಿಲ್ಲಿಸಿದ್ದರು. ಯಾರು ಉಳಿಮೆ, ಮಾಡಿಕೊಂಡಿದ್ದಾರೆ ಅವರಿಗೆ ಹೊಸ ಅರ್ಜಿ ತೆಗೆದುಕೊಳ್ಳಬೇಕು” ಎಂದು ಒತ್ತಾಯಿಸಿದರು.

“ಜಿಲ್ಲಾಧಿಕಾರಿ ಬಂದು ಕೆಲವು ಬೇಡಿಕೆಗಳನ್ನು ಈಡೇರಿಸುತ್ತೇವೆ. ಕೆಲವು ಬೇಡಿಕೆಗಳು ಕೋರ್ಟ್ ಮೂಲಕ ಈಡೇರಿಸಿಕೊಳ್ಳಬೇಕು’ ಎಂಬ ಮಾತಿಗೆ ಒಪ್ಪಲಾರದೆ ಧರಣಿಯನ್ನು ಮುಂದುವರೆಸಿದ್ದೇವೆ” ಎಂದು ಹೇಳಿದರು.

ಈ ಸುದ್ದಿ ಓದಿದ್ದೀರಾ? ಗದಗ | ಕೈಗೆ ಬಂದ ತುತ್ತು ಕಸಿದ ಮಳೆ; ಸಂಕಷ್ಟದಲ್ಲಿ ಹೆಸರು ಬೆಳೆದ ರೈತರ ಬದುಕು

ಧರಣಿಯಲ್ಲಿ ಬಸವಣ್ಣೆಪ್ಪ ಚಿಂಚಲಿ, ಶ್ರೀನಿವಾಸ್ ಹಡಪದ, ನಾಮದೇವ ಮಾಂಡ್ರೆ, ಶಂಬಣ್ಣ ಬೆಂತೂರು, ಸುರೇಶ್ ಮಹಾರಾಜ್, ಈರಣ್ಣ ಚವ್ಹಾಣ, ಎಫ್ ಕೆ. ನದಾಫ್, ಕಲಾವಿದ ಈರಣ್ಣ ಹೂಗಾರ್, ರಮೇಶ ಲಮಾಣಿ, ಚಿನ್ನಪ್ಪ ಲಮಾಣಿ, ಶಾಂತವ್ವ ಮರಾಠೆ, ಭರಮವ್ವ ಬಸಾಪುರ ಜಿಲ್ಲೆಯ ವಿವಿಧ ತಾಲ್ಲೂಕು ರೈತ ಮಹಿಳೆಯರು ನೂರಾರು ರೈತರು ಧರಣಿಯಲ್ಲಿ ಪಾಲ್ಗೊಂಡಿದ್ದರು.

eedina
ಈ ದಿನ ಡೆಸ್ಕ್‌
Website |  + posts

ಈ ಮಾಧ್ಯಮ ನಿಮ್ಮದು. ನಿಮ್ಮ ಬೆಂಬಲವೇ ನಮ್ಮ ಬಲ. ವಂತಿಗೆ ನೀಡುವುದರ ಮೂಲಕ ಕೈಜೋಡಿಸಿ, ಸತ್ಯ ನ್ಯಾಯ ಪ್ರೀತಿಯ ಮೌಲ್ಯಗಳನ್ನು ಹಂಚಲು ಜೊತೆಯಾಗಿ. ಸಹಾಯ ಅಥವಾ ಬೆಂಬಲ ನೀಡಲು ದಯವಿಟ್ಟು +91 9035362958 ಅನ್ನು ಸಂಪರ್ಕಿಸಿ.

ಪೋಸ್ಟ್ ಹಂಚಿಕೊಳ್ಳಿ:

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಕೊಪ್ಪಳ | ಪ್ರವಾದಿ ಮಹಮ್ಮದ್‌ ಸಂದೇಶವನ್ನು ನಾವು ಪಾಲನೆ ಮಾಡಬೇಕು: ಲಾಲ್ ಹುಸೇನ್ ಕಂದ್ಗಲ್

'ಖುರಾನ್' ಬರುವ ಪ್ರವಾದಿ ಮಹಮ್ಮದ್‌ ಅವರು ಹೇಳಿದ ಸತ್ಯವನ್ನೇ ಭಾರತೀಯ ಪುರಾಣಗಳು...

ಶಿವಮೊಗ್ಗದ ಸಂಚಾರ ವ್ಯವಸ್ಥೆಯಲ್ಲಿ ಅರಾಜಕತೆ: ಅಧಿಕಾರಿಗಳ ನಿರ್ಲಕ್ಷ್ಯಕ್ಕೆ ನಾಗರಿಕರು ಹೈರಾಣು

ಒಮ್ಮೆ ಶಾಂತ, ಶಿಕ್ಷಣ ಹಾಗೂ ಸಂಸ್ಕೃತಿಯ ತಾಣವಾಗಿದ್ದ ಶಿವಮೊಗ್ಗ ನಗರ ಇತ್ತೀಚಿನ...

ತುಮಕೂರು | ಗಾಂಧೀ ತತ್ವಗಳಿಗೆ ವಿಶ್ವ ಮನ್ನಣೆ : ಡಾ. ಜಿ.ಪರಮೇಶ್ವರ

ರಾಷ್ಟ್ರಪಿತ ಮಹಾತ್ಮ ಗಾಂಧೀಜಿಯವರ ಅಹಿಂಸಾ ತತ್ವಗಳಿಗೆ ಇಡೀ ವಿಶ್ವದಲ್ಲಿಯೇ ಮನ್ನಣೆ ದೊರೆತಿದೆ...

ಶಿವಮೊಗ್ಗ | ಸತ್ಯ – ಅಹಿಂಸೆ ಪ್ರಬಲ ಅಸ್ತ್ರಗಳು : ಡಾ. ಟಿ. ಅವಿನಾಶ್

ಶಿವಮೊಗ್ಗ, ಭಾರತ ದೇಶಕ್ಕೆ ಸ್ವಾತಂತ್ರ್ಯವನ್ನು ತಂದುಕೊಡಲು ಮಹಾತ್ಮ ಗಾಂಧೀಜಿಯವರು ಬಳಸಿದ ಅಸ್ತ್ರಗಳೆಂದರೆ...

Download Eedina App Android / iOS

X