ಶಿಡ್ಲಘಟ್ಟ | ಏನಿಗಿದಲೆ ಹಾಲು ಉತ್ಪಾದಕರ ಸಹಕಾರ ಸಂಘದ ನೂತನ ಕಟ್ಟಡ ಉದ್ಘಾಟನೆ

Date:

Advertisements

ಗ್ರಾಮೀಣ ಭಾಗದಲ್ಲಿ ಹೈನುಗಾರಿಕೆಯನ್ನು ನಂಬಿಕೊಂಡು ಜೀವನ ಮಾಡುತ್ತಿರುವ ಹಾಲು ಉತ್ಪಾದಕ ರೈತರು ಇಂದು ಸಂಕಷ್ಟದಲ್ಲಿದ್ದು, ಹಾಲು ಉತ್ಪಾದನೆ ದರಕ್ಕೂ ಹಾಗೂ ಒಕ್ಕೂಟ ಕೊಡುತ್ತಿರುವ ದರದಿಂದ ಹಾಲು ಉತ್ಪಾದಕ ರೈತರು ಬಹಳಷ್ಟು ತೊಂದರೆ ಅನುಭವಿಸುತ್ತಿದ್ದು, ಸರ್ಕಾರ ಕೂಡಲೇ ರೈತರಿಗೆ ₹10 ಪ್ರೋತ್ಸಾಹ ಧನವನ್ನು ನೀಡಬೇ‌ಕು ಎಂದು ಶಿಡ್ಲಘಟ್ಟ ಶಾಸಕ ಬಿ ಎನ್ ರವಿಕುಮಾರ್ ಸರ್ಕಾರವನ್ನು ಒತ್ತಾಯಿಸಿದರು.

ಚಿಕ್ಕಬಳ್ಳಾಪುರ ಜಿಲ್ಲೆಯ ಚೇಳೂರು ತಾಲೂಕು ಶಿಡ್ಲಘಟ್ಟ ವಿಧಾನಸಭಾ ಕ್ಷೇತ್ರಕ್ಕೆ ಒಳಪಡುವ ಏನಿಗಿದಲೆ ಗ್ರಾಮದ ಹಾಲು ಉತ್ಪಾದಕರ ಸಹಕಾರ ಸಂಘದಿಂದ ನೂತನವಾಗಿ ನಿರ್ಮಾಣ ಮಾಡಿರುವ ಸಂಘದ ನೂತನ ಕಟ್ಟಡವನ್ನು ಉದ್ಘಾಟನೆ ಮಾಡಿ ಮಾತನಾಡಿದರು.

“ಇತ್ತೀಚಿನ ದಿನಗಳಲ್ಲಿ ಹಾಲು ಉತ್ಪಾದಕ ರೈತರಿಗೆ ಉತ್ತಮವಾದ ದರ ಸಿಗದೇ ಬಹಳಷ್ಟು ತೊಂದರೆಗಳನ್ನು ಅನುಭವಿಸುತ್ತಿದ್ದಾರೆ. ತಾನೂ ಕೂಡ ಒಬ್ಬ ಹಾಲು ಉತ್ಪಾದಕ ರೈತನಾಗಿದ್ದು, ಸರ್ಕಾರ ನೀಡುತ್ತಿರುವ ₹5 ಪ್ರೋತ್ಸಾಹ ಧನ ರೈತರಿಗೆ ಸಾಕಾಗುತ್ತಿಲ್ಲ.‌ ಈ ಬಗ್ಗೆ ತಾನೂ ಮುಖ್ಯಮಂತ್ರಿ ಹಾಗೂ ಸಂಬಂಧಪಟ್ಟ ಸಚಿವರ ಬಳಿ ಈಗಾಗಲೇ ಹಲವಾರು ಬಾರಿ ಮಾತನಾಡಿ, ₹10 ಪ್ರೋತ್ಸಾಹ ಧನವನ್ನು ನೀಡುವಂತೆ ಮನವಿ ಮಾಡಿದ್ದೇನೆ. ಹಾಲು ಉತ್ಪಾದಕರ ರೈತರು ಆರ್ಥಿಕವಾಗಿ ಅಭಿವೃದ್ಧಿ ಹೊಂದಬೇಕಾದರೆ ಸರ್ಕಾರ‌ ಕೂಡಲೇ ಪ್ರೋತ್ಸಾಹ ಧನವನ್ನು ನೀಡಲು ಮುಂದಾಗಬೇಕೆಂದು, ಹಾಲು ಉತ್ಪಾದಕರ ಸಹಕಾರ ಸಂಘದ ನೂತನ ಮಳಿಗೆಗಳನ್ನು ಕಟ್ಟಲು ಸಹಕರಿಸಿದ ಎಲ್ಲರಿಗೂ ಅಭಿನಂದನೆಗಳು” ಎಂದು ಕೃತಜ್ಞತೆ ಸಲ್ಲಿಸಿದ ಅವರು ಸಂಘದ ಅಭಿವೃದ್ದಿಗೆ ತಮ್ಮ ವೈಯಕ್ತಿಕವಾದ ಹಣದ ₹2 ಲಕ್ಷ ಚೆಕ್ ನೀಡಿ ಸಂಘಕ್ಕೆ ಶುಭ ಹಾರೈಸಿದರು.

ಕೊಚಿಮುಲ್ ಮಾಜಿ ನಿರ್ದೇಶಕ ಊಲವಾಡಿ ಆಶ್ವಥನಾರಾಯಣ ಬಾಬು ಮಾತನಾಡಿ, “ಏನಿಗಿದಲೆ ಹಾಲು ಉತ್ಪಾದಕರ ಸಹಕಾರ ಸಂಘದ ನೂತನ ಕಟ್ಟಡ ಮಳಿಗೆಗಳ ನಿರ್ಮಾಣಕ್ಕೆ ಕೊಚಿಮುಲ್ ಹಾಗೂ ಒಕ್ಕೂಟದಿಂದ ₹7.50 ಲಕ್ಷ ಆರ್ಥಿಕ ಸಹಾಯ ನೀಡಿದ್ದು, ತಮ್ಮ ಅಧಿಕಾರಾವಧಿಯಲ್ಲಿ ಏನೆಲ್ಲಾ ಮಾಡಿದ್ದೇವೆ ಎಂಬುದು ಬಹಳ ಮುಖ್ಯವಾಗಿದ್ದು, ತಾನೂ ಕೂಡ ಪಕ್ಷಾತೀತವಾಗಿ ಎಲ್ಲ ಹಾಲು ಉತ್ಪಾದಕರ ಸಹಕಾರ ಸಂಘಗಳ ಅಭಿವೃದ್ಧಿಗೆ ಪ್ರಮಾಣಿಕವಾಗಿ ಸಹಕಾರ ಹಾಗೂ ಪ್ರೋತ್ಸಾಹ ನೀಡಿದ್ದೆನೆ” ಎಂದು ಹೇಳಿದರು.

“ಏನಿಗಿದಲೆ ಗ್ರಾಮದಲ್ಲಿ ಬಿಎಂಸಿ ಕೇಂದ್ರ ಸ್ಥಾಪಿಸಲು ಮುಂದಿನ ದಿನಗಳಲ್ಲಿ ಕ್ರಮ ಕೈಗೊಳ್ಳಲಾಗುವುದು. ಹಲವಾರು ವರ್ಷಗಳ ಹಿಂದೆ ಈ ಭಾಗದಲ್ಲಿನ ಪಾಪಾಗ್ನಿ ನದಿ ಸದಾಕಾಲ ತುಂಬಿ ಹರಿಯುತಿತ್ತು. ಇಂದು ಆ ನಾಲೆ ನದಿಯೆಲ್ಲ ಬತ್ತಿಹೋಗಿದ್ದು, ಸಚಿವ ಡಾ. ಎಂ ಸಿ ಸುಧಾಕರ್ ಅವರು ಈ ಭಾಗದ ಜನರಿಗೆ ಕುಡಿಯಲು ಶುದ್ದ ಕುಡಿಯುವ ನೀರು ಕೋಡಬೇಕು, ರೈತರು ತಮ್ಮ ಜಮೀನಿಗಳಲ್ಲಿ ಸಾಗುವಳಿ ಮಾಡಲು ಶಾಶ್ವತವಾದ ನೀರಾವರಿಯನ್ನು ಕೋಡಬೇಕೆಂಬ ಕನಸನ್ನು ಹೊಂದಿದ್ದರು. ಆದರೆ ಹತ್ತು ವರ್ಷಗಳ ಕಾಲ ಅವರು ಅಧಿಕಾರ ಕಳೆದುಕೊಂಡ ಮೇಲೆ ಅವರ ಕನಸೆಲ್ಲ ನುಚ್ಚುನೂರಾಗಿದ್ದು, ಇದೀಗ ಅವರ ಆಸೆ ಮತ್ತೆ ಈಡೇರುವಕಾಲ ಬಂದಿದೆ. ವಿಶೇಷವಾಗಿ ಈ ಭಾಗ ಹಾಗೂ ಬಯಲು ಸೀಮೆ ಪ್ರದೇಶಗಳಿಗೆ ಕೆಸಿ ವ್ಯಾಲಿ ಹಾಗೂ ಹೆಚ್ ಎನ್ ವ್ಯಾಲಿ ನೀರಿನ ಜತೆಗೆ ಎತ್ತಿನಹೊಳೆ ಯೋಜನೆಯ ನೀರನ್ನು ತರಲು ಸಾಕಷ್ಟು ಶ್ರಮಪಡುತ್ತಿದ್ದು, ಎತ್ತಿನ ಹೊಳೆ ನೀರು ಈ ಭಾಗಕ್ಕೆ ಬಂದರೆ ಈ ಭಾಗದಲ್ಲಿನ ರೈತರು ಹಾಗೂ ಹಾಲು ಉತ್ಪಾದಕರ ರೈತರ ಬಾಳು ಬಂಗಾರವಾಗಲಿದೆ. ಈ ಭಾಗದ ಜನ ಸದಾಕಾಲ ಸಚಿವ ಡಾ.ಎಂ ಸಿ ಸುಧಾಕರ್ ಅವರಿಗೆ ಬೆಂಬಲವಾಗಿ ನಿಲ್ಲಬೇಕು” ಎಂದರು.

ಈ ಸುದ್ದಿ ಓದಿದ್ದೀರಾ? ಕೋಲಾರ | ಹೈನುಗಾರಿಕೆ ಗ್ರಾಮೀಣ ಜನರ ಬದುಕಿಗೆ ಆಸರೆ: ಚೆಲುವನಹಳ್ಳಿ ನಾಗರಾಜ್

ಏನಿಗಿದಲೇ ಹಾಲು ಉತ್ಪಾದಕರ ಸಹಕಾರ ಸಂಘದ ಅಧ್ಯಕ್ಷ ಸಿ ರಾಮರೆಡ್ಡಿ, ಚಿಕ್ಕಬಳ್ಳಾಪುರ ಹಾಲು ಒಕ್ಕೂಟದ ವ್ಯವಸ್ಥಾಪಕ ಎಂ ಶ್ರೀನಿವಾಸರೆಡ್ಡಿ, ಚಿಂತಾಮಣಿ ಶಿಬಿರ ಕಚೇರಿಯ ಉಪ ವ್ಯವಸ್ಥಾಪಕ ಡಾ. ಮಹೇಶ್ ಡಿ ಎಂ, ಏನಿಗಿದಲೆ ಗ್ರಾಮ ಪಂಚಾಯಿತಿ ಅಧ್ಯಕ್ಷೆ ಶಿವಮ್ಮ, ಹಾಲು ಉತ್ಪಾದಕರ ಸಹಕಾರ ಸಂಘದ ಎಲ್ಲ ನಿರ್ದೇಶಕರು ಸೇರಿದಂತೆ ಇತರರು ಇದ್ದರು.

eedina
ಈ ದಿನ ಡೆಸ್ಕ್‌
Website |  + posts

ಈ ಮಾಧ್ಯಮ ನಿಮ್ಮದು. ನಿಮ್ಮ ಬೆಂಬಲವೇ ನಮ್ಮ ಬಲ. ವಂತಿಗೆ ನೀಡುವುದರ ಮೂಲಕ ಕೈಜೋಡಿಸಿ, ಸತ್ಯ ನ್ಯಾಯ ಪ್ರೀತಿಯ ಮೌಲ್ಯಗಳನ್ನು ಹಂಚಲು ಜೊತೆಯಾಗಿ. ಸಹಾಯ ಅಥವಾ ಬೆಂಬಲ ನೀಡಲು ದಯವಿಟ್ಟು +91 9035362958 ಅನ್ನು ಸಂಪರ್ಕಿಸಿ.

ಪೋಸ್ಟ್ ಹಂಚಿಕೊಳ್ಳಿ:

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಶಿವಮೊಗ್ಗ | ಪಾಲಿಕೆಗೆ 19 ಗ್ರಾಮಗಳ ಸೇರ್ಪಡೆಗೆ ಸಿದ್ಧತೆ

ಶಿವಮೊಗ್ಗ, ನಿರೀಕ್ಷೆಯಂತೆಯೇ ತುಮಕೂರು ಮತ್ತು ಶಿವಮೊಗ್ಗ ನಗರ ಪಾಲಿಕೆಗಳ ವ್ಯಾಪ್ತಿ ವಿಸ್ತರಣೆಗೆ...

ಶಿವಮೊಗ್ಗ | ಅಂಬೇಡ್ಕರ್ ಓದು ; ಭಾರತವನ್ನು ಅರಿಯುವ ದಾರಿ : ಕೋಟಿಗಾನಹಳ್ಳಿ ರಾಮಯ್ಯ ಅಭಿಪ್ರಾಯ

ಶಿವಮೊಗ್ಗ ಮಾನವತಾವಾದಿ ಅಂಬೇಡ್ಕರ್ ಅವರನ್ನು ಓದುವುದು ಎಂದರೆ ಭಾರತವನ್ನು ನೈಜವಾಗಿ ಅರಿಯುವುದು,...

ಬಿಜೆಪಿಯ ಆತ್ಮವಂಚನೆ ಪ್ರತಿಭಟನೆಗಳು ಕಲಬುರಗಿಗೆ ಅಗತ್ಯವಿಲ್ಲ: ಸಚಿವ ಪ್ರಿಯಾಂಕ್ ಖರ್ಗೆ

ಅಧಿಕಾರದಲ್ಲಿದ್ದಾಗ ಕಲಬುರಗಿ ಜಿಲ್ಲೆಯ ರೈತರಿಗೆ ದ್ರೋಹವೆಸಗಿದ್ದ ಬಿಜೆಪಿ ಈಗ ಪ್ರತಿಭಟನೆಯ ನಾಟಕ...

Download Eedina App Android / iOS

X