ಧಾರವಾಡ | ಕೃಷಿಯನ್ನು ಲಾಭದಾಯಕ ಉದ್ಯಮವನ್ನಾಗಿ ರೂಪಿಸಿಕೊಳ್ಳಬಹುದು: ಎಸ್ ಮಳಿಮಠ

Date:

Advertisements

ಕೃಷಿ ತರಬೇತಿಯ ಮೂಲಕ ರೈತರು ಕೃಷಿಯನ್ನು ಕೇವಲ ಜೀವನೋಪಾಯವಲ್ಲದೆ, ಸರಿಯಾದ ಜ್ಞಾನ, ಯೋಜನೆ ಮತ್ತು ತಂತ್ರಜ್ಞಾನ ಬಳಸಿ ಅತ್ಯಂತ ಲಾಭದಾಯಕ ಉದ್ಯಮವಾಗಿ ರೂಪಿಸಿಕೊಳ್ಳಬಹುದು ಎಂದು ಧಾರವಾಡ ಜಿಲ್ಲಾ ಕೃಷಿ ತರಬೇತಿ ಕೇಂದ್ರದ ಸಹಾಯಕ ಕೃಷಿ ನಿರ್ದೇಶಕಿ ಎಸ್ ಮಳಿಮಠ ಹೇಳಿದರು.

ಧಾರವಾಡ ಜಿಲ್ಲೆಯ ರೈತರಿಗೆ ಜಿಲ್ಲಾ ಕೃಷಿ ತರಬೇತಿ ಕೇಂದ್ರದಿಂದ ಆಯೋಜಿಸಿದ್ದ ಮೂರು ದಿನಗಳ ತರಬೇತಿ ಕಾರ್ಯಕ್ರಮದಲ್ಲಿ ಮಾತನಾಡಿದರು.

“ವೈಜ್ಞಾನಿಕ ಕೃಷಿ ಪದ್ಧತಿ(ಮಣ್ಣಿನಪರೀಕ್ಷೆ, ಡ್ರಿಪ್, ಸ್ಪ್ರಿಂಕ್ಲತ್‌ ತಂತ್ರಜ್ಞಾನ), ವೈವಿಧ್ಯಮಯ ಬೆಳೆಗಾರಿಕೆ(ಹಣ್ಣು, ತರಕಾರಿ, ಮಸಾಲೆ, ಹೂಗಳು, ಔಷಧಿಗಿಡಗಳು, ಪಶುಪಾಲನೆ ಹಾಗೂ ಕೃಷಿಪೂರಕ ಉದ್ಯಮಗಳು(ಹಾಲು, ಜೇನು, ಕೋಳಿ, ಮತ್ಸ್ಯ ಸಾಕಾಣಿಕೆ), ಸೇರ್ಪಡೆ ಮೌಲ್ಯ ಮೂಲಕ ಹೆಚ್ಚುವರಿ ಆದಾಯ, ರೈತರಿಂದ ನೇರವಾಗಿ ಗ್ರಾಹಕರಿಗೆ ಮಾರಾಟ, ಸಾವಯವ ಕೃಷಿಯ ಮಹತ್ವ, ಸರ್ಕಾರಿ ಯೋಜನೆಗಳ ಸದುಪಯೋಗ, ಕೃಷಿ ಉಪಕರಣ ಸಹಾಯಧನ ಮುಂತಾದವು). ಹೀಗೆ ಕೃಷಿ ಲಾಭದಾಯಕ ಉದ್ಯಮವಾಗಿದೆ” ಎಂದರು.

ಈ ಸುದ್ದಿ ಓದಿದ್ದೀರಾ? ಶಿಡ್ಲಘಟ್ಟ | ಏನಿಗಿದಲೆ ಹಾಲು ಉತ್ಪಾದಕರ ಸಹಕಾರ ಸಂಘದ ನೂತನ ಕಟ್ಟಡ ಉದ್ಘಾಟನೆ

ಕಾರ್ಯಕ್ರಮದಲ್ಲಿ ಡಾ.ಸಂತೋಷ ಒಂಟಿ ಅವರು ವೈಜ್ಞಾನಿಕ ಕೃಷಿ ಪದ್ಧತಿ, ಇಂದುಧರ ಹಿರೇಮಠ- ಸಮಗ್ರ ಕೃಷಿ ಪದ್ಧತಿ ಮತ್ತು ಮಣ್ಣು ಆರೋಗ್ಯ, ಡಾ. ಎಸ್ ಎ ಬಿರಾದಾರ್ ಅವರು ಸಾವಯವ ಕೃಷಿ ಮತ್ತು ಮಾರುಕಟ್ಟೆ ತಂತ್ರಜ್ಞಾನ, ಎಮ್ ವಿ ಪಾಟೀಲ್ ಅವರು ಸಾವಯವ ಕೃಷಿ ಅಳವಡಿಸಿ ಯಶಸ್ಸು ಕಂಡ ರೈತರ ಅನುಭವ ಹಂಚಿಕೆ, ಡಾ. ಐರಾದೇವಿ ಅಂಗಡಿ ಅವರು ಅಣಬೆ ಕೃಷಿ ಮತ್ತು ಜಗದೀಶ ಬಾಳಿಕಾಯಿ ಅವರು ಜೇನು ಕೃಷಿ, ಡಾ. ಪ್ರಕಾಶ ಅವರು ಜೈವಿಕ ವಿಧಾನದಿಂದ ಕೀಟ ನಿರ್ವಹಣೆ, ಆರ್ ಬಿ ಹಿರೇಮಠ ಅವರು ವೈವಿಧ್ಯಮಯ ಬೆಳೆಗಾರಿಕೆ ಕುರಿತು ಮತ್ತು ಸರ್ಕಾರಿ ಯೋಜನೆಗಳ ಸದುಪಯೋಗ ಕುರಿತು ಉಪನ್ಯಾಸ ನೀಡಿದರು.

eedina
ಈ ದಿನ ಡೆಸ್ಕ್‌
Website |  + posts

ಈ ಮಾಧ್ಯಮ ನಿಮ್ಮದು. ನಿಮ್ಮ ಬೆಂಬಲವೇ ನಮ್ಮ ಬಲ. ವಂತಿಗೆ ನೀಡುವುದರ ಮೂಲಕ ಕೈಜೋಡಿಸಿ, ಸತ್ಯ ನ್ಯಾಯ ಪ್ರೀತಿಯ ಮೌಲ್ಯಗಳನ್ನು ಹಂಚಲು ಜೊತೆಯಾಗಿ. ಸಹಾಯ ಅಥವಾ ಬೆಂಬಲ ನೀಡಲು ದಯವಿಟ್ಟು +91 9035362958 ಅನ್ನು ಸಂಪರ್ಕಿಸಿ.

ಪೋಸ್ಟ್ ಹಂಚಿಕೊಳ್ಳಿ:

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಶಿವಮೊಗ್ಗ | ಅಂಬೇಡ್ಕರ್ ಓದು ; ಭಾರತವನ್ನು ಅರಿಯುವ ದಾರಿ : ಕೋಟಿಗಾನಹಳ್ಳಿ ರಾಮಯ್ಯ ಅಭಿಪ್ರಾಯ

ಶಿವಮೊಗ್ಗ ಮಾನವತಾವಾದಿ ಅಂಬೇಡ್ಕರ್ ಅವರನ್ನು ಓದುವುದು ಎಂದರೆ ಭಾರತವನ್ನು ನೈಜವಾಗಿ ಅರಿಯುವುದು,...

ಬಿಜೆಪಿಯ ಆತ್ಮವಂಚನೆ ಪ್ರತಿಭಟನೆಗಳು ಕಲಬುರಗಿಗೆ ಅಗತ್ಯವಿಲ್ಲ: ಸಚಿವ ಪ್ರಿಯಾಂಕ್ ಖರ್ಗೆ

ಅಧಿಕಾರದಲ್ಲಿದ್ದಾಗ ಕಲಬುರಗಿ ಜಿಲ್ಲೆಯ ರೈತರಿಗೆ ದ್ರೋಹವೆಸಗಿದ್ದ ಬಿಜೆಪಿ ಈಗ ಪ್ರತಿಭಟನೆಯ ನಾಟಕ...

ಧಾರವಾಡ | ಹಿಂದುಳಿದ ವರ್ಗಗಳ ಸಮೀಕ್ಷೆ; ಸಬ್‌ಜೈಲ್ ಸುತ್ತ ಪ್ರದೇಶಗಳಲ್ಲಿ ನೆಟವರ್ಕ್ ಸಮಸ್ಯೆ

ಧಾರವಾಡ ಜಿಲ್ಲೆಯಲ್ಲಿ ಹಿಂದುಳಿದ ವರ್ಗಗಳ ಸಾಮಾಜಿಕ ಮತ್ತು ಶೈಕ್ಷಣಿಕ ಸಮೀಕ್ಷೆ ಪ್ರಗತಿಯಲ್ಲಿದ್ದು,...

ವಿಜಯಪುರ | ಪರಿಸರ ಸಂರಕ್ಷಣೆ ಪ್ರತಿಯೊಬ್ಬರ ಕರ್ತವ್ಯ: ಶಂಕರಗೌಡ ಸೋಮನಾಳ

ಪರಿಸರಕ್ಕೆ ಹಾನಿ ಮಾಡದಂತಹ ತಂತ್ರಜ್ಞಾನಗಳನ್ನು ನಾವು ಪ್ರೋತ್ಸಾಹಿಸಬೇಕು. ಪರಿಸರ ಸಂರಕ್ಷಣೆಯಲ್ಲಿ ವಿದ್ಯಾರ್ಥಿಗಳ...

Download Eedina App Android / iOS

X