ಮುಸ್ಲಿಂ ಸಮುದಾಯದ ಪವಿತ್ರ ಈದ್ ಮಿಲಾದ್ ಹಬ್ಬದವನ್ನು ಕೋಲಾರ ಜಿಲ್ಲೆಯಾದ್ಯಂತ ಶಾಂತಿಯುತವಾಗಿ ಆಚರಣೆ ಮಾಡಲು ಡಿವೈಎಸ್‌ಪಿ ಹುಮಾಯೂನ್ ನಾಗ್ತೆ ಸೂಚಿಸಿದರು.
ನಗರದ ಶತಶೃಂಗ ಭವನದಲ್ಲಿ ಮುಸ್ಲಿಂ ಸಮುದಾಯದ ಮುಖಂಡರ ಜೊತೆ ಕೋಆರ್ಡಿನೇಟ್ ಸಭೆ ನಡೆಸಿ ಮಾತನಾಡಿದ ಅವರು, “ಈದ್ ಮಿಲಾದ್ ಹಬ್ಬದ ಆಚರಣೆಗೆ ಸಂಬಂಧಿಸಿದಂತೆ ಕಾನೂನು ರೀತಿಯಲ್ಲಿ ಸಲಹೆ ಸೂಚನೆಗಳನ್ನು ನೀಡಲಾಗಿದೆ. ಹೈಕೋರ್ಟ್ ಆದೇಶವನ್ನು ತಿಳಿಸಿ ನಿಯಮಾನುಸಾರ ಆಚರಣೆಗೆ ಸಮುದಾಯದ ಮುಖಂಡರು ಸಹಕರಿಸಬೇಕು ಎಂದು ತಿಳಿಸಲಾಗಿದೆ. ಆದೇಶದಂತೆ ಡಿಜೆ ಬಳಕೆಗೆ ಯಾವುದೇ ರೀತಿಯ ಅನುಮತಿ ಇರುವುದಿಲ್ಲ. ಬ್ಯಾನರ್ ಕಟ್ಟಲು ನಗರಸಭೆ ಆಯುಕ್ತರ ಬಳಿ ಕಡ್ಡಾಯವಾಗಿ ಅನುಮತಿ ಪಡೆಯಬೇಕು. ಪೊಲೀಸ್ ಇಲಾಖೆಯ ಸಂಪೂರ್ಣ ಸಹಕಾರದೊಂದಿಗೆ ಶಾಂತಿಯುತವಾಗಿ ಹಬ್ಬ ಆಚರಣೆ ಮಾಡಿ” ಎಂದು ತಿಳಿಸಿದರು.
ಕೋಲಾರ ಟೌನ್ ಠಾಣೆ ಪೊಲೀಸ್ ಇನ್ಸ್ಪೆಕ್ಟರ್ ಸದಾನಂದ ಮಾತನಾಡಿ, “ಶಾಂತಿಯುತವಾಗಿ ಎಲ್ಲರೂ ಮಿಲಾದ್ ಹಬ್ಬವನ್ನು ಆಚರಿಸಿ. ಹೈಕೋರ್ಟ್ ಆದೇಶದಂತೆ ಗಣೇಶ ಹಬ್ಬಕ್ಕೂ ಡಿಜೆಗೆ ಅನುಮತಿ ಕೊಟ್ಟಿಲ್ಲ. ಅದೇ ರೀತಿ ಮಿಲಾದ್ ಹಬ್ಬಕ್ಕೂ ಡಿಜೆಗೆ ಅವಕಾಶ ಕೊಡುವುದಿಲ್ಲ. ಕಾನೂನಿದ ಅಡಿಯಲ್ಲಿ ಎಲ್ಲರೂ ಸೇರಿ ಹಬ್ಬ ಆಚರಿಸಿ” ಎಂದರು.

ಹಲವಾರು ಮುಸ್ಲಿಂ ಸಮುದಾಯದ ಮುಖಂಡರು ಮಾತನಾಡಿ, ಮೊಹಮ್ಮದ್ ಪೈಗಂಬರ್ ಅವರ 1500ನೇ ಹುಟ್ಟು ಹಬ್ಬ ಆಗಿದ್ದು, ನಾವು ವಿಜೃಂಭಣೆಯಿಂದ ಆಚರಣೆ ಮಾಡಬೇಕಾಗಿದೆ. ಪೊಲೀಸರಿಗೆ ಅಗತ್ಯ ಸಹಕಾರ ನೀಡುತ್ತೇವೆ ಎಂದು ತಿಳಿಸಿದರು.
ಇದನ್ನೂ ಓದಿ: ಕೋಲಾರ | ಹೈನುಗಾರಿಕೆ ಗ್ರಾಮೀಣ ಜನರ ಬದುಕಿಗೆ ಆಸರೆ: ಚೆಲುವನಹಳ್ಳಿ ನಾಗರಾಜ್
ಈ ಸಂದರ್ಭದಲ್ಲಿ ಗ್ರಾಮಾಂತರ ಪೊಲೀಸ್ ಇನ್ಸ್ಪೆಕ್ಟರ್ ಕಾಂತರಾಜು, ಟ್ರಾಫಿಕ್ ಇನ್ಸ್ಪೆಕ್ಟರ್ ಲೊಕೇಶ್, ಗಲ್ ಕಾಂತರಾಜು, ಪೇಟೆ ಪೊಲೀಸ್ ಇನ್ಸ್ಪೆಕ್ಟರ್ ವಿಠಲ್, ಮುಸ್ಲಿಂ ಸಮುದಾಯದ ಮುಖಂಡರು ಹಾಗೂ ಹಲವಾರು ಸಂಘಟನೆಗಳ ಯುವಕರು ಉಪಸ್ಥಿತರಿದ್ದರು.