ಶಿವಮೊಗ್ಗ | ದಸರಾ ವಿಚಾರದಲ್ಲಿ ಬಿಜೆಪಿಯವರದ್ದು ಕ್ಷುಲ್ಲಕ ರಾಜಕೀಯ : ಹೆಚ್ ಸಿ ಯೋಗೇಶ್

Date:

Advertisements

ಶಿವಮೊಗ್ಗ: ಮೈಸೂರು ದಸರಾ ಉದ್ಘಾಟನೆ ವಿಚಾರದಲ್ಲಿ ಬಿಜೆಪಿಯವರು ಜಾತಿ, ಧರ್ಮ ನೋಡಬಾರದು. ಇದು ನಾಡಹಬ್ಬ. ಎಲ್ಲರೂ ಸೇರಿ ಆಚರಿಸಬೇಕು. ಆದರೆ ಉದ್ಘಾಟನೆಯ ವಿಷಯದಲ್ಲಿ ಕ್ಷುಲ್ಲಕ ರಾಜಕಾರಣ ಮಾಡುತ್ತಿದೆ ಎಂದು ಕಾಂಗ್ರೆಸ್ ಮುಖಂಡ ಹೆಚ್ ಸಿ ಯೋಗೀಶ್ ದೂರಿದ್ದಾರೆ.

ಮಂಗಳವಾರ ಸುದ್ದಿಗೋಷ್ಠ್ಠಿಯಲ್ಲಿ ಮಾತನಾಡಿದ ಅವರು, ಮೈಸೂರಿನಲ್ಲಿ ನಡೆಯುವ ನಾಡಹಬ್ಬ ಆಚರಣೆಯಲ್ಲಿ ಸಿಎಂ ಸಿದ್ದರಾಮಯ್ಯನವರಿಗೆ ಜವಾಬ್ದಾರಿ ನೀಡಲಾಗಿದೆ.

ಬೂಕರ್ ಪ್ರಶಸ್ತಿ ಪುರಸ್ಕೃತೆ ಬಾನು ಮುಷ್ತಾಕ್ ಅವರನ್ನು ಉದ್ಘಾಟನೆಗೆ ಸೂಕ್ತ ವ್ಯಕ್ತಿ ಎಂದು ಆಯ್ಕೆ ಮಾಡಿದಾಗ ಬಿಜೆಪಿ ಟ್ವೀಟ್ ಮತ್ತು ಸುದ್ದಿಗೋಷ್ಠಿಯ ಮೂಲಕ ವಿರೋಧಿಸಿದ್ದಾರೆ. ಬಾನು ಸಾಹಿತ್ಯದಲ್ಲಿ ಬೂಕರ್ ಪ್ರಶಸ್ತಿ ಪಡೆದಿದ್ದಾರೆ. ಇದು ಕನ್ನಡಿಗರ ಹೆಮ್ಮೆಯಾಗಿದೆ ಎಂದರು.

ಇನ್ಫೋಸಿಸ್ ನಾರಾಯಣಮೂರ್ತಿ ಅವರ ಅಳಿಯ ನಮ್ಮವರು ಎನ್ನುವ ಬಿಜೆಪಿಗೆ ಬಾನು ಮುಷ್ತಾಕ್ ನಮ್ಮ ರಾಜ್ಯದವರೇ ಎನ್ನುವುದು ಮರೆತಂತಿದೆ. ಅವರ ವಿಚಾರದಲ್ಲಿ ಡಬ್ಬಲ್ ಸ್ಟ್ಯಾಂಡರ್ಡ್ ತೋರುತ್ತಾರೆ.

ಶಿವಮೊಗ್ಗದಲ್ಲಿಯೂ ಚಾಮುಂಡಿ ಬೆಳ್ಳಿ ವಿಗ್ರಹದ ಮೆರವಣಿಗೆ ಆರಂಭಿಸಿದ್ದು ಸಿಎಂ ಸಿದ್ದರಾಮಯ್ಯ. ಅಂಬೇಡ್ಕರ್ ಮತ್ತು ಬೆಳ್ಳಿ ಮೂರ್ತಿಯ ಚಾಮುಂಡಿಯನ್ನು ೨೦೧೭ ರಲ್ಲಿ ಸಿಎಂ ಸಿದ್ದರಾಮಯ್ಯ ಉದ್ಘಾಟಿಸಿದ್ದಾರೆ. ಆಗ ಮಹಾನಗರ ಪಾಲಿಕೆಗೆ ಖುರ್ಷಿದಾನು ಮೇಯರ್ ಆಗಿದ್ದರು. ಸಾಹಿತಿ ನಾ.ಡಿಸೋಜಾ, ನಿಸಾರ್ ಅಹಮದ್ ಸಹ ದಸರಾ ಉದ್ಘಾಟಿಸಿದ್ದಾರೆ. ಇದರಲ್ಲೆಲ್ಲ ರಾಜಕೀಯವನ್ನು ಬಿಜೆಪಿಯರು ಕೈ ಬಿಟ್ಟು ಜನ ಮೆಚ್ಚುವಂತೆ ಸಲಹೆ ಕೊಡಲಿ ಎಂದು ಸಲಹೆ ನೀಡಿದರು.

ಶಿವಮೊಗ್ಗಕ್ಕೆ ದಸರಾಕ್ಕೆ ಬರುವ ಆನೆಗೆ ಮಾವುತರು ಮುಸ್ಲೀಂ ಆಗಿರುತ್ತಾರೆ. ದೇವರ ವಿಗ್ರಹವನ್ನು ಆನೆಯ ಮೇಲೆ ಇಡುವರು, ಇಳಿಸುವವರು ಅವರೇ ಆಗಿದ್ದಾರೆ. ದಸರಾದಲ್ಲಿ ಅಂಬು ಕಡಿಯುವುದು ತಹಶೀಲ್ದಾರ್. ತಹಸೀಲ್ದಾರ್ ಒಂದು ವೇಳೆ ಮುಸ್ಲೀಂ ಆಗಿದ್ದರೆ ಅದನ್ನೂ ಬಿಜೆಪಿಯವರು ವಿರೋಧಿಸುತ್ತಿದ್ದರು.

ಇವರನ್ನು ಬೇಡ ಎನ್ನಲಾಗುತ್ತದೆಯೇ ಎಂದು ಪ್ರಶ್ನಿಸಿದ ಅವರು, ದಸರಾ ಉದ್ಘಾಟನೆಯ ವಿಚಾರದಲ್ಲಿ ಶಿವಮೊಗ್ಗದ ಶಾಸಕರು ಎಚ್ಚರಿಕೆ ಗಂಟೆ ನೀಡಿದ್ದಾರೆ. ನಾಡಹಬ್ಬಕ್ಕೆ ಶಾಸಕರು ಎಚ್ಚರಿಕೆ ನೀಡುವುದು ಎಷ್ಟು ಸಮಂಜಸ ಎಂದು ಪ್ರಶ್ನಿಸಿದರು.

eedina
ಈ ದಿನ ಡೆಸ್ಕ್‌
Website |  + posts

ಈ ಮಾಧ್ಯಮ ನಿಮ್ಮದು. ನಿಮ್ಮ ಬೆಂಬಲವೇ ನಮ್ಮ ಬಲ. ವಂತಿಗೆ ನೀಡುವುದರ ಮೂಲಕ ಕೈಜೋಡಿಸಿ, ಸತ್ಯ ನ್ಯಾಯ ಪ್ರೀತಿಯ ಮೌಲ್ಯಗಳನ್ನು ಹಂಚಲು ಜೊತೆಯಾಗಿ. ಸಹಾಯ ಅಥವಾ ಬೆಂಬಲ ನೀಡಲು ದಯವಿಟ್ಟು +91 9035362958 ಅನ್ನು ಸಂಪರ್ಕಿಸಿ.

ಪೋಸ್ಟ್ ಹಂಚಿಕೊಳ್ಳಿ:

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಗದಗ | ಸರಕಾರ ದೇವದಾಸಿ ಮಹಿಳೆಯರ ಕುಟುಂಬ ಸದಸ್ಯರನ್ನು ಗಣತಿ ಪಟ್ಟಿಗೆ ಸೇರಿಸುವ ಕ್ರಮ ಸ್ವಾಗತ

"ಸರಕಾರ ಈಚೆಗೆ ದೌರ್ಜನ್ಯದ ದೇವದಾಸಿ ಪದ್ಧತಿಗೆ ಪರಿಣಾಮಕಾರಿ ಕ್ರಮ ಕೈಗೊಳ್ಳಲು ದೇವದಾಸಿ...

ಗದಗ | ತಹಸೀಲ್ದಾರ ಕಚೇರಿಗಳಲ್ಲಿ ಅಧಿಕಾರಿಗಳ ಬ್ರಹ್ಮಾಂಡ ಭ್ರಷ್ಟಾಚಾರ ಆರೋಪ

"ಜಿಲ್ಲೆಯ ಎಲ್ಲಾ ತಾಲೂಕ ತಹಶೀಲ್ದಾರ್ ಕಚೇರಿ ಹಾಗೂ ಹೋಬಳಿಗಳಲ್ಲಿ ವೃಧ್ಯಾಪ್ಯ ವೇತನ,...

ಜನಮನ ಗೆದ್ದ ತುಮಕೂರು ದಸರಾ ಉತ್ಸವ : ಡಾ. ಜಿ.ಪರಮೇಶ್ವರ

 ತುಮಕೂರು ದಸರಾ ಉತ್ಸವವು ನಾಡಿನಾದ್ಯಂತ ಜನರ ಮನಸ್ಸನ್ನು ಗೆಲ್ಲುವ ಮೂಲಕ ಐತಿಹಾಸಿಕ...

Download Eedina App Android / iOS

X