ಶಿವಮೊಗ್ಗ | ನನ್ನ ವಿರುದ್ಧ ಷಡ್ಯಂತ್ರ ವಿಡಿಯೋ ಬಿತ್ತರಿಸಿದ ಮಾಧ್ಯಮಗಳ ವಿರುದ್ಧ ಕೋರ್ಟ್‌ ಗೆ ಹೋಗುವೆ : ಎಸ್. ರವಿಕುಮಾರ್

Date:

Advertisements

*ರಾಜಿನಾಮೆ: ಸಿಎಂ ನಿರ್ಧಾರಕ್ಕೆ ಬದ್ಧ: ಬೋವಿ ಅಭಿವೃದ್ಧಿ ನಿಗಮದ ಅಧ್ಯಕ್ಷ ರವಿಕುಮಾರ್ ಹೇಳಿಕೆ*

ಶಿವಮೊಗ್ಗ, ಬೊವಿ ನಿಗಮದ ಸೌಲಭ್ಯ ನೀಡಲು ಫಲಾನುಭವಿಗಳಿಂದ ಕಮೀಷನ್ ಕೇಳಿದ್ದೇನೆನ್ನುವ ಆ ವಿಡಿಯೋದಲ್ಲಿ ಇರುವುದು ನಾನು ನಿಜ, ಆದರೆ ಅಲ್ಲಿ ಮಾತನಾಡಿದ್ದು ನಾನಲ್ಲ ಆ ಧ್ವನಿ ನನ್ನದಲ್ಲ, ಆ ವಿಡಿಯೋದಲ್ಲಿನ ಇಡೀ ಸಂಭಾಷಣೆಯನ್ನು ಎಐ (ಕೃತಕ ಬುದ್ಧಿಮತ್ತೆ) ಮೂಲಕ ಅದನ್ನು ತಿರುಚಲಾಗಿದೆ . ವಿಡಿಯೋದಲ್ಲಿನ ಧ್ವನಿಗೂ ನನ್ನ ಧ್ವನಿಗೂ ಸಂಬಂಧವೇ ಇಲ್ಲ. ಬೇಕಾದರೆ ಇದನ್ನು ಯಾವುದೇ ತನಿಖೆಗೆ ಒಳಪಡಿಸಬಹುದು ಎಂದು ಬೋವಿ ಅಭಿವೃದ್ಧಿ ನಿಗಮದ ಅಧ್ಯಕ್ಷ ಎಸ್. ರವಿಕುಮಾರ್ ಹೇಳಿದ್ದಾರೆ.

ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಅಲ್ಲಿ ಸಂಭಾಷಣೆ ನಡೆದಂತೆ ನಾನು ಆ ವಿಡಿಯೋ ಮಾಡಿದವರೊಂದಿಗೆ ಯಾವುದೇ ಹಣಕಾಸಿನ ಕೊಡುಕೊಳ್ಳುವಿಕೆಯ ಸಂಭಾಷಣೆ ಮಾಡಿಲ್ಲ. ನಾನುಕೂಡ ಸಾರ್ವಜನಿಕ ಜೀವನದಲ್ಲಿ ಹಲವಾರು ವರ್ಷಗಳಿಂದ ಇದ್ದವನು, ತುಂಬಾ ಎಚ್ಚರಿಕೆದಿಂದಲೇ ಕೆಲಸ ನಿರ್ವಹಿಸುತ್ತ ಬಂದಿದ್ದೇನೆ.ಆಫೀಸ್ ನಲ್ಲಿ ಕುಳಿತುಕೊಂಡು ವ್ಯವಹಾರ ಮಾಡುವಷ್ಟು ದಡ್ಡನಲ್ಲ. ಹಾಗೆ ಕಮಿಷನ್ ಪಡೆದು ನಮ್ಮದೇ ಸಮಾಜಕ್ಕೆ ಅನ್ಯಾಯ ಮಾಡುವಷ್ಟು ಕ್ರೂರಿ ನಾನಲ್ಲ ಎಂದು ಹೇಳಿದರು.

ವಿಡಿಯೋದಲ್ಲಿ ಪರ್ಸೆಂಟೇಜ್ ವ್ಯವಹಾರ ಮಾತನಾಡಲಾಗಿದೆ. 5 ಪರ್ಸೆಂಟ್ ಕಮೀಷನ್ ಕೇಳಿದ ಅಂತ ಹೇಳಲಾಗಿದೆ. ಆದರೆ ಅಲ್ಲಿ ನಾವು ಮಾತನಾಡಿದ್ದು ಫಲಾನುಭವಿಗಳ ಕೋಟಾ ಪರ್ಸೆಂಟೇಜ್ ಕುರಿತು. ಅಂದರೆ ನಿಗಮದ ಸೌಲಭ್ಯಗಳನ್ನು ಹಂಚಿಕೆ ಮಾಡುವಾಗ ಸಚಿವರಿಗೆ ಇಷ್ಟು , ಅಧ್ಯಕ್ಷರಿಗಿಷ್ಟು ಅಂತ ಕೋಟಾ ಇರುತ್ತದೆ. ನನಗೆ ಇದ್ದಿದ್ದು 5 ಪರ್ಸೆಂಟ್ ಕೋಟಾ,ಆ ಪ್ರಕಾರ ನಾನು ಹಂಚಿಕೆ ಮಾಡುತ್ತೇನೆ. ಅದನ್ನು ಕೊಡಿ ಎಂದು ನಾನು ಅಧಿಕಾರಿಗಳಿಗೆ ಹೇಳುತ್ತೇನೆ. ಅದನ್ನೇ ರೆಕಾರ್ಡ್ ಮಾಡಿ, ತಿರುಚುವ ಮೂಲಕ ಪರ್ಸೆಂಟೇಜ್ ಹಣ ಕೊಡಿ ಎಂದು ಕೇಳಿದರೂ ಎನ್ನಲಾಗಿದೆ.‌ ಇದನ್ನು ಎಫ್ ಎಸ್ ಎಲ್ ಗೆ ವಹಿಸಬೇಕೆಂದು ಆಗ್ರಹಿಸಿದರು.

ಇದರ ವಿರುದ್ಧ ದೂರು ಕೊಡಲು ನಿರ್ಧರಿಸಿದ್ದೇನೆ. ಇದೊಂದು ವ್ಯವಸ್ಥಿತ ಷಡ್ಯಂತ್ರ. ಇದರ ಹಿಂದೆ ಕೆಲವು ಕಾಣದ ಕೈವಾಡಗಳಿವೆ. ದಲಿತ ವಿರೋಧಿಗಳು, ಶೋಷಿತ ಸಮುದಾಯದ ವಿರೋಧಿಗಳು ಕೆಲಸ ಮಾಡಿವೆ. ಆ ಕಾರಣದಿಂದಲೇ ನಾನು ಈ ಪ್ರಕರಣದ ಸಂಪೂರ್ಣ ತನಿಖೆ ಆಗಬೇಕೆಂದು ಒತ್ತಾಯಿಸುತ್ತಿದ್ದೇನೆ ಎಂದರು.

ರಾಜೀನಾಮೆ ಸರ್ಕಾರದ ನಿರ್ಧಾರ. ನಾನು ಮುಖ್ಯ ಮಂತ್ರಿಗಳನ್ನು, ಉಪ ಮುಖ್ಯಮಂತ್ರಿಗಳನ್ನು, ಸಂಬಂಧಪಟ್ಟ ಇಲಾಖೆ ಸಚಿವರನ್ನು ಭೇಟಿ ಮಾಡಿ ಇಲ್ಲಿ ಆಗಿದ್ದೇನು ಎನ್ನುವುದನ್ನು ತಿಳಿಸಬೇಕಿದೆ. ಮುಂದೆ ಅವರೇನು ನಿರ್ಧಾರ, ಸೂಚನೆ ನೀಡುತ್ತಾರೋ ಆ ಪ್ರಕಾರ ಮುಂದುವರೆಯುತ್ತೇನೆ ಎಂದರು.

ನನಗೆ ಅಧಿಕಾರ ಮುಖ್ಯವಲ್ಲ, ಸಮಾಜ ಮತ್ತು ಪಕ್ಷಕ್ಕೆ ಮುಜುಗರ ಆಗಬಾರದು. ನಾಯಕರು ಏನೇ ಹೇಳಿದರೂ ಅವರ ತೀರ್ಮಾನಕ್ಕೆ ಬದ್ಧನಾಗಿರುತ್ತೇನೆ. ನನ್ನ ವಿರುದ್ಧದ ಷಡ್ಯಂತ್ರ ವಿಡಿಯೋ ಬಿತ್ತರಿಸುವ ಎಲ್ಲಾ ಮಾಧ್ಯಮಗಳ ವಿರುದ್ಧ ಕೋರ್ಟ್‌ ಗೆ ಹೋಗುವೆ. ವಿಡಿಯೋ ತಿರುಚಿದವರ ವಿರುದ್ಧವೂ ದೂರು ದಾಖಲಿಸಿ, ಸೂಕ್ತ ತನಿಖೆಗೂ ಒತ್ತಾಯಿಸುವೆ ಎಂದರು.

eedina
ಈ ದಿನ ಡೆಸ್ಕ್‌
Website |  + posts

ಈ ಮಾಧ್ಯಮ ನಿಮ್ಮದು. ನಿಮ್ಮ ಬೆಂಬಲವೇ ನಮ್ಮ ಬಲ. ವಂತಿಗೆ ನೀಡುವುದರ ಮೂಲಕ ಕೈಜೋಡಿಸಿ, ಸತ್ಯ ನ್ಯಾಯ ಪ್ರೀತಿಯ ಮೌಲ್ಯಗಳನ್ನು ಹಂಚಲು ಜೊತೆಯಾಗಿ. ಸಹಾಯ ಅಥವಾ ಬೆಂಬಲ ನೀಡಲು ದಯವಿಟ್ಟು +91 9035362958 ಅನ್ನು ಸಂಪರ್ಕಿಸಿ.

ಪೋಸ್ಟ್ ಹಂಚಿಕೊಳ್ಳಿ:

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಶಿವಮೊಗ್ಗ | ಪಾಲಿಕೆಗೆ 19 ಗ್ರಾಮಗಳ ಸೇರ್ಪಡೆಗೆ ಸಿದ್ಧತೆ

ಶಿವಮೊಗ್ಗ, ನಿರೀಕ್ಷೆಯಂತೆಯೇ ತುಮಕೂರು ಮತ್ತು ಶಿವಮೊಗ್ಗ ನಗರ ಪಾಲಿಕೆಗಳ ವ್ಯಾಪ್ತಿ ವಿಸ್ತರಣೆಗೆ...

ಶಿವಮೊಗ್ಗ | ಅಂಬೇಡ್ಕರ್ ಓದು ; ಭಾರತವನ್ನು ಅರಿಯುವ ದಾರಿ : ಕೋಟಿಗಾನಹಳ್ಳಿ ರಾಮಯ್ಯ ಅಭಿಪ್ರಾಯ

ಶಿವಮೊಗ್ಗ ಮಾನವತಾವಾದಿ ಅಂಬೇಡ್ಕರ್ ಅವರನ್ನು ಓದುವುದು ಎಂದರೆ ಭಾರತವನ್ನು ನೈಜವಾಗಿ ಅರಿಯುವುದು,...

ಬಿಜೆಪಿಯ ಆತ್ಮವಂಚನೆ ಪ್ರತಿಭಟನೆಗಳು ಕಲಬುರಗಿಗೆ ಅಗತ್ಯವಿಲ್ಲ: ಸಚಿವ ಪ್ರಿಯಾಂಕ್ ಖರ್ಗೆ

ಅಧಿಕಾರದಲ್ಲಿದ್ದಾಗ ಕಲಬುರಗಿ ಜಿಲ್ಲೆಯ ರೈತರಿಗೆ ದ್ರೋಹವೆಸಗಿದ್ದ ಬಿಜೆಪಿ ಈಗ ಪ್ರತಿಭಟನೆಯ ನಾಟಕ...

Download Eedina App Android / iOS

X