ಶಿವಮೊಗ್ಗದ ರೈಲ್ವೆ ಪ್ರಯಾಣಿಕರಿಗೆ ಮತ್ತೊಂದು ಗುಡ್ ನ್ಯೂಸ್ ಸಿಕ್ಕಿದೆ. ಬೆಂಗಳೂರಿಗೆ ಶಿವಮೊಗ್ಗದಿಂದ ಓಡಾಡುವವರು ಇಲ್ಲಿವರೆಗೂ ತಾಳಗುಪ್ಪ ಮೈಸೂರು ಟ್ರೈನ್ ಹತ್ತಿದರೆ, ಬೆಂಗಳೂರಿಗೆ ಕನೆಕ್ಟಿಂಗ್ ಟ್ರೈನ್ ಸಿಗಲ್ಲವೆಂದು ಬೇಸರ ವ್ಯಕ್ತಪಡಿಸ್ತಿದ್ದರು.
ಆದರೆ ಕುವೆಂಪು ಎಕ್ಸ್ಪ್ರೆಸ್ ರೈಲು ವೇಳಾಪಟ್ಟಿಯಲ್ಲಿ ಬದಲಾವಣೆ ಆಗಿದೆ. ನವೆಂಬರ್ 2 ರಿಂದ ಹೊಸ ಸಮಯದಲ್ಲಿ ಈ ಟ್ರೈನ್ ಸಂಚರಿಸಲಿದೆ.
ತಾಳಗುಪ್ಪದಿಂದ ಮೈಸೂರಿಗೆ ಸಂಚರಿಸುವ ಕುವೆಂಪು ಎಕ್ಸ್ಪ್ರೆಸ್ ರೈಲು (ಸಂಖ್ಯೆ 16221) ಪ್ರಸ್ತುತ ಬೆಳಿಗ್ಗೆ 6.15 ಕ್ಕೆ ತಾಳಗುಪ್ಪದಿಂದ ಹೊರಟು ಮಧ್ಯಾಹ್ನ 3.35 ಕ್ಕೆ ಮೈಸೂರು ತಲುಪುತಿತ್ತು. ಹೊಸ ವೇಳಾಪಟ್ಟಿಯ ಪ್ರಕಾರ, ಇದು 25 ನಿಮಿಷ ಮೊದಲೇ, ಅಂದರೆ ಬೆಳಿಗ್ಗೆ 5.50ಕ್ಕೆ ಹೊರಡಲಿದೆ ಮತ್ತು ಮಧ್ಯಾಹ್ನ 3.30ಕ್ಕೆ ಮೈಸೂರು ತಲುಪಲಿದೆ.
ಹೊಸ ವೇಳಾಪಟ್ಟಿಯ ವಿವರ /Kuvempu Express Train ತಾಳಗುಪ್ಪ : ಬೆಳಿಗ್ಗೆ 5.50 ಕ್ಕೆ ಹೊರಡುವ ಸಮಯ.
ಸಾಗರ ಜಂಬಗಾರು: ಬೆಳಿಗ್ಗೆ 6.10ಕ್ಕೆ ಆಗಮನ.ಶಿವಮೊಗ್ಗ: ಬೆಳಿಗ್ಗೆ 7.55ಕ್ಕೆ ಆಗಮನ.ಭದ್ರಾವತಿ: ಬೆಳಿಗ್ಗೆ 8.20ಕ್ಕೆ ಆಗಮನ.ತರೀಕೆರೆ: ಬೆಳಿಗ್ಗೆ 8.43ಕ್ಕೆ ಆಗಮನ.ಬೀರೂರು: ಬೆಳಿಗ್ಗೆ 9.35ಕ್ಕೆ ಆಗಮನ.ಅರಸೀಕೆರೆ: ಬೆಳಿಗ್ಗೆ 10.50ಕ್ಕೆ ಆಗಮನ.ಹಾಸನ: ಬೆಳಿಗ್ಗೆ 11.47ಕ್ಕೆ ಆಗಮನ.ಹೊಳೆನರಸೀಪುರ: ಮಧ್ಯಾಹ್ನ 12.27ಕ್ಕೆ ಆಗಮನ.ಮೈಸೂರು: ಮಧ್ಯಾಹ್ನ 3.30 ಕ್ಕೆ ತಲುಪಲಿದೆ ಸಿದ್ದಗಂಗಾ ಎಕ್ಸ್ಪ್ರೆಸ್ ಮತ್ತು ಪುದುಚೇರಿ ಎಕ್ಸ್ಪ್ರೆಸ್ ರೈಲು ಬೀರೂರಿಗೆ ಬೆಳಗ್ಗೆ 9.50ರ ಹೊತ್ತಿಗೆ ತಲುಪುತ್ತವೆ.
ಅದಕ್ಕೂ ಮೊದಲೇ ಕುವೆಂಪು ಎಕ್ಸ್ಪ್ರೆಸ್ ಬೀರೂರು ತಲುಪಿದರೆ, ಶಿವಮೊಗ್ಗದಿಂದ ಬೆಂಗಳೂರಿಗೆ ಹೋಗುವ ಪ್ರಯಾಣಿಕರಿಗೆ ಬೀರೂರಿನಲ್ಲಿ ಟ್ರೈನ್ ಕ್ಯಾಚ್ ಮಾಡಲು ಅನುಕೂಲವಾಗುತ್ತದೆ.
ಈ ನಿಟ್ಟಿನಲ್ಲಿ ಕುವೆಂಪು ಎಕ್ಸ್ಪ್ರೆಸ್ ರೈಲನ್ನು ಬೆಂಗಳೂರು ಸಂಪರ್ಕಕ್ಕಾಗಿ ಸ್ವಲ್ಪ ಮುಂಚಿತವಾಗಿ ಪ್ರಾರಂಭಿಸುವಂತೆ ಸಂಸದರು ಕೋರಿದ್ದರು.