ಬಿಹಾರ | 39 ಕ್ಷೇತ್ರಗಳಲ್ಲಿ 3.76 ಲಕ್ಷ ಸಂಶಯಾಸ್ಪದ ಮತದಾರರ ವಿವರ ಪತ್ತೆ

Date:

Advertisements

ಬಿಹಾರದಲ್ಲಿ ಅಕ್ರಮ ಮತದಾರರ ಮಾಹಿತಿ ಬಹಿರಂಗಗೊಂಡಿದ್ದು, ಒಂದೇ ವಿಧಾನಸಭಾ ಕ್ಷೇತ್ರದೊಳಗೆ ಒಂದೇ ಹೆಸರು ಮತ್ತು ಸಂಬಂಧಿಕರ ಹೆಸರು ಹೊಂದಿರುವ ಜನರು ಎರಡು ಬಾರಿ ಮತದಾರರ ಪಟ್ಟಿಗಳಲ್ಲಿ ದಾಖಲಾಗಿದ್ದಾರೆ.

ಒಟ್ಟು 1,87,643 ಪ್ರಕರಣಗಳು ಬಿಹಾರದ 39 ವಿಧಾನಸಭಾ ಕ್ಷೇತ್ರಗಳಲ್ಲಿ ಕಂಡುಬಂದಿವೆ. ಈ ಪೈಕಿ1.02ಲಕ್ಷ ಪ್ರಕರಣಗಳಲ್ಲಿ ಎರಡು ಮತದಾರರ ಗುರುತಿನ ಚೀಟಿಗಳು ಒಂದೇ ಹೆಸರು ಹೊಂದಿವೆ. ಕೇವಲ ಐದು ವರ್ಷಗಳವರೆಗಿನ ವಯಸ್ಸಿನ ವ್ಯತ್ಯಾಸವನ್ನು ದಾಖಲಿಸಿದೆ.

25,862ಪ್ರಕರಣಗಳಲ್ಲಿ ಜನರು ಎರಡು ಸಲ ಮತ ಚಲಾಯಿಸಲು ನೋಂದಾಯಿಸಿಕೊಂಡಿದ್ದು, ಅವರ ಹೆಸರುಗಳು, ಸಂಬಂಧಿಕರ ಹೆಸರುಗಳು ಮತ್ತು ವಯಸ್ಸಿನ ಪುರಾವೆಗಳು ತಾಳೆಯಾಗುತ್ತವೆ ಎಂದು reporters-collective.in ವರದಿ ಮಾಡಿದೆ.

39 ಕ್ಷೇತ್ರಗಳಲ್ಲಿ ಈ ಸಂಶಯಾಸ್ಪದ ಪ್ರಕರಣಗಳ ಒಟ್ಟು ಮತಗಳು 3.76 ಲಕ್ಷ ಇದ್ದು, ಈ ಮತಗಳಲ್ಲಿ ನಿಜಕ್ಕೂ ನಕಲಿಯಾಗಿದ್ದರೆ, ಅವು ಕ್ಷೇತ್ರಗಳಲ್ಲಿ ಚುನಾವಣಾ ಫಲಿತಾಂಶದ ಮೇಲೆ ಪರಿಣಾಮ ಬೀರುವ ಸಾಧ್ಯತೆ ಹೆಚ್ಚಿದೆ.

ಬಿಹಾರದಲ್ಲಿ ನಡೆದ ಮೂವತ್ತು ದಿನಗಳ ವಿಶೇಷ ಪರಿಷ್ಕರಣೆ ನಂತರ ಬಿಹಾರದ ಕರಡು ಮತದಾನ ಪಟ್ಟಿಯಲ್ಲಿ ಈ ಸಂಶಯಾಸ್ಪದ ಪ್ರಕರಣಗಳು ದಾಖಲಾಗಿವೆ. ಕರಡು ಪಟ್ಟಿಯನ್ನು ಪ್ರಕಟಿಸುವ ಮೊದಲು ಬಿಹಾರದಲ್ಲಿ ಏಳು ಲಕ್ಷಕ್ಕೂ ಹೆಚ್ಚು ನಕಲಿ ಮತದಾರರು ಅಥವಾ 0.89 ಪ್ರತಿಶತ ಮತದಾರರನ್ನು ತೆಗೆದುಹಾಕಲಾಗಿದೆ ಎಂದು ಚುನಾವಣೆ ಆಯೋಗ ಹೇಳಿಕೊಂಡಿತ್ತು. ಈ ಸಂಶಯಾಸ್ಪದ ಮತದಾರರು ಇನ್ನೂ ಕರಡು ಪಟ್ಟಿಯಲ್ಲಿ ಉಳಿದಿದ್ದಾರೆ.

eedina
ಈ ದಿನ ಡೆಸ್ಕ್‌
Website |  + posts

ಈ ಮಾಧ್ಯಮ ನಿಮ್ಮದು. ನಿಮ್ಮ ಬೆಂಬಲವೇ ನಮ್ಮ ಬಲ. ವಂತಿಗೆ ನೀಡುವುದರ ಮೂಲಕ ಕೈಜೋಡಿಸಿ, ಸತ್ಯ ನ್ಯಾಯ ಪ್ರೀತಿಯ ಮೌಲ್ಯಗಳನ್ನು ಹಂಚಲು ಜೊತೆಯಾಗಿ. ಸಹಾಯ ಅಥವಾ ಬೆಂಬಲ ನೀಡಲು ದಯವಿಟ್ಟು +91 9035362958 ಅನ್ನು ಸಂಪರ್ಕಿಸಿ.

ಪೋಸ್ಟ್ ಹಂಚಿಕೊಳ್ಳಿ:

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

‘ನನ್ನ ಗಂಡನನ್ನು ಭೇಟಿಯಾಗುವ ಅರ್ಹತೆ ನನಗಿಲ್ಲವೇ?’: ರಾಷ್ಟ್ರಪತಿ, ಮೋದಿಗೆ ಪತ್ರ ಬರೆದ ವಾಂಗ್ಚುಕ್ ಪತ್ನಿ

ಲಡಾಖ್‌ಗೆ ರಾಜ್ಯ ಸ್ಥಾನಮಾನ ನೀಡಬೇಕು ಎಂಬುದು ಸೇರಿದಂತೆ ಹಲವು ಬೇಡಿಕೆಗಳನ್ನು ಇಟ್ಟುಕೊಂಡು...

ಯುವಜನರಿಗಾಗಿ ಪ್ರಾಣವನ್ನೇ ತ್ಯಾಗ ಮಾಡುತ್ತೇನೆ: ಉತ್ತರಾಖಂಡ ಮುಖ್ಯಮಂತ್ರಿ ಪುಷ್ಕರ್ ಸಿಂಗ್ ಧಾಮಿ

ಸುಡುವ ಬಿಸಿಲಿನಲ್ಲಿ ಕುರಿತು ಯುವಜನರು ತಮ್ಮ ಹಕ್ಕೊತ್ತಾಯಗಳ ಈಡೇರಿಕೆಗಾಗಿ ಹೋರಾಟ ನಡೆಸುತ್ತಿದ್ದಾರೆ....

ದೆಹಲಿ ಶಾಲೆಗಳಲ್ಲಿ RSS ಬೋಧನೆ: ಮಕ್ಕಳ ಎಳೆ ಮನಸ್ಸಲ್ಲಿ ಕೋಮುದ್ವೇಷ ಬಿತ್ತುವ ಹುನ್ನಾರ!

ಕೋಮುವಾದಿ, ಕೋಮುದ್ವೇಷಿ, ಸಮಾಜಘಾತುಕ ಸಂಘಟನೆಯ ಬಗ್ಗೆ ಶಾಲೆಗಳಲ್ಲಿ ಬೋಧಿಸುವುದು ಎಳೆ ಮನಸ್ಸುಗಳಲ್ಲಿ...

ಆರ್‌ಎಸ್‌ಎಸ್‌ನ ಕೈಗಳಿಗೆ ಮಹಾತ್ಮ ಗಾಂಧಿಯ ರಕ್ತದ ಕಲೆ ಅಂಟಿದೆ: ಕಾಂಗ್ರೆಸ್‌

ಆರ್‌ಎಸ್‌ಎಸ್ ಮಹಾತ್ಮ ಗಾಂಧಿ, ಭಗತ್ ಸಿಂಗ್ ಮತ್ತು ಚಂದ್ರಶೇಖರ್ ಆಜಾದ್ ಅವರಂತಹ...

Download Eedina App Android / iOS

X