ನ್ಯಾಯಾಧೀಶರಲ್ಲಿ ಅರಿಕೆ: ಹೌದು ಮಹಾಸ್ವಾಮಿ; ಉರ್ದು ಕವಿ ಗೌಹರ್ ರಜಾ಼ ಅವರ ಕವಿತೆ

Date:

Advertisements

2020ರ ದೆಹಲಿ ಕೋಮುಗಲಭೆ ಪ್ರಕರಣದ ಸಂಬಂಧದಲ್ಲಿ, ಏನೇನೋ ಆರೋಪ ಹೊರಿಸಲಾಗಿ, ಐದು ವರ್ಷಗಳಿಂದ ಸೆರೆಮನೆಯಲ್ಲಿರುವ ಶರ್ಜೀಲ್ ಇಮಾಮ್, ಉಮರ್ ಖಾಲಿದ್, ಅತ್ತರ್ ಖಾನ್, ಅಬ್ದುಲ್ ಖಾಲಿದ್ ಸೈಯಫಿ, ಗುಲ್ಫಿಷಾ ಫಾತಿಮಾ, ಮೀರನ್ ಹೈದರ್, ಶಿಫಾ-ಉರ್-ರಹಮಾನ್, ಮೊಹಮ್ಮದ್ ಸಲೀಂ ಖಾನ್, ಶಾದಾಬ್ ಅಹಮದ್ ಮತ್ತು ತಸ್ಲೀಂ ಅಹಮದ್ ಅವರುಗಳಿಗೆ ದೆಹಲಿಯ ಹೈಕೋರ್ಟು ಜಾಮೀನು ನೀಡಲು ಮತ್ತೂ ಒಮ್ಮೆ ನಿರಾಕರಿಸಿದೆ. ಅವರನ್ನೂ, ಅವರಂತೆಯೇ ಭೀಮಾ-ಕೋರೆಗಾಂವ್ ಪ್ರಕರಣದ ಸಂಬಂಧದಲ್ಲಿ, ಏನೇನೋ ಆರೋಪ ಹೊರಿಸಲಾಗಿ ವರ್ಷಗಟ್ಟಲೆ ಕಾಲ ಸೆರೆಮನೆವಾಸ ಕಂಡ ಇಲ್ಲವೆ ಕಾಣುತ್ತಿರುವ ಸುರೇಂದ್ರ ಗಾಡ್ಲಿಂಗ್, ಆನಂದ್ ತೇಲ್ತುಂಬ್ಡೆ, ಶೋಮಾ ಸೇನ್, ಹುತಾತ್ಮ ಫಾದರ್ ಸ್ಟ್ಯಾನ್ ಸ್ವಾಮಿ ಮುಂತಾದ ಇತರ ಧೀಮಂತ-ಧೀಮಂತೆಯರನ್ನೂ, ಹಾಗೂ ಅವರೆಲ್ಲರಂಥ ಇನ್ನೂ ಎಷ್ಟೆಷ್ಟೋ ಜನರನ್ನೂ ನೆನೆಯುತ್ತ, ವಿಜ್ಞಾನಿ ಮತ್ತು ಉರ್ದು ಕವಿ ಗೌಹರ್ ರಜಾ಼ ಅವರು ಬರೆದ ‘ಮೈ ಲಾರ್ಡ್’ ಕವಿತೆಯ ಕನ್ನಡ ಭಾವರೂಪಾಂತರ, ರಘುನಂದನ ಅವರ ‘ನಾನು ಸತ್ತಮೇಲೆ’ ಕವನ ಸಂಕಲನದಿಂದ:

ಹೌದು ಮಹಾಸ್ವಾಮಿ

ಹೌದು ಮಹಾಸ್ವಾಮಿ
ಪಾತಕ ಮಾಡಿದ್ದೇನೆ ನಾನು ಮಹಾಪಾಪಿಷ್ಠನೆ

ಬಾಯಿಮುಚ್ಚಿಕೊಂಡಿರಬೇಕಾದೀ ಕಾಲದಲ್ಲಿ
ಸೊಲ್ಲೆತ್ತಿಬಿಟ್ಟೆ ತಪ್ಪು ತಪ್ಪಾಯಿತು ಮಹಾ
ಪಾತಕವಾಯ್ತು ತಪ್ಪಿತಸ್ಥನೆಂದೇ ತೀರ್ಮಾನಿಸಿ
ಬೇಕಾದ ಶಾಸ್ತಿಮಾಡಿ ಬೇಕಾsದಂತೆ ಮಾಡಿಬಿಡಿ

ಪರಮಾತ್ಮನ ನೆರಳು ನೀವು ಮಹಾಸ್ವಾಮಿ
ಇರುವುದೇ ನ್ಯಾಯ ನೀತಿ ಧರ್ಮದ ಬಟ
ವಾಡೆಗೆಂದು ಆಗಲಿ ಆಗಲಿ ಮಹಾಸ್ವಾಮಿ
ಸಾಗಲಿ ಇಂದಿಗೆ ನಿಮ್ಮದೇs ನಡೆಯಲಿ

ನಿಮಗಾವ ಅಡ್ಡಿ ಮಹಾಸ್ವಾಮಿ ತಿರುಪಿ ತಿರುಚಿ
ನ್ಯಾಯ ನೀತಿ ಧರ್ಮ ಬೇಕಾದಂತೆ ಕೆತ್ತಿಬಿಡಿ
ಒಪ್ಪು ಒಪ್ಪಿಗೆಯೆ ಹಗೆ ತೀರಿಸಿಕೊಳ್ಳುವುದೇ ನ್ಯಾಯವೆನ್ನಿ
ಸೊಲ್ಲೆತ್ತಿದವರ ತುಟಿ ಹೊಲಿಯಲು ಇದೇ ದಬ್ಬಳವೆನ್ನಿ

ಇನ್ನೀಗ ಇದೇ ನ್ಯಾಯ ನೀತಿ ಧರ್ಮ ಎಂದು ಕುಡು
ಗೋಲಿನಿಂದ ಒಂದಾದಮೇಲೊಂದು ಬೆರಳ್ ಕೊಚ್ಚಿ
ಬಿಸುಟುಹಾಕಿ ಬೆರಳುಮಾಡದಂತೆ ಯಾರೂ
ಯಾವತ್ತೂ ಆಳುವ ದಣಿಗಳತ್ತ ಇನ್ನು ತೋರದಂತೆ

ನಿಮಗಾವ ಅಡ್ಡಿ ಮಹಾಸ್ವಾಮಿ ಕಾನೂನು ರೂಲುದೊಣ್ಣೆ
ಎತ್ತೆತ್ತಿ ಬಾರಿಸಿ ಕೂಲಿಮಠದಯ್ಯ ಬಡಿಯುತ್ತ ಇದ್ದಂತೆ
ತಲೆಹೋಕ ಹೈಕಳೆತ್ತಿದ್ದ ತಲೆಯ ಹೌದ್ಹೌದು ಮನ್ನಿಸ
ಬಾರದ ಪಾತಕಿ ನಾನು ಹಾಲಲ್ಲದ್ದಿ ಮಾಸ್ವಾಮಿ ಆಸಿಡ್ಡಲದ್ದಿ

ನಿಮ್ಮ ಪರ್ಮಿಟ್ಟಿದ್ದರೆ ಬುದ್ದೀ ಮತ್ತೊಂದು ಮಾತು
ಇತಿಹಾಸವೆ ಕಲಿಸಿದ್ದು: ಮಾಗಿ ಬೋಳಿನ ಮಧ್ಯದಲ್ಲಿ
ಹೂ ಅರಳಲು ಶುರುವಾದರೆ ತಡೆಯಲಾಗದು ಯಾರೂ
ಕಾರ್ಮೋಡ ಎದ್ದರೆ ತೊಯ್ದುಹೋಗುವುದು ಮರಳುಗಾಡೂ

ಎಲೆಯುದುರಿದ ಮರದಲ್ಲಿ ಕೋಗಿಲೆs ಹಾಡು ಶುರುವಾದರೆ
ಕೂಗೇ ಕೂಗತ sದ ಗಿರಣಿ ಕರೆಯೊ ಹಾಂಗ ಕಣಿವೆಕಣಿವೆ ಆಗ
ಓಗೊಟ್ಟುಗೊಟ್ಟು ಗುಡ್ಡಗುಡ್ಡ ನುಗ್ಗಾಗಿಹೋಗಿ ಯಾರು
ಏನು ಮಾಡಿದರೂ ನಿಲ್ಲದು ಮೀಯಿಸಿಬಿಡುತ್ತದೆ ಎಲ್ಲವನ್ನೂ

ಹೌದು ಮಹಾಸ್ವಾಮಿ
ಪಾತಕ ಮಾಡಿದ್ದೇನೆ ನಾನು ಮಹಾಪಾಪಿಷ್ಠನೆ

ಈದಿನ 2
ಈ ದಿನ ಡೆಸ್ಕ್
+ posts

ಈ ಮಾಧ್ಯಮ ನಿಮ್ಮದು. ನಿಮ್ಮ ಬೆಂಬಲವೇ ನಮ್ಮ ಬಲ. ವಂತಿಗೆ ನೀಡುವುದರ ಮೂಲಕ ಕೈಜೋಡಿಸಿ, ಸತ್ಯ ನ್ಯಾಯ ಪ್ರೀತಿಯ ಮೌಲ್ಯಗಳನ್ನು ಹಂಚಲು ಜೊತೆಯಾಗಿ. ಸಹಾಯ ಅಥವಾ ಬೆಂಬಲ ನೀಡಲು ದಯವಿಟ್ಟು +91 9035362958 ಅನ್ನು ಸಂಪರ್ಕಿಸಿ.

ಪೋಸ್ಟ್ ಹಂಚಿಕೊಳ್ಳಿ:

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಬಾಪೂ ಎಂಬ ಪವಾಡದ ಅನ್ವೇಷಣೆ…

ಇಂದು ರಾಷ್ಟ್ರಪಿತ ಬಾಪೂ ಜನ್ಮದಿನ. ಆ ನೆನಪಿನಲ್ಲಿ ಸದ್ಯದಲ್ಲೇ ಹೊರಬರಲಿರುವ ಎನ್.ಎಸ್.‌...

ಆರ್‌ಎಸ್‌ಎಸ್‌ನ ಕೈಗಳಿಗೆ ಮಹಾತ್ಮ ಗಾಂಧಿಯ ರಕ್ತದ ಕಲೆ ಅಂಟಿದೆ: ಕಾಂಗ್ರೆಸ್‌

ಆರ್‌ಎಸ್‌ಎಸ್ ಮಹಾತ್ಮ ಗಾಂಧಿ, ಭಗತ್ ಸಿಂಗ್ ಮತ್ತು ಚಂದ್ರಶೇಖರ್ ಆಜಾದ್ ಅವರಂತಹ...

ಮಹಿಳೆಯರ ಮೇಲೆ ಹೆಚ್ಚಿದ ದೌರ್ಜನ್ಯ, ದೇವತೆ ಸ್ಥಾನ ನೀಡುವ ದೇಶ ಭಾರತ ಎನ್ನುವುದು ಬರೀ ಭ್ರಮೆ!

ದಸರಾ ಹಬ್ಬದ ಹೊತ್ತಲ್ಲೇ ರಾಷ್ಟ್ರೀಯ ಅಪರಾಧಗಳ ದಾಖಲಾತಿ ಬ್ಯೂರೋ (ಎನ್‌ಸಿಆರ್‌ಬಿ) ಬಿಡುಗಡೆ...

RSS ಕುರಿತ ₹100 ನಾಣ್ಯ & ಅಂಚೆ ಚೀಟಿ ಬಿಡುಗಡೆ, ಸಂವಿಧಾನಕ್ಕೆ ಎಸಗಿದ ಘೋರ ಅಪಚಾರ: ಸಿಪಿಐ(ಎಂ)

ರಾಷ್ಟ್ರೀಯ ಸ್ವಯಂಸೇವಕ ಸಂಘದ (ಆರ್‌ಎಸ್‌ಎಸ್) ಶತಮಾನೋತ್ಸವ ಸಮಾರಂಭದ ಪ್ರಯುಕ್ತ ಪ್ರಧಾನಿ ನರೇಂದ್ರ...

Download Eedina App Android / iOS

X