“ಒಳ್ಳೆಯದರ ಮೂಲಕ ಕೆಟ್ಟದನ್ನು ನಾಶ ಮಾಡಿದಂತಹ ದಸರಾ ಹಬ್ಬಕ್ಕೆ ಅದರದೆ ಆದ ಇತಿಹಾಸವಿದೆ. ದಸರಾ ಕ್ರೀಡಾಕೂಟದಲ್ಲಿ ಯುವಕರಿಗೆ ತಮ್ಮ ಪ್ರತಿಭೆಯನ್ನು ಗುರುತಿಸಿಕೊಳ್ಳಲು ಈ ದಸರಾ ಕ್ರೀಡಾಕೂಟ ಉತ್ತಮ ವೇದಿಕೆ ಆಗಿದೆ” ಎಂದು ಲೊಯೋಲ ವಿಕಾಸ ಕೇಂದ್ರದ ನಿರ್ದೇಶಕರು ಫಾದರ್ ವಿನ್ಸಂಟ್ ಜೇಸನ್ ಸಲಹೆ ನೀಡಿದರು.
ಹಾವೇರಿ ಜಿಲ್ಲೆಯ ಹಾನಗಲ್ಲ ಪಟ್ಟಣದಲ್ಲಿ ಲೊಯೋಲ ವಿಕಾಸ ಕೇಂದ್ರ ಸಮಾಜ ಸೇವಾ ಸಂಸ್ಥೆ, ಯುವಸಬಲೀಕರಣ ಕ್ರೀಡಾ ಇಲಾಖೆ, ತಾಲೂಕ ಪಂಚಾಯತ್ ಹಾಗೂ ಜಿಲ್ಲಾ ಪಂಚಾಯತ್ ಸಹಯೋಗದಲ್ಲಿ 2025-26ನೇ ಸಾಲಿನ ತಾಲೂಕಾ ಮಟ್ಟದ ದಸರಾ ಕ್ರೀಡಾಕೂಟ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು.

“ದಸರಾ ಕ್ರೀಡಾಕೂಟ ಭಾಗವಹಿಸಿ ಕ್ರೀಡಾ ಪಟುಗಳು ಇದರ ಸದುಪಯೋಗ ಪಡೆದುಕೊಂಡು, ರಾಜ್ಯಮಟ್ಟದಲ್ಲಿ ಹೆಸರು ಮಾಡಬೇಕು” ಎಂದು ತಿಳಿಸಿದರು.
ದ್ವಜಾರೋಹಣವನ್ನು ನೆರವೆರಿಸಿದ ಪುರಸಭೆಯ ಅದ್ಯಕ್ಷರು ರಾಧಿಕಾ ದೇಶಪಾಂಡೆ ಮಾತನಾಡಿ, “ಕ್ರೀಡೆಯು ಮನುಷ್ಯ ದೈಹಿಕ ಮತ್ತು ಮಾನಸಿಕವಾಗಿ ಆರೋಗ್ಯದಿಂದ ಇರಲು ಸಹಕಾರಿಯಾಗುತ್ತದೆ. ಕ್ರೀಡಾ ಪಟುಗಳು ಶಿಸ್ತು ಸಂಯಮ ಬೆಳಸಿಕೊಳ್ಳಬೇಕು” ಎಂದು ತಿಳಿಸಿದರು.
ಈ ಸುದ್ದಿ ಓದಿದ್ದೀರಾ? ಗದಗ | ಮೂವರು ಶಿಕ್ಷಕರಿಗೆ ಕಲಾಶಿಸಂ ಪ್ರತಿಷ್ಠಾನದ ಮಕ್ಕಳ ಸ್ನೇಹಿ ಶಿಕ್ಷಕ ಪ್ರಶಸ್ತಿ
ಕಾರ್ಯಕ್ರಮದಲ್ಲಿ ವೇದಿಕೆಯಲ್ಲಿ ಪುರಸಭೆಯ ಉಪಾಧ್ಯಕ್ಷರು ವೀಣಾ ಗುಡಿ, ತಾಲ್ಲೂಕು ಶಿಕ್ಷಣ ಇಲಾಕೆಯ ಅಧಿಕಾರಿ ಬಸವರಾಜ ಸಂಗೂರು, ತಾಲ್ಲೂಕು ಅಧ್ಯಕ್ಷರು ಪ್ರಾಥಾಮಿಕ ಶಾಲಾ ದೈಹಿಕ ಶಿಕ್ಷಣ ಸಂಸ್ಥೆ ಗಂಗಾಧರ ಪಾಂಚಾಳ, ಪೋಲಿಸ್ ಇಲಾಖೆಯ ಸಿಬ್ಬಂದಿ ಜಗದೀಶ ಮಡಿವಾಳರ, ಯುವ ಮುಖಂಡರು ಇರ್ಫಾನ್ ಮಿಠಾಯಿಗರ್, ತಾಲ್ಲೂಕು ಕ್ರೀಡಾಂಗಣದ ಮೇಲ್ವಿಚಾರಕರು ಸಾಗರ್ ಸರ್ವದೆ, ನಾಗರಾಜ ಬಾರ್ಕಿ ಹಾಗೂ ಇರ್ಫಾನ್ ನಾಗರವಳ್ಳಿ ಪತ್ರಿಕಾ ಮಾದ್ಯಮ ಮಿತ್ರರು ಉಪಸ್ಥಿತರಿದ್ದರು. ಕಾರ್ಯಕ್ರವನ್ನು ಸಂತೋಷ ಅವರು ನಿರೂಪಿಸಿದರು ಫಕ್ಕೀರೇಶ ಗೌಡಳ್ಳಿ ಸ್ವಾಗತಿಸಿದರು, ಪೀರಪ್ಪ ಶಿರ್ಶಿ ವಂದಿಸಿದರು.