ಗಣೇಶ ವಿಸರ್ಜನೆಯ ವೇಳೆ ಗಣಪತಿಗೆ ಹೂವಿನ ಹಾರ ಹಾಕುವ ಮೂಲಕ ಧಾರವಾಡದ ಮಾಳಾಪುರ ಮಸೀದಿಯ ಮುಸ್ಲಿಂ ಬಾಂಧವರು ಬಾಂಧವರು ಭಾವೈಕ್ಯತೆ ಮೆರೆದರು.
ಸಾಮಾನ್ಯವಾಗಿ ಗಣೇಶೋತ್ಸವವನ್ನು ಹಿಂದೂ ಸಮುದಾಯದವರು ಆಚರಿಸುತ್ತಾರೆ. ಆದರೆ; ನಗರದ ಮಾಳಾಪೂರ ಮಸೀದಿ ಬಳಿ ಗಣೇಶ ಮೆರವಣಿಗೆ ಹೊರಟಾಗ ಮಸೀದಿಯವರು ಗಣಪತಿಗೆ ಭಕ್ತಿಯಿಂದ ಹೂವಿನ ಹಾರ ಹಾಕಿ ಹಿಂದೂ-ಮುಸ್ಲಿಂ ಭಾಯ್-ಭಾಯ್ ಎಂಬ ಸಂದೇಶ ಸಾರಿದ್ದಾರೆ. ಇದೇ ತರ ಕಳೆದ ಎರಡು ದಿನಗಳ ಹಿಂದೆ ಹುಬ್ಬಳ್ಳಿಯಲ್ಲಿ ನಡೆದಿತ್ತು. ಮತ್ತು ಹುಬ್ಬಳ್ಳಿಯ ಶಾಹ ಬಜಾರ್ ಹತ್ತಿರ ಗಣೇಶನ ಮೆರವಣಿಗೆ ಬಂದಾಗ ಮುಸ್ಲಿಮರ ಖವ್ವಾಲಿ ಹಾಡು ಹಾಕಿ ಹಿಂದೂಗಳು ಭಾವೈಕ್ಯತೆ ಮೆರೆದಿದ್ದರು.
ಈ ಸುದ್ಧಿ ಓದಿದ್ದೀರಾ? ಧಾರವಾಡ | ಹಣಕಾಸು ದುರುಪಯೋಗ ಆರೋಪ: ಪಿಡಿಒ ಅಬ್ದುಲ್ ರಜಾಕ್ ಮನಿಯಾರ ಅಮಾನತು
ಈ ರೀತಿಯ ಸಾಮರಸ್ಯದ ವಾತಾವರಣವು ಸಮಾಜದಲ್ಲಿರುವ ಕೋಮುವಾದಿಗಳ ಬಾಯಿ ಮುಚ್ಚಿಸುವ ಕೆಲಸ ಮಾಡಿದೆ. ಇದೇ ರೀತಿ ಎಲ್ಲರೂ ಭಾವೈಕ್ಯತೆಯಿಂದ ಬದುಕುವಂತಾಗಲಿ ಎಂದು ಸಾರ್ವಜನಿಕರು ಆಶಿಸುತ್ತಿದ್ದಾರೆ.