ಧಾರವಾಡ | ಫೋಟೊ, ವಿಡೀಯೋಗ್ರಾಫರಗಳಿಗೆ ಅಸಂಘಟಿತ ಕಾರ್ಮಿಕ ಕಾರ್ಡ್ ನೋಂದಣಿ ಅಭಿಯಾನ

Date:

Advertisements

ಸೆಪ್ಟೆಂಬರ 9 ಮತ್ತು 10 ರಂದು ಕಾರ್ಮಿಕ ಇಲಾಖೆಯ ಸವಲತ್ತುಗಳನ್ನು ಪಡೆಯಲು ಬೆಳಿಗ್ಗೆ 10 ಗಂಟೆಯಿಂದ ಸಂಜೆ 4 ಗಂಟೆವರೆಗೆ, ಧಾರವಾಡ ಜಿಲ್ಲೆಯ ಎಲ್ಲ ತಾಲೂಕಿನ ಕಾರ್ಮಿಕ ಇಲಾಖೆಯ ಕಛೇರಿಯಲ್ಲಿ ಪೋಟೋಗ್ರಾಫರ್‌ಗಳಿಗೆ ಕಾರ್ಮಿಕ ಇಲಾಖೆಯಿಂದ ಉಚಿತವಾಗಿ ನೋಂದಾಯಿಸಿಕೊಂಡು ಅಸಂಘಟಿತ ಕಾರ್ಮಿಕರ ಕಾರ್ಡ್‌ಗಳನ್ನು ಮಾಡಿಕೊಡಿಕೊಳ್ಳಲು ಅವಕಾಶ ಕಲ್ಪಿಸಲಾಗಿದೆ.

ಈ ಕುರಿತು ಸೆ. 5ರಂದು ಕಾರ್ಮಿಕ ಇಲಾಖೆ, ಸಮಾಜ ಕಲ್ಯಾಣ ಇಲಾಖೆಯ ಅಧಿಕಾರಿ ಮತ್ತು ಧಾರವಾಡ ಜಿಲ್ಲೆಯ ಜಿಲ್ಲಾ ಅಧ್ಯಕ್ಷರ ಹಾಗೂ ಎಲ್ಲ ತಾಲೂಕಿನ ಛಾಯಾಗ್ರಾಹಕ ಸಂಘಗಳ ಅಧ್ಯಕ್ಷರ ಸಭೆಯನ್ನು ಧಾರವಾಡ ವಾರ್ತಾ ಇಲಾಖೆಯ ಸಭಾಭವನದಲ್ಲಿ ಆಯೋಜಿಸಿದ್ದರು.

ಈಗಾಗಲೇ ಅಸಂಘಟಿತ ಕಾರ್ಮಿಕ ಕಾರ್ಡ್ ಹೊಂದಿರುವ ಛಾಯಾಗ್ರಾಹಕರು ಸಹ ಸೆಪ್ಟೆಂಬರ 9 ಮತ್ತು 10 ರಂದು ತಮ್ಮ ತಾಲೂಕಿನ ಕಾರ್ಮಿಕ ಇಲಾಖೆಯ ಕಚೇರಿಗೆ ಭೇಟಿ ನೀಡಿ, ತಮ್ಮ ನೋಂದಣಿಯನ್ನು ದೃಢಪಡಿಸಿಕೊಳ್ಳಬೇಕು. ಹೊಸದಾಗಿ ನೋಂದಣಿಗೆ ಛಾಯಾಗ್ರಾಹಕರು ತಮ್ಮ ಒಂದು ಪಾಸ್‍ಪೋರ್ಟ ಸೈಜ್ ಫೋಟೊ, ಬ್ಯಾಂಕ್ ಪಾಸ್‍ಬುಕ್ ಝರಾಕ್ಸ್ ಪ್ರತಿ ಮತ್ತು ಆಧಾರ ಕಾರ್ಡ್ ಪ್ರತಿ ತೆಗೆದುಕೊಂಡು ಬರಬೇಕು. ತಮ್ಮ ಕುಟುಂಬದ ಪಡಿತರ ಚೀಟಿ ಇದ್ದರೆ ಅದನ್ನು ಸಹ ತರಬಹುದು.

ಜಿಲ್ಲೆಯ ಹುಬ್ಬಳ್ಳಿ, ಧಾರವಾಡ, ಅಳ್ನಾವರ, ಕಲಘಟಗಿ, ನವಲಗುಂದ, ಅಣ್ಣಿಗೇರಿ ಹಾಗೂ ಕುಂದಗೋಳ ತಾಲೂಕಿನ ಹಿರಿಯ ಕಾರ್ಮಿಕ ನಿರೀಕ್ಷಕರ ಕಚೇರಿಯಲ್ಲಿ ಅಸಂಘಟಿತ ಕಾರ್ಮಿಕರ ನೋಂದಣಿ ಪ್ರಕ್ರೀಯೆ ಜರುಗಲಿದೆ.

ಈ ಸುದ್ಧಿ ಓದಿದ್ದೀರಾ? ಧಾರವಾಡ | ಸೆ.‌ 13ರ ‘ರಾಷ್ಟ್ರೀಯ ಲೋಕ ಅದಾಲತ್’ ಕಾರ್ಯಕ್ರಮದ ಸದುಪಯೋಗ ಆಗಲಿ: ಬಿ.ಎಸ್. ಭಾರತಿ

ಕಾರ್ಮಿಕ ಇಲಾಖೆಯ ಈ ಪ್ರಯೋಜನವನ್ನು ಜಿಲ್ಲೆಯ ಎಲ್ಲ ಫೋಟೊಗ್ರಾಫರ್ಸ್, ವಿಡೀಯೋಗ್ರಾಫರ್ಸ್‍ಗಳು ಪಡೆದುಕೊಳ್ಳಬೇಕು. ಹೆಚ್ಚಿನ ಮಾಹಿತಿಗಾಗಿ ಮಾರಿಕಾಂಬಾ, ಹಿರಿಯ ಕಾರ್ಮಿಕ ನಿರೀಕ್ಷರ (9480068995) ಹುಬ್ಬಳ್ಳಿ, ಅಕ್ಬರ ಮುಲ್ಲಾ, ಹಿರಿಯ ಕಾರ್ಮಿಕ ನಿರೀಕ್ಷರು (9964178078) ಧಾರವಾಡ, ಹಿರಿಯ ಕಾರ್ಮಿಕ ನಿರೀಕ್ಷರಾದ ಲತಾ, ಕಲಘಟಗಿ (9986594945), ಮೀನಾಕ್ಷಿ ಶಿಂದಿಹಟ್ಟಿ, ಅಳ್ನಾವರ (6363520066), ಭುವನೇಶ್ವರಿ ಕೋಟಿಮಠ, ಧಾರವಾಡ (7022527066), ಅಕ್ರಂ ಅಲ್ಲಾಪೂರ, ಹುಬ್ಬಳ್ಳಿ ಶಹರ (9606366429), ಅಶೋಕ ಒಡಿಯರ್, ಹುಬ್ಬಳ್ಳಿ ಗ್ರಾಮೀಣ (70190101998, 9019991255), ರಜನಿ ಹಿರೇಮಠ, ಕುಂದಗೋಳ (9620629013), ಸಂಗೀತಾ ಬೆನಕನಕೊಪ್ಪ, ಅಣ್ಣಿಗೇರಿ ಮತ್ತು ನವಲಗುಂದ (9620727370) ಹಾಗೂ ಫೋಟೊಗ್ರಾಫರ್ಸ್ ಸಂಘದ ಪ್ರಮುಖರಾದ ದತ್ತಪ್ರಸಾದ ವೆಂಕಟೇಶ (9845128653), ಕಿರಣ ಬಾಕಳೆ (9448136285) ಮತ್ತು ಪ್ರಭಯ್ಯ ಲಕ್ಕುಂಡಿಮಠ (9986268406) ಅವರನ್ನು ಸಂಪರ್ಕಿಸಬಹುದೆಂದು ವಾರ್ತಾ ಇಲಾಖೆಯ ಸಹಾಯಕ ನಿರ್ದೇಶಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

eedina
ಈ ದಿನ ಡೆಸ್ಕ್‌
Website |  + posts

ಈ ಮಾಧ್ಯಮ ನಿಮ್ಮದು. ನಿಮ್ಮ ಬೆಂಬಲವೇ ನಮ್ಮ ಬಲ. ವಂತಿಗೆ ನೀಡುವುದರ ಮೂಲಕ ಕೈಜೋಡಿಸಿ, ಸತ್ಯ ನ್ಯಾಯ ಪ್ರೀತಿಯ ಮೌಲ್ಯಗಳನ್ನು ಹಂಚಲು ಜೊತೆಯಾಗಿ. ಸಹಾಯ ಅಥವಾ ಬೆಂಬಲ ನೀಡಲು ದಯವಿಟ್ಟು +91 9035362958 ಅನ್ನು ಸಂಪರ್ಕಿಸಿ.

ಪೋಸ್ಟ್ ಹಂಚಿಕೊಳ್ಳಿ:

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಗದಗ | ಸರಕಾರ ದೇವದಾಸಿ ಮಹಿಳೆಯರ ಕುಟುಂಬ ಸದಸ್ಯರನ್ನು ಗಣತಿ ಪಟ್ಟಿಗೆ ಸೇರಿಸುವ ಕ್ರಮ ಸ್ವಾಗತ

"ಸರಕಾರ ಈಚೆಗೆ ದೌರ್ಜನ್ಯದ ದೇವದಾಸಿ ಪದ್ಧತಿಗೆ ಪರಿಣಾಮಕಾರಿ ಕ್ರಮ ಕೈಗೊಳ್ಳಲು ದೇವದಾಸಿ...

ಗದಗ | ತಹಸೀಲ್ದಾರ ಕಚೇರಿಗಳಲ್ಲಿ ಅಧಿಕಾರಿಗಳ ಬ್ರಹ್ಮಾಂಡ ಭ್ರಷ್ಟಾಚಾರ ಆರೋಪ

"ಜಿಲ್ಲೆಯ ಎಲ್ಲಾ ತಾಲೂಕ ತಹಶೀಲ್ದಾರ್ ಕಚೇರಿ ಹಾಗೂ ಹೋಬಳಿಗಳಲ್ಲಿ ವೃಧ್ಯಾಪ್ಯ ವೇತನ,...

ಜನಮನ ಗೆದ್ದ ತುಮಕೂರು ದಸರಾ ಉತ್ಸವ : ಡಾ. ಜಿ.ಪರಮೇಶ್ವರ

 ತುಮಕೂರು ದಸರಾ ಉತ್ಸವವು ನಾಡಿನಾದ್ಯಂತ ಜನರ ಮನಸ್ಸನ್ನು ಗೆಲ್ಲುವ ಮೂಲಕ ಐತಿಹಾಸಿಕ...

Download Eedina App Android / iOS

X